ವಿಜಯನಗರ ಜಿಲ್ಲೆಯ ಕಲ್ಲಹಳ್ಳಿ ಚೆಕ್‌ ಪೋಸ್ಟ್‌ ಬಳಿ ಸೋಮವಾರ ವಾಹನವೊಂದರಲ್ಲಿ ದಾಖಲೆ ಇಲ್ಲದೆ ಸಾಗುಸುತ್ತಿದ್ದ 5ಲಕ್ಷ ರೂಪಾಯಿ ಹಣವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು ಜಿಲ್ಲಾಡಳಿತ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ, ಚೆಕ್‌ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳುತ್ತಿದೆ. ಸೋಮವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5ಲಕ್ಷ ರೂಪಾಯಿ ಹಣವನ್ನು ತಾಲೂಕಿನ ಕಲ್ಲಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾಹನವೊಂದು ಸಂಡೂರಿನಿಂದ ಜಿಲ್ಲಾ ಕೇಂದ್ರ ಹೊಸಪೇಟೆ ಕಡೆ […]

ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಜನಾರ್ಧನರಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಮುಂಬರುವ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಈಗಿನ ಸ್ವ ಜಿಲ್ಲೆಯಲ್ಲಿ ರಡ್ಡಿ ರಾಜಕೀಯ ಬಗ್ಗೆ ಬಿಜೆಪಿ ಮುಖಂಡರಲ್ಲಿ ಸ್ಪಷ್ಠತೆ ಇಲ್ಲ. ಎಲ್ಲವನ್ನು ಕಾದು ನೋಡುವುದಾಗಿ ಹೇಳಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹೊಸ ಪಕ್ಷ ಕಟ್ಟಿ ಪೀಕಲಾಟ ಮಾಡಿಕೊಂಡಿದ್ದಾರೆ, ಕಲ್ಯಾಣ ಕರ್ನಾಟ ಪ್ರಗತಿ ಪಕ್ಷಕ್ಕೆ ಚುನಾವಣೆಗೆ ಪ್ರಬಲ ಅಭ್ಯರ್ಥಿಗಳು ಸಿಗದೆ […]

ಭಾರತದಲ್ಲಿ ನಿವೃತ್ತಿ ಯೋಜನೆ ಅತೀ ಮುಖ್ಯವಾಗಿದೆ. ನಮ್ಮ ನಿವೃತ್ತಿ ಸಂದರ್ಭದಲ್ಲಿ ನಾವು ಹಣಕಾಸು ಸುರಕ್ಷತೆಯನ್ನು ಹೊಂದುವುದು ಮತ್ತು ಆರಾಮದಾಯಕವಾಗಿ ಜೀವನವನ್ನು ಕಳೆಯಬೇಕಾದರೆ ನಾವು ನಿವೃತ್ತಿ ಯೋಜನೆಯನ್ನು ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ನಿವೃತ್ತಿ ಸಂದರ್ಭದಲ್ಲಿ ನಾವು ಕಷ್ಟ ಪಡುವುದಕ್ಕಿಂತ, ನಿವೃತ್ತಿಗೂ ಮುನ್ನವೇ ಸರಿಯಾದ ಪ್ಲ್ಯಾನ್ ಅನ್ನು ಮಾಡಿಕೊಂಡು, ಹೂಡಿಕೆ ಮಾಡಿಕೊಳ್ಳುವುದು ಉತ್ತಮವಾಗಿದೆ.ಪ್ರಸ್ತುತ ಎಲ್ಲವೂ ಆಧುನಿಕವಾಗಿದೆ. ಆದ್ದರಿಂದಾಗಿ ನಿವೃತ್ತಿಗಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ. ನಿವೃತ್ತಿ ಸಂದರ್ಭದಲ್ಲಿ ತಮಗೆ ಅಗತ್ಯವಿರುವ ಹಣ ಇದೆಯೇ ಎಂದು ತಿಳಿಯಲು […]

ಬೆಂಗಳೂರು: ಭಾರತವು ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಅಮೆರಿಕದ ಹಣಕಾಸು ಸಚಿವೆ ಜಾನೆಟ್ ಯೆಲನ್ ಹೇಳಿದ್ದು, ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ‘ಫ್ರೆಂಡ್‌ಶೋರಿಂಗ್‌’ ನೀತಿಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.ಜಿ20 ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆಯ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ತಂತ್ರಜ್ಞಾನ ಉದ್ದಿಮೆಗಳ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡಿದರು.ತಂತ್ರಜ್ಞಾನ ವಲಯದಲ್ಲಿ ನಮ್ಮ ಒಪ್ಪಂದವನ್ನು ಬಲಪಡಿಸಲು ನಾನು ಉತ್ಸುಕಳಾಗಿದ್ದೇನೆ. ನಮ್ಮ ಪೂರೈಕೆ ವ್ಯವಸ್ಥೆಯನ್ನು […]

  ಎಚ್. ಎಸ್. ಶ್ರೀಮತಿ ವಿಶ್ವದ ಶ್ರೇಷ್ಠ ಸ್ತ್ರೀಸಂವೇದನಾ ಚಿಂತನೆಗಳನ್ನು ಕನ್ನಡದ ಓದುಗರಿಗೆ ತಂದು ಕೊಟ್ಟಿರುವ ಮಹತ್ವದ ಬರಹಗಾರ್ತಿ.ಶ್ರೀಮತಿ 1950ರ ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ ಜನಿಸಿದರು. ತಂದೆ ಎಚ್.ಕೆ. ಸೂರ್ಯನಾರಾಯಣ ಶಾಸ್ತ್ರಿ. ತಾಯಿ ಲಲಿತ.ಬೆಂಗಳೂರಿನಲ್ಲಿ ಅಧ್ಯಾಪನ ವೃತ್ತಿ ನಡೆಸಿದ ಶ್ರೀಮತಿ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶ್ರೀಮತಿ ಅವರ ಸಾಹಿತ್ಯ ಕೃಷಿಯಲ್ಲಿ ಸ್ತ್ರೀ ಸಂವೇದನೆಗಳು ಮತ್ತು ಸ್ರೀವಾದವೇ ಪ್ರಮುಖ ವಸ್ತು. ಗೌರಿದುಃಖ, ಹೆಣ್ಣು […]

  ರವಿಶಂಕರ್ ವ್ಯಾಸ್ ಅವರು ರವಿಶಂಕರ್ ಮಹಾರಾಜ್ ಎಂದು ಚಿರಪರಿಚಿತರಾದ‍ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸೇವಕರು ಮತ್ತು ಗಾಂಧಿವಾದಿ. ರವಿಶಂಕರ್ ವ್ಯಾಸ್ ಅವರು 1884ರ ಫೆಬ್ರವರಿ 25, ಮಹಾಶಿವರಾತ್ರಿ ದಿನದಂದು ಈಗ ಭಾರತದ ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿರುವ ರಾಧು ಗ್ರಾಮದಲ್ಲಿ ಜನಿಸಿದರು. ತಂದೆ ಪಿತಾಂಬರ ಶಿವರಾಮ್ ವ್ಯಾಸ್. ತಾಯಿ ನತಿಬಾ. ಇವರು ವಡಾರಾ ಬ್ರಾಹ್ಮಣ ರೈತ ಕುಟುಂಬಕ್ಕೆ ಸೇರಿದವರು. ಅವರ ಕುಟುಂಬದವರು ಮಹೇಮದವಾಡ ಸಮೀಪದ ಸರ್ಸವಾನಿ ಗ್ರಾಮದವರು. ತಂದೆ […]

ಬೆಂಗಳೂರು : ಚೆನೈ- ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.ಶನಿವಾರ ಬೆಳಗ್ಗೆ ಘಟನೆ ನಡೆದಿದೆ. ಇದರ ಪರಿಣಾಮ ರೈಲಿನ ಸಿ4 ಹಾಗೂ ಸ5 ಬೋಗಿಯ ಆರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಮತ್ತು ಇತರರಿಗೆ ಯಾವುದೇ ಗಾಯವಾಗಿಲ್ಲ.ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ರೈಲು (ಸಂಖ್ಯೆ 20607) ಕೆ.ಆರ್‌.ಪುರಂ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ ಹೊರಟಿತ್ತು. ಆಗ ಕಲ್ಲು ತೂರಾಟ […]

  ಮೀರಾ ಸತ್ಯಮೂರ್ತಿ ಯಶಸ್ವೀ ಸಾಫ್ಟ್‌ವೇರ್ ತಂತ್ರಜ್ಞರು, ಮಾನಸಿಕ ಸಲಹೆಗಾರ್ತಿ ಮತ್ತು ಬರಹಗಾರ್ತಿ. ಅವರಿಗಿರುವ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಆಸಕ್ತಿಗಳ ಆಳವೂ ಅಪಾರವಾದದ್ದು. ಫೆಬ್ರುವರಿ 25, ಮೀರಾ ಸತ್ಯಮೂರ್ತಿ ಅವರ ಜನ್ಮದಿನ. ಬೆಂಗಳೂರಿನ ಎಂ.ಎಲ್.ಎ. ಶಾಲೆಯಲ್ಲಿ ಓದಿದ ಅವರು ಮುಂದೆ ಬಿಎಮ್ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಪದವಿ ಪಡೆದರು. ಅವರಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲೂ ಪರಿಣತಿ ಇದ್ದು, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳ ಕುರಿತೂ ಅಪಾರ ಒಲವು ಹೊಂದಿದ್ದಾರೆ.ಮೀರಾ […]

  ತ. ಸು. ಶಾಮರಾಯರ ‘ಮೂರು ತಲೆಮಾರು’ಮೊನ್ನೆ ಟಿ. ಎಸ್. ವೆಂಕಣ್ಣಯ್ಯನವರನ್ನು ಅವರ ಸ್ಮರಣೆ ದಿನದಂದು ಅವರ ಕುರಿತು ಪ್ರಸ್ತಾಪಿಸಿದ್ದೆ.ಅವರ ಕುರಿತು ಎಷ್ಟು ಚಿಂತಿಸಿದರೂ, ಓಹ್ ಅವರ ಎತ್ತರದ ಆಳದ ಕುರಿತು ಇನ್ನಷ್ಟು ಅರಸಬೇಕು ಅನಿಸುತ್ತದೆ. ಈ ನಿಟ್ಟಿನಲ್ಲಿ ವೆಂಕಣ್ಣಯ್ಯನವರ ಕಿರಿಯ ಸಹೋದರ ತ. ಸು. ಶಾಮರಾಯರ ‘ಮೂರು ತಲೆಮಾರು’ ಅಮೂಲ್ಯ ಆಸರೆ.’ಮೂರು ತಲೆಮಾರು’ ತ. ಸು ಶಾಮರಾಯರು ಹೇಳಿರುವ ಅವರ ವಂಶದ ಮೂರು ತಲೆಮಾರುಗಳ ಚರಿತ್ರೆ. ಮೊದಲನೆಯ ತಲೆಮಾರಿನ […]

ಯಾದಗಿರಿ : ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟವಾಗಿ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದಲ್ಲದೆ, 2 ಲಕ್ಷ ರೂ.ನಗದು ಭಸ್ಮವಾದ ದುರ್ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೊರಭಾಗದ ಸಾಯಿನಗರದಲ್ಲಿ ಈ ದುರಂತ ಸಂಭವಿಸಿದೆ. ಆಂಧ್ರಮೂಲದ ಟಿ.ಮಧು ಅವರಿಗೆ ಸೇರಿದ್ದ ಗುಡಿಸಲು ಬೆಂಕಿಗಾಹುತಿಯಾಗಿದೆ.ಸೀಲಿಂಡರ್ ಸ್ಪೋಟದಿಂದ ಗುಡಿಸಲು ಹೊತ್ತಿ ಉರಿಯಿತು. ಸ್ನಾನ ಮಾಡಲು ನೀರು ಕಾಯಿಸಲು ಇಟ್ಟಾಗ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಮಧು ಎಂಬುವರು ನೀರು ಕಾಯಿಸಲು ಇಟ್ಟು ಹೊರಗಡೆ ಬಂದಿದ್ದಾಗ […]

Advertisement

Wordpress Social Share Plugin powered by Ultimatelysocial