ಆಸ್ಕರ್ ರೇಸ್‌ನಿಂದ ತಮಿಳು ಚಿತ್ರ ಸೂರರೈ ಪೊಟ್ರು ಹೊರಬಿದ್ದಿದೆ

93ನೇ ಸಾಲಿನ ಆಸ್ಕರ್ ರೇಸ್ನಿಂದ ತಮಿಳು ಚಿತ್ರ ಸೂರರೈ ಪೊಟ್ರು ಹೊರಬಿದ್ದಿದೆಮಾರ್ಚ್ 15 ರಂದು ಆಸ್ಕರ್ ನಾಮಿನೇಷನ್ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಪಟ್ಟಿಯಲ್ಲಿ ಸೂರರೈ ಪೊಟ್ರು ಸ್ಥಾನ ಪಡೆಯುವಲ್ಲಿ ವಿಫಲವಾಗಿದೆಆಸ್ಕರ್ ರೇಸ್ನಲ್ಲಿ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ಸಂಗೀತ, ನಿರ್ದೇಶನ, ಅತ್ಯುತ್ತಮ ಕತೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸೂರರೈ ಪೊಟ್ರು ಸಿನಿಮಾ ಸ್ಪರ್ಧಿಸಿತ್ತುಆದರೆ, ಪ್ರಶಸ್ತಿ ಸುತ್ತಿನ ಅಂತಿಮ ಪಟ್ಟಿಯಲ್ಲಿ ಸೂರ್ಯ ಚಿತ್ರಕ್ಕೆ ಹಿನ್ನಡೆಯಾಗಿದೆ.

 ಆಸ್ಕರ್ ರೇಸ್ ನಲ್ಲಿಸೂರರೈ ಪೊಟ್ರು‘: ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಸೂರ್ಯ ಮತ್ತು ಅಪರ್ಣ ಸೂರರೈ ಪೊಟ್ರು ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ತೆರೆಕಂಡಿತ್ತುಕೊರೊನಾ ವೈರಸ್ ಭೀತಿಯಿಂದ ಓಟಿಟಿಯಲ್ಲಿ ಸೂರ್ಯ ಸಿನಿಮಾ ಬಿಡುಗಡೆಯಾಗಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸುಧಾ ಕೊಂಗಾರ ನಿರ್ದೇಶಿಸಿದ್ದ ಚಿತ್ರ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಕಥೆ ಹೊಂದಿತ್ತು

ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ಸೂರ್ಯ ನಟಿಸಿದ್ದರು. ಸೂರ್ಯ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸೂರ್ಯಗೆ ಜೋಡಿಯಾಗಿ ಪತ್ನಿಯ ಪಾತ್ರದಲ್ಲಿ ಅಪರ್ಣ ಬಾಲಮುರಳಿ ಅಭಿನಯಿಸಿದ್ದರು. 93ನೇ ಆಸ್ಕರ್ನಲ್ಲಿ ಸೂರರೈ ಪೊಟ್ರು ಚಿತ್ರಕ್ಕಾಗಲಿ ಅಥವಾ ಸೂರ್ಯ ಅವರ ನಟನೆಗಾಗಲಿ ಪ್ರಶಸ್ತಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂತಿಮ ಹಂತದಲ್ಲಿ ನಿರಾಸೆ ಎದುರಾಗಿದೆನವೆಂಬರ್ 20, 2020ರಲ್ಲಿ ಸೂರರೈ ಪೊಟ್ರು ಸಿನಿಮಾ ಬಿಡುಗಡೆಯಾಗಿತ್ತು. 45 ಕೋಟಿ ಹಣ ನೀಡಿ ಅಮೇಜಾನ್ ಪ್ರೈಮ್ ಖರೀದಿ ಮಾಡಿತ್ತು..

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಪ್ಸಿಕಂ ತೋಟಕ್ಕೆ ದುಷ್ಕರ್ಮಿಗಳ ವಾಮಾಚಾರ

Thu Mar 18 , 2021
     18-03-2021 .             ಚೆನ್ನಾಗಿ ಬೆಳೆದಿದ್ದ ಒಂದು  ಎಕರೆ ಕ್ಯಾಪ್ಸಿಕಂ ತೋಟಕ್ಕೆ ದುಷ್ಕರ್ಮಿಗಳು ವಾಮಾಚಾರ ಮಾಡಿರುವ ಘಟನೆ ಕೋಲಾರ ತಾಲ್ಲೂಕು ಮದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮದನಹಳ್ಳಿ ಗ್ರಾಮದ ಚೌಡರೆಡ್ಡಿ ಎಂಬುವರು ಒಂದು ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದಾರೆ, ಇದನ್ನು ಸಹಿಸದ ದುಷ್ಕರ್ಮಿಗಳು‌ ಹಸಿರು ಬ್ಯಾಗ್ ನಲ್ಲಿ ನಾಲ್ಕೈದು ಯಂತ್ರಗಳನ್ನು ಹಾಕಿ ಯಂತ್ರದ ಒಳಗೆ ರೈತ ಚೌಡರೆಡ್ಡಿ ಹಾಗೂ ಅವರ ಹೆಸರುಗಳನ್ನು […]

Advertisement

Wordpress Social Share Plugin powered by Ultimatelysocial