‘ಹೃದಯಂ’ ನೋಡಿದ ಮೇಲೆ ಕಾಡುತ್ತಲೇ ಇರುವ ರೋಮ್ಯಾಂಟಿಕ್ ಸಿನಿಮಾ ̤

ಹೃದಯಂ’ ಒಂದು ಹೊಸ ಕಥೆಯಲ್ಲ ಆದರೆ ಅದರ ನಿರೂಪಣೆ ನಿಮ್ಮನ್ನು ಭಾವನಾತ್ಮಕವಾಗಿ ಕಾಡುತ್ತದೆ. ನೋಡುವ ಹೃದಯಕ್ಕೆ ಮುದ ನೀಡುತ್ತದೆ. ಕೆಲವು ಚಲನಚಿತ್ರಗಳು ನಿಮ್ಮನ್ನು ರಂಜಿಸಬಹುದು ಆದರೆ ಕೆಲವು ಚಲನಚಿತ್ರಗಳು ಮಾತ್ರ ನಿಮ್ಮ ಹೃದಯವನ್ನು ತುಂಬಿಕೊಳ್ಳುತ್ತವೆ!ಸಹಜವಾಗಿಯೇ ‘ಹೃದಯಂ’ ಎರಡನೇ ವರ್ಗಕ್ಕೆ ಸೇರುತ್ತದೆ. ಮಲಯಾಳಂ ಚಿತ್ರರಂಗದಲ್ಲಿ ಮೋಹನಲಾಲ್- ಶ್ರೀನಿವಾಸನ್ ಒಂದು ಕಾಲದಲ್ಲಿ ಅಪರೂಪದ ಜೋಡಿ. ಈಗ ಅದರ ಮುಂದುವರೆದ ಭಾಗ ಪ್ರಣವ್ ಮೋಹನಲಾಲ್- ವಿನೀತ್ ಶ್ರೀನಿವಾಸನ್ ‘ಹೃದಯಂ’ ಮೂಲಕ ಮುಂದುವರೆದಿದೆ. ನಿರ್ದೇಶಕ ವಿನೀತ್ ಶ್ರೀನಿವಾಸನ್ ‘ಹೃದಯಂ’ ಎರಡು ಫೀಲ್ ಗುಡ್ ಚಿತ್ರಗಳನ್ನು ಒಂದರಲ್ಲಿ ನೀಡಿದ್ದಾರೆ.ಚಿತ್ರ ಎರಡು ಗಂಟೆ 55 ನಿಮಿಷಗಳಿದ್ದು, ಚಿತ್ರದಲ್ಲಿ ಬರೋಬ್ಬರಿ 15 ಹಾಡುಗಳಿವೆ. ಆದರೆ ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಹೊರತು ಮೈನಸ್ ಆಗಿಲ್ಲ. ಒಂದು ಫೀಲ್ ಗುಡ್ ಚಿತ್ರದಲ್ಲಿ ಫೀಲ್ ಗುಡ್ ಹಾಡುಗಳು ಕೊಡುವ ಮಜಾನೇ ಬೇರೆ. ಸಿನಿಮಾ ನೋಡಲು ಆರಂಭಿಸಿದರೆ 3 ಗಂಟೆ ಕಳೆದುಹೋಗುವುದು ಕೂಡ ನಿಮಗೆ ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ನೀವು ಸಿನಿಮಾ ಒಳಗೆ ಬೆರೆತು ಬಿಡುತ್ತೀರಿ.ನಾಯಕ ಅರುಣ್ ನೀಲಕಂದನ್ (ಪ್ರಣವ್ ಮೋಹನ್ ಲಾಲ್) ಜೀವನದ ಪ್ರಮುಖ ಘಟನೆಗಳ ಸುತ್ತಲೂ ‘ಹೃದಯಂ’ ಕಥೆ ನಡೆಯುತ್ತದೆ. ಮಧ್ಯಂತರ ಪೂರ್ವ ಭಾಗಗಳು ಅರುಣ್ ಕಾಲೇಜ್ ನಂತರದ ಜೀವನವನ್ನು ಒಳಗೊಂಡಿದೆ ಮತ್ತು ಉಳಿದರ್ಧವು ನಂತರದ ಕಾಲೇಜ್ ಅನುಭವಗಳನ್ನು ಅನ್ವೇಷಿಸುತ್ತದೆ. ತನ್ನ 30ನೇ ವಯಸ್ಸಿನಲ್ಲಿ ಅರುಣ್ ತಾನು ಕಳೆದುಕೊಂಡ ಅಪರೂಪದ ಕಾಲೇಜ್ ಜೀವನದ ಸುಂದರ ನೆನಪುಗಳು ಮತ್ತು ಅವನ ಮೊದಲ ಪ್ರೀತಿ (ದರ್ಶನಾ) ಜೊತೆಗಿನ ಸುಂದರ ಬೆಸುಗೆಯ ಬೆಚ್ಚನೆಯ ಭಾವನೆಗಳ ಹೃದಯಸ್ಪರ್ಶಿ ಕಥೆ ತೆರೆದುಕೊಳ್ಳುತ್ತದೆ. ಕೇರಳದ ಪಾಲಕ್ಕಾಡ್‌ನಿಂದ ತೆರೆದುಕೊಳ್ಳುವ ಕಥೆ ಚೆನ್ನೈ KCG ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಕಥೆ ಅರಳಿದಾಗ ಅಲ್ಲಿ ಸುಂದರವಾದ ಒಂದು ಕಾಲೇಜು ಚಿತ್ರಣ ಎದುರಾಗುತ್ತದೆ. ಅಲ್ಲಿ ಅಂತೂ ಬ್ಯಾಕ್ ಟು ಬ್ಯಾಕ್ ಹಾಡುಗಳು/ಹಿನ್ನೆಲೆಗಳು ಗೀತೆಗಳು ರಸಸ್ವಾದವನ್ನು ಉಣಬಡಿಸುತ್ತದೆ. “ನಗುಮೋಮು …..ದರ್ಶನಾ…ತಥಕ ತೈತರೆ…ಒನಕ್ಕ ಮುಂದಿರಿ….”ಪ್ರತಿಯೊಂದು ಹಾಡಿನಲ್ಲೂ ಒಂದು ಫೀಲ್ ಇದೆ. ಪ್ರತಿಹಾಡಿನ ಹಿನ್ನೆಲೆ ಚಿತ್ರೀಕರಣದ ದೃಶ್ಯವೈಭವ ನೋಡಿದಾಗಬಹು ನಿರೀಕ್ಷಿತ ಚಿತ್ರಗಳಲ್ಲಿ ಹೃದಯಂ ಕೂಡ ಒಂದು’ಮರಕ್ಕರ್’ ಮತ್ತು ‘ಮಿನ್ನಲ್ ಮುರಳಿ’ ಬಿಡುಗಡೆಯ ನಂತರ ಮಲಯಾಳಂ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಹೃದಯಂ ಕೂಡ ಒಂದು. ವಿನೀತ್ ಶ್ರೀನಿವಾಸನ್ ಅವರು ಪ್ರಣವ್ ಮೋಹನ್ ಲಾಲ್ ಅವರೊಂದಿಗೆ ಮೊದಲ ಬಾರಿಗೆ ಒಂದಾಗಿದ್ದಾರೆ, ಇದು ಪ್ರಣವ್ ಅವರ ಚಲನಚಿತ್ರ ವೃತ್ತಿ ಜೀವನದಲ್ಲಿ ಒಂದು ಪ್ರಗತಿ ಎಂದು ಕರೆಯಬಹುದು. ವಿನೀತ್ ಶ್ರೀನಿವಾಸನ್ ಅವರು ತಮ್ಮ ಪ್ರೇಕ್ಷಕರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರುವ ನಿರ್ದೇಶಕರಾಗಿದ್ದು, ಅದು ಅವರ ಮೊದಲ ಚಿತ್ರವಾದ ‘ಮಲರ್ವಾಡಿ’ ಅಥವಾ ಅವರ ಇತ್ತೀಚಿನ ‘ಹೃದಯಂ’ನ ಮೂಲಕ ಮೂಲಕ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ಎಲ್ಲಿಯೂ ಚಿತ್ರ ಬೋರ್ ಹೊಡೆಯುವುದಿಲ್ಲದ್ವಿತೀಯಾರ್ಧದಲ್ಲಿ ಮಾತ್ರ ಕೆಲವು ಭಾಗಗಳಲ್ಲಿ ಮಂದಗತಿಯ ನಿರೂಪಣೆ ಅಲ್ಲಲ್ಲಿ ಭಾಸವಾಗುತ್ತದೆ, ಇದು ಹೊರತಾಗಿ ಚಿತ್ರ ಅತ್ಯುತ್ತಮ ನಾಟಕೀಯ ಅನುಭವವಾಗಿದೆ. ಮೊದಲಾರ್ಧದ ಪ್ರತಿ ಫ್ರೇಮ್‌ನಲ್ಲಿ ತಾಜಾತನವಿದೆ ಮತ್ತು ನೀವು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ನಿಮ್ಮ ಹಳೆಯ ಎಂಜಿನಿಯರಿಂಗ್ ದಿನಗಳನ್ನು ಇಲ್ಲಿ ಮರಳಿ ಕಾಣಬಹುದಾಗಿದೆ! ‘ಹೃದಯಂ’ ಇದು ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಾಲ್ಕು ವರ್ಷಗಳ ವಿದ್ಯಾಭ್ಯಾಸದಲ್ಲಿ ಸ್ಪಾಟ್ ಆನ್ ಚಿತ್ರಣವಾಗಿದೆ ಎಂದು ಹೇಳಬಹುದು.ನಿಮ್ಮ ಹಳೆಯ ನೆನಪುಗಳ ಕಡೆಗೆ ಕರೆದೊಯ್ಯುತ್ತದೆ ̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳಿಗೆ ಕನ್ನಡ ಪಾಠ ಮಾಡಿದ ರಾಕಿಂಗ್‌ ಸ್ಟಾರ್‌ ಯಶ್‌ !|Yash | Rocking Star | Speed News Kannada|

Thu Feb 3 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial