ಬಾರಿ ಅಗ್ನಿ ದುರಂತ : 46 ಮಂದಿ ಸಜೀವ ದಹನ

ತೈವಾನ್: ತೈವಾನ್ ನಲ್ಲಿ ಬಾರಿ ದುರಂತ ಸಂಭವಿಸಿದೆ. ಗುರುವಾರ ಮುಂಜಾನೆ ಸಂಭವಿಸಿದ ಈ ಅಗ್ನಿ ದುರಂತದಲ್ಲಿ 46 ಜನರು ಸಜೀವವಾಗಿ ದಹನವಾಗಿದ್ದಾರೆ. 79 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಈ ಪೈಕಿ 14 ಜನರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ತೈವಾನ್ ನ ಕೌಹ್ಸಿಯುಂಗ್ ನಗರದ 13 ಅಂತಸ್ತಿನ ಟವರ್ ಬ್ಲಾಕ್ ನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ತಿಳಿಸಿದೆ. 46 ಜನರು ಬೆಂಕಿಯಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಕ್ಷಣಾ ತಂಡದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ, ಅಗ್ನಿ ಅವಘಡದಲ್ಲಿ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದರು. ಬೆಂಕಿಯು ಹೊತ್ತಿಕೊಳ್ಳುವ ಮೊದಲು ಬಾಯ ಸ್ಫೋಟ ಕೇಳಿಸಿತು ಎಂದು ಹತ್ತಿರದ ನಿವಾಸಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಬೇಕಾಯಿತು ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ ಮತ್ತು ಕಟ್ಟಡದ ಕೆಳಗಿನ ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

₹ 5 ಲಕ್ಷದೊಳಗಿನ ಕಾಮಗಾರಿಗಿಲ್ಲ ಇ-ಟೆಂಡರ್

Thu Oct 14 , 2021
ಶಿವಮೊಗ್ಗ: ₹ 5 ಲಕ್ಷದ ಒಳಗಿನ ಕಾಮಗಾರಿಗಳಿಗೆ ಗುತ್ತಿಗೆ ನೀಡಲು ಇ-ಟೆಂಡರ್‌ ರದ್ದು ಮಾಡಿ, ಭೌತಿಕವಾಗಿ ಕಚೇರಿಯಲ್ಲೇ ಟೆಂಡರ್ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸುವಂತೆ ಪ್ರಸ್ತಾವ ಸಲ್ಲಿಸಲು ಬುಧವಾರ ಮಲವಗೊಪ್ಪದಲ್ಲಿ ನಡೆದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ 101ನೇ ಸದಸ್ಯ ಮಂಡಳಿ ಸಭೆ ಒಮ್ಮತದ ನಿರ್ಣಯ ಅಂಗೀಕರಿಸಿತು. ಇ-ಟೆಂಡರ್ ಅನುಸಾರ ದೇಶದ ಯಾವುದೇ ಮೂಲೆಯಲ್ಲಿ ಗುತ್ತಿಗೆದಾರ ಕುಳಿತುಕೊಂಡು ಬಿಡ್ ಮಾಡಬಹುದು. ಬಿಡ್ ಮಾಡುವ ಗುತ್ತಿಗೆದಾರರು ಕಡಿಮೆ ಬೆಲೆ ನಮೂದಿಸುತ್ತಾರೆ. ನಂತರ ಉಪ […]

Advertisement

Wordpress Social Share Plugin powered by Ultimatelysocial