ಮೇಕೆದಾಟು ಯೋಜನೆಯ ಉದ್ದೇಶವೇ ಜನರಿಗೆ ಅನುಕೂಲವಾಗಬೇಕು ಎನ್ನುವುದು . ಆದರೆ, ಕಾಂಗ್ರೆಸ್ಸಿಗರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆಗೆ ಲಾಭವಾಗುವುದಕ್ಕಿಂತ ತಮಗೆ ಲಾಭವಾಗಲಿ ಎನ್ನುವುದು  ಕಾಂಗ್ರೆಸ್ಸಿಗರ ದುರಾಲೋಚನೆಯಾಗಿತ್ತು. ಇದು ನಾಚಿಕೆಗೇಡಿನ ಸಂಗತಿ. ಈ ಹಿಂದೆ ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ ಎಂಬ ನಡಿಗೆಯನ್ನು ಮಾಡಿದರು. ಈ ವೇಳೆ ನೀರು ಹಿಡಿದು ಶಪಥ ಮಾಡಿ ವರ್ಷಕ್ಕೆ 10 ಸಾವಿರ ಕೋಟಿ ರು. ಕೊಡುತ್ತೇವೆ ಎಂದು ವಾಗ್ದಾನ ಮಾಡಿದರು. ಐದು ವರ್ಷ ಇವರ […]

ಕರ್ನಾಟಕ ನೆಲ ಜಲ ರಕ್ಷಣಾ ಸಮಿತಿ ಆಯೋಜಿಸಿದ್ದ ಮೇಕೆದಾಟು ಪರ, ಅಣೆಕಟ್ಟು ವಿರುದ್ಧ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಕೆದಾಟು ನಮಗೆ ಬೇಕು ಎಂದಾದರೆ ಅಣೆಕಟ್ಟು ಎನ್ನಬೇಕು. ಅಲ್ಲಿ ಅಣೆಕಟ್ಟು ಕಟ್ಟುವುದರಿಂದ ಸುಮಾರು 1200 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗುತ್ತೆ. ಲಕ್ಷಾಂತರ ಮರಗಳು ಹಾಳುಗೆಡವುವ ಇಂಥ ಯೋಜನೆ ನಮಗೆ ಬೇಕಿಲ್ಲ ಎಂದು ಅಭಿಪ್ರಾಯಪಟ್ಟರು. ಅಣೆಕಟ್ಟು ಕಟ್ಟುವುದರಿಂದ ಯಾರಿಗೆ ಅನುಕೂಲ ಎಂದು ಪ್ರಶ್ನಿಸಿದ ಅವರು, ಅಣೆಕಟ್ಟು ನಿರ್ಮಾಣದಿಂದ ಕೆಲ ರಾಜಕಾರಿಣಿಗಳಿಗೆ ಗುತ್ತಿಗೆದಾರರಿಗೆ […]

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ಶೇಕರಣಾ ಜಲಾಶಯ ಯೋಜನೆ ಜೀವಂತವಾಗಿದ್ದು, ಕಾರ್ಯಗತಗೊಳಿಸಲು ಬದ್ಧವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಭಾಗದಲ್ಲಿ ನೀರನ್ನು ಸಂಗ್ರಹಿಸಲು ಯಾವುದೇ ಆಣೆಕಟ್ಟು ಇಲ್ಲ. ಈ ಹಿನ್ನಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಶೇಖರಣಾ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ನಾವು ತಮಿಳುನಾಡು ರಾಜ್ಯಕ್ಕೆ ಮಾಸಿಕವಾಗಿ ನಿಗದಿಪಡಿಸಿದ ವಾರ್ಷಿಕ […]

Advertisement

Wordpress Social Share Plugin powered by Ultimatelysocial