ತಾಜ್‍ಮಹಲ್ ನಿರ್ಮಿಸಲು ಶಾಜಹಾನ್ ಕೊಟೇಶನ್ ಪಡೆದಿರಲಿಲ್ಲ ಎಂದ ಗೋವಾ ಸಚಿವ!

ಪಣಜಿ: ಇಲ್ಲಿನ ಆಕರ್ಷಕ ಕಲಾ ಅಕಾಡೆಮಿ ಕಟ್ಟಡದ ನವೀಕರಣ ಕಾಮಗಾರಿ ಹಂಚಿಕೆಗೆ ಇಲಾಖೆ ಕೈಗೊಂಡ ಕ್ರಮವನ್ನು ಸಮರ್ಥಿಸುವ ಭರದಲ್ಲಿ ಗೋವಾ ಕಲಾ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ್ ಗೌಡೆ ಬುಧವಾರ, “ಶಾಜಹಾನ್ ತಾಜ್‍ಮಹಲ್ ನಿರ್ಮಿಸಲು ಕೊಟೇಶನ್ ಪಡೆದಿದ್ದರೇ” ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ರಾಜಧಾನಿಯ ಕಲಾ ಅಕಾಡೆಮಿ ಕಟ್ಟಡವನ್ನು 49 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲು ಕಾರ್ಯಾದೇಶ ನೀಡುವ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ) ವಿಜಯ್ ಸರದೇಸಾಯಿ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಆಪಾದಿಸಿದಾಗ, ಸಚಿವರು ಮೇಲಿಂತೆ ಪ್ರಶ್ನಿಸಿದರು.

“ತಾಜ್‍ಮಹಲ್ ಸದಾ ಕಾಲ ಇರುವಂಥದ್ದು ಹಾಗೂ ಸುಂದರ; ಏಕೆಂದರೆ ಶಾಜಹಾನ್ ಇದನ್ನು ಆಗ್ರಾದಲ್ಲಿ ನಿರ್ಮಿಸಲು ಕೊಟೇಶನ್ ಪಡೆದಿರಲಿಲ್ಲ. ನನ್ನ ಘನ ಸಹೋದ್ಯೋಗಿಗಳು ನಿಶ್ಚಿತವಾಗಿಯೂ ಆಗ್ರಾ ತಾಜ್‍ಮಹಲ್‍ಗೆ ಭೇಟಿ ನೀಡಿರುತ್ತಾರೆ. ಇದರ ನಿರ್ಮಾಣ 1632ರಲ್ಲಿ ಆರಂಭವಾಗಿ 1653ರಲ್ಲಿ ಮುಗಿಯಿತು. ಆದರೆ ಇಂದಿಗೂ ಸುಂದರವಾಗಿ ಕಾಣುತ್ತಿದೆ” ಎಂದು ಹೇಳಿದರು.

“ನೀವು ಏಕೆ ಹಾಗೆ ಯೋಚಿಸುತ್ತೀರಿ? ಏಕೆಂದರೆ ಶಾಜಹಾನ್ ತಾಜ್‍ಮಹಲ್ ನಿರ್ಮಿಸಲು ಕೊಟೇಶನ್ ಆಹ್ವಾನಿಸಿರಲಿಲ್ಲ. ಆದರೂ ಅದು 390 ವರ್ಷ ಕಳೆದರೂ ಹಾಗೆಯೇ ಉಳಿದಿದೆ” ಎಂದು ಸಚಿವರು ವಿವರಿಸಿದರು.

ಕೇಂದ್ರೀಯ ಲೋಕೋಪಯೋಗಿ ಇಲಾಖೆ ಮಾರ್ಗಸೂಚಿಯನ್ನು ಉಲ್ಲಂಘಿಸಿ ಟೆಕ್‍ಟಾನ್ ಬಿಲ್ಡ್‍ಕಾನ್ ಪ್ರೈವೇಟ್ ಕಂಪನಿಗೆ ಕಾಮಗಾರಿ ನೀಡಲಾಗಿದೆ ಎಮದು ಸರದೇಸಾಯಿ ಆಪಾದಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Мост бет обзор сайта Разбираемся в букмекерской конторе MostBe

Thu Jul 14 , 2022
Мост бет обзор сайта Разбираемся в букмекерской конторе MostBet Как работает букмекер MostBet Что предлагает игроку MostBet официальный сайт Content Как работает букмекер MostBet Как получать бонусы от Мост Бет Как получить доступ к MostBet live Как выглядит MostBet официальный сайт Что предлагает игроку MostBet официальный сайт Разбираемся в букмекерской […]

Advertisement

Wordpress Social Share Plugin powered by Ultimatelysocial