ದಲಿತ ಮಹಿಳಾ ಅಧಿಕಾರಿಗೆ ಅವಮಾನ ಮಾಡಿದ ಪ್ರಭಾಕರ ಕೋರೆಗೆ ಸೂಕ್ತ ಕ್ರಮ ಜರಗಿಸಿ: ಸುಬಾಷ ಘೋಡಕೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿಯಾದ ವಿದ್ಯಾವತಿ ಭಜಂತ್ರಿ ಮಹಿಳಾ ಅಧಿಕಾರಿ, ದಲಿತ ಮಹಿಳೆ ಇವರಿಗೆ ವಿನಾಕಾರಣ ಅವಮಾನ ಮಾಡಿದ ಪ್ರಭಾಕರ ಕೋರೆ ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಕ್ರೋಶ.

ಬೆಳಗಾವಿ ಕನ್ನಡ ಭವನ ಉದ್ಘಾಟನೆ ಸಮಾರಂಭದಲ್ಲಿ ಕಟ್ಟಡದ ವೀಕ್ಷಣೆ ಮಾಡುವ ವೇಳೆ ಅನುದಾನದ ಲೆಕ್ಕ ಸರಿನೀಡಿಲ್ಲ ಎಂದು ಕೋರೆ ನುಡಿದಿದ್ದಾರೇ.

ಶ್ರೀಮತಿ ವಿದ್ಯಾವತಿ ಇವರು ಈ ಕಟ್ಟಡವನ್ನು ನಮ್ಮ ಇಲಾಖೆಗೆ ಬಿಟ್ಟುಕೊಡಿ ನಾವು ನಮ್ಮ ಇಲಾಖೆಯಿಂದ ಕೊಟ್ಯಾಂತರ ಹಣವನ್ನು ನೀಡಿದ್ದೇವೆ. ಇದಕ್ಕೆ ನಮ್ಮ ಇಲಾಖೆಯ ಹೆಸರನ್ನು ಇಡಬೇಕು ಎಂದಿದ್ದಕ್ಕೆ ನಿಮ್ಮಪ್ಪನ ಮನೆಯದಾ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುದು ಜಿಲ್ಲಾಧಿಕಾರಿಗಳಿಗೆ ಕೈ ಸೊನ್ನೆ ಮೂಲಕ ವಿದ್ಯಾವತಿ ಇವರನ್ನು ಹೊರಗೆ ಹಾಕಿ ಅಂತಾ ಪ್ರಭಾಕರ ಕೊರೆ ಹೇಳಿದ ಮಾರ್ಗದರ್ಶನದಂತೆ ಜಿಲ್ಲಾಧಿಕಾರಿ ವಿದ್ಯಾವತಿ ಇವರನ್ನು ಹೊರಗೆ ಹಾಕಿದ್ದು ಅಕ್ಷಮ್ಯ ಅಪರಾದವಾಗಿದ್ದು, ಇದರಿಂದ ದಲಿತ ಮಹಿಳಾ ಅಧಿಕಾರಿಗೆ ಅಗೌರವ ಸೂಚಿಸಿದ್ದು ಸೂಕ್ತವಲ್ಲ.

ಪ್ರಭಾಕರ ಕೋರೆ ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ರಾಮದುರ್ಗ ತಹಶೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿದ ರಾಮದುರ್ಗ ಜನಪರ ಟ್ರಸ್ಟ್.

ಈ ಸಂದರ್ಭದಲ್ಲಿ ಮಾತನಾಡಿದ ರಾಮದುರ್ಗ ಜನಪರ ಟ್ರಸ್ಟನ ಅಧ್ಯಕ್ಷ ಸುಭಾಸಚಂದ್ರ ಘೋಡಕೆ

ಸಾರ್ವಜನಿಕ ಸ್ಥಳದಲ್ಲಿ ವಿದ್ಯಾವತಿ ಭಜಂತ್ರಿ ಇವರಿಗೆ ಅವಹೇಳನಕಾರಿ ಮಾತನಾಡಿದ ಪ್ರಭಾಕರ ಕೋರೆ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲ ಮಾಡಿಕೊಳ್ಳಬೇಕು ಹಾಗೂ ಬೆಳಗಾವಿಯ ಜಿಲ್ಲಾಧಿಕಾರಿಯಾದ ನಿತೇಶ ಪಾಟೀಲ ಇವರನ್ನು ಅಮಾನತ್ತು ಮಾಡಬೇಕು.ಒಂದು ವೇಳೆ ಮಾಡದಿದ್ದ ಪಕ್ಷದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿಯನ್ನು ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ
ದಲಿತ ಮುಖಂಡ ರಮೇಶ ರಾಯಬಾಗ,ಅಭಿ ಮುನವಳ್ಳಿ, ಮಂಜುನಾಥ್ ತೋರಗಲ್ಲ, ಮಹೇಶ ದೊಡಮನಿ, ಸುಜಿರ ಪಟ್ಟಣ, ಯಲ್ಲಪ್ಪ ತೋರಗಲ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕಳಸಾ ಬಂಡೂರಿ ಯೋಜನೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಬಿಜೆಪಿಯಿಂದ ಸಿಹಿ ಹಂಚಿ ಸಂಭ್ರಮಾಚರಣೆ.

Thu Dec 29 , 2022
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಳಸಾ-ಬಂಡೂರಿ ವಿಸ್ತ್ರತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಬಿಜೆಪಿ ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಣೆ ಮಾಡಿದರು. ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಷಾ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದರು.ಇದೇ ವೇಳೆ […]

Advertisement

Wordpress Social Share Plugin powered by Ultimatelysocial