ತಮಿಳುನಾಡು ಪಟಾಕಿ ಕಾರ್ಖಾನೆ ಸ್ಫೋಟ

ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಈ ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಚೆನ್ನೈನಿಂದ 500 ಕಿ.ಮೀ ದೂರದಲ್ಲಿರುವ ವಿರುಧುನಗರದಲ್ಲಿ ಇಂದು ಮಧ್ಯಾಹ್ನ 1:30ರ ಸುಮಾರಿಗೆ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಸ್ಥಳದಲ್ಲೇ 6 ಜನರು ಸಜೀವ ದಹನವಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚುವರಿಯಾಗಿ 9 ಜನರು ಮೃತಪಟ್ಟಿದ್ದಾರೆ.ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಇಡೀ ಕಾರ್ಖಾನೆಯೇ ಹೊತ್ತಿ ಉರಿದಿದೆ. ಪಟಾಕಿಗಳು ಸಿಡಿಯುತ್ತಿವೆ. ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದವರು ಹರಸಾಹಸ ಪಟ್ಟಿದ್ದರು. ಅಂದಹಾಗೆ, ಘಟನೆಗೆ ಕಾರಣವೇನು, ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ ಪೋಲೀಸರು

Please follow and like us:

Leave a Reply

Your email address will not be published. Required fields are marked *

Next Post

ಆತ್ಮಹತ್ಯತೆಗೆ ಶರಣಾಗಿರುವ ಶಶಿಕಲಾ

Sat Feb 13 , 2021
ಪ್ರೀತಿಸುವ ವಿಚಾರದಲ್ಲಿ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯತೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಣಸೆಗಟ್ಟೆಪಾಳ್ಯ ಗ್ರಾಮದಲ್ಲಿ ನಡೆದಿದೆ.ಶಶಿಕಲಾ (23) ಮನೆಯಲ್ಲಿ ನೇಣಿಗೆ ಶರಣಾದ ಯುವತಿಯಾಗಿದ್ದು, ಮೃತ ಶಶಿಕಲಾ ಹಲವಾರು ತಿಂಗಳಿಂದ ಬೆಂಗಳೂರು ಮೂಲದ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇವರಿಬ್ಬರ ಪ್ರೀತಿ ವಿಚಾರದಲ್ಲಿ ತಡರಾತ್ರಿ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮನನೊಂದು ಶಶಿಕಲಾ ತಡರಾತ್ರಿ […]

Advertisement

Wordpress Social Share Plugin powered by Ultimatelysocial