55 ವರ್ಷಗಳ ಹಿಂದೆ ಹಡಗಿನ ಜೊತೆಗೆ ಹುದುಗಿ ಹೋದ ಸತ್ಯ

 

ಸಮುದ್ರದ ನಡುವೆ ಹಡಗಿನ  ಜೊತೆಗೆ ಹುದುಗಿ ಹೋದ ಸತ್ಯ , ೫೫ ವರ್ಷಗಳ ನಂತರ  ಪುಸ್ತಕದ ಪುಟಗಳಲ್ಲಿ ಪ್ರತ್ಯಕ್ಷವಾಯಿತು , ಸತ್ಯ ಹೊರಬರುವ ಹೊತ್ತಿಗಾಗಲೇ ಅಪರಾಧಿ ಆತ್ಮಹತ್ಯೆಗೆ ಶರಣಾಗಿದ್ದ , ಹಾಗಿದ್ರೆ ಆ ರಾತ್ರಿ ಪ್ರಯಾಣಿಸುತ್ತಿದ್ದ ೫ ಜನರ ಕೊಲೆ ಮಾಡಿದ್ಯಾರು??? ಕೊಲೆ ಮಾಡಿದಾತ ತಾನೂ ಸಾವಿಗೆ ಶರಣಾಗಿದ್ಯಾಕೆ ?? ಅಂದು ನಡೆದ ಘಟನೆಗೆ ಸಾಕ್ಷಿಯಾಗಿದ್ದ ಆ ಬಾಲಕಿ ೫೫ ವರ್ಷಗಳು ಮೌನವಾಗಿದ್ದಿದ್ಯಾಕೆ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ

೪ ಕಡೆಗಳಲ್ಲಿ  ಕಣ್ಣು ಹಾಯಿಸಿದಷ್ಟು ಕಾಣಸಿಗೋದು ಕಡು ನೀಲಿ ಸಾಗರ ಮಾತ್ರ , ಯಾವ ಕಡೆ ಹೋಗಬೇಕೆಂದು ತಿಳಿಯದೆ ಅನ್ನ ನೀರಿಲ್ಲದೆ ರಣಬಿಸಿಲಿಗೆ ತೆಪ್ಪದಲ್ಲೇ ಪ್ರಜ್ಞಾಹೀನಳಾದ ೧೧ ವರ್ಷದ ಹುಡುಗಿ, ಆಕೆಯ ಅದೃಷ್ಟ ಚೆನ್ನಾಗಿತ್ತು ನೋಡಿ ಅದೇಕಡೆ ಸಾಗಿ ಬರುತ್ತಿದ್ದ ನೌಕೆ ಸಮುದ್ರದ ಮದ್ಯೆ ತೇಲುತ್ತಿದ ಬಾಲಕಿಯತ್ತ ಸಾಗಿ ಬಂತು , ಇನ್ನು ಉಸಿರಾಡುತ್ತಿದ್ದುದ್ದನ್ನ ಗಮನಿಸಿದ  ನೌಕೆಯ ನಾವಿಕ ಅವರ

ನೌಕೆಯಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಿ ಬದುಕಿಸಿದ್ದ,  ಮತ್ತೆ ಜಗತ್ತು ನೋಡಲಾರೆ ಎಂದುಕೊAಡಿದ್ದ ಆ ಚಿಕ್ಕ ಹುಡುಗಿಗೆ, ವಾಸ್ತವ ನಂಬಿಕೆಗೆ ದೂರವಾಗಿತ್ತು ಮತ್ತದೇ ಕಹಿ ಸತ್ಯ ಕಾಡತೊಡಗಿತು, ಅಷ್ಟಕ್ಕೂ ಸಾಗರದ ಅಲೆಗಳ ನಡುವೆ ಈ ಬಾಲಕಿ ಹೇಗೆ ಬಂದಳು ಈ ಕಥೆ ಕೇಳಿದ್ರೆ , ಈ ಕಥೆಯ ಖಳ ನಾಯಕನನ್ನ ಮನದಲ್ಲೇ ಶಪಿಸ್ತೀರ ,

 

ಸದ್ಯ ಪ್ರಾಣ ಉಳಿಸಿಕೊಂಡ ಬಾಲಕಿ ಹೆಸ್ರು ಟರ‍್ರಿ , ೪ ದಿನಗಳ ಹಿಂದೆ ಟರ‍್ರಿ ತನ್ನ ತಂದೆ ತಾಯಿ ಇಬ್ಬರು ಸಹೋದರರೊಂದಿಗೆ ಬೋಟ್‌ನಲ್ಲಿ ಪ್ರಯಾಣಿಸುವ ಖುಷಿಯಲ್ಲಿದ್ದಳು, ಟರ‍್ರಿಯ ತಂದೆ ಡ್ಯುಪೆರಾಲ್ಟ್ ಪ್ರವಾಸಕ್ಕೆಂದೇ ಬೋಟ್‌ನ್ನ ಬಾಡಿಗೆಗೆ ಪಡೆದಿದ್ರು  ಅಂದು ಈ ೫ ಜನರ ಪ್ರವಾಸಕ್ಕೆ ಜೊತೆಯಾಗಿದ್ದು ಟರ‍್ರಿ ತಂದೆ ಡ್ಯುಪೆರಾಲ್ಟ್ನ ಆತ್ಮೀಯ ಸ್ನೇಹಿತ ಜ್ಯುಲಿಯನ್ ಹಾರ್ವೆ ಮತ್ತು ಹಾರ್ವೆಯ ಪತ್ನಿ ಮೇರಿ ಹಾರ್ವೆ , ,, ಜ್ಯುಲಿಯನ್ ಹಾರ್ವೆ ಬೋಟ್‌ನ್ನ ತಾನೇ ನಡೆಸುವುದಾಗಿ ಹೇಳಿದ್ದ ಅದರಂತೆ ಮೊದಲ ದಿನದ ಪ್ರವಾಸ  ಆರಂಭವಾಗಿತ್ತು , ೧೧ ವರ್ಷದ ಟರ‍್ರಿಗೆ ಮೊದಲ ಬಾರಿ ಬೋಟ್ನಲ್ಲಿ ಪ್ರಯಾಣಿಸುವ ಖುಷಿ , ಹೀಗೆ ಎರಡೂ ಕುಟುಂಬಗಳ ಸಾಗರ ಪ್ರವಾಸ ಆನಂದವಾಗಿ ಸಾಗ್ತಾ ಇತ್ತು , ಅಂದು ಈ ಕುಟುಂಬದ ಸಾಗರ ಪ್ರಯಾಣಕ್ಕೆ ೪ನೇ ದಿನ, ರಾತ್ರಿ ಸುಮಾರು ೧೧ ಗಂಟೆ ಟರ‍್ರಿ ಗಾಢ ನಿದ್ರೆಯಲ್ಲಿದ್ದಳು ಒಮ್ಮೇಲೆ ಯಾರೋ ಜೋರಾಗಿ ಚೀರಿಕೊಂಡAತೆ, ನೋವಿನಿಂದ ನರಳಿದಂತೆ ಕೇಳಿಸಿತ್ತು , ತಕ್ಷಣ ಕೆಳಮಹಡಿಯಿಂದ ಓಡಿ ಬಂದ ಟರ‍್ರಿಗೆ ಕಾಣಿಸಿದ್ದು  ರಕ್ತದ ಮಡುವಿನಲ್ಲಿ ಮಲಗಿದ್ದ ತಂದೆ ತಾಯಿ ಮತ್ತು ಸಹೋದರರು ಮತ್ತೊಂದು ಕಡೆ ಕೈಯಲ್ಲಿ ಚಾಕು ಹಿಡಿದು ನಿಂತ ತಂದೆಯ ಸ್ನೇಹಿತ ಜ್ಯುಲಿಯನ್ ಹಾರ್ವೆ, ಅಲ್ಲೇನು ನಡೆಯಿತು ಅಂತ ತಿಳಿಯೋ ಅಷ್ಟರಲ್ಲಿ ,ಟರ‍್ರಿಯತ್ತ ಬಂದ ಹಾರ್ವೆ ಆಕೆಯನ್ನ ನದಿಗೆ ಎಸೆಯುತ್ತಾನೆ, ಹೀಗೆ ಸ್ನೇಹಿತನ ಇಡೀ ಕುಟುಂಬ ಮುಗಿಸಿಬಿಟ್ಟೆ ಎಂಬ ಹಾರ್ವೆಯ ಲೆಕ್ಕಾಚಾರ ತಪ್ಪಾಗಿತ್ತು , ಬೋಟ್‌ನ ತಳದಲ್ಲಿದ್ದ ಟೈರ್‌ನ ಗಟ್ಟಿಯಾಗಿ ಹಿಡಿದ ಟರ‍್ರಿ ಮುಳುಗಿರಲಿಲ್ಲ , ಕಡು ಕತ್ತಲಿನಲ್ಲಿ ಯಾವುದನ್ನೂ ಗಮನಿಸದ ಹಾರ್ವೆ ಬೋಟ್‌ನ್ನ ಸಮುದ್ರದಲ್ಲಿ ಮುಳುಗಿಸಿ ಲೈಫ್ ಬೋಟ್ ಮೂಲಕ ದಡ ಸೇರುತ್ತಾನೆ ಅಲ್ಲದೆ  ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೋಟ್ ಮುಳುಗಿತು ತನ್ನ ಹೆಂಡತಿ ಸೇರಿದಂತೆ , ಡ್ಯುಪೆರಾಲ್ಟ್ ಕುಟುಂಬ ಸಮುದ್ರದಲ್ಲಿ ಮುಳುಗಿ ಸತ್ತರೆಂದು ಸುಳ್ಳು ಸುದ್ದಿ ಹಬ್ಬಿಸಿದ್ದ , ಆದರೆ ಇತ್ತ ೧೧ ವರ್ಷದ ಬಾಲಕಿ ಸಮುದ್ರ ಮದ್ಯೆ ಸಿಕ್ಕಿದ್ದಾಳೆ ಆಕೆಯನ್ನ ಬದುಕಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಬಂದ ವರದಿ ನೋಡಿ , ಎಲ್ಲಿ ಬಾಲಕಿ ನಡೆದ ಸತ್ಯ ಹೇಳುತ್ತಾಳೆ ತನಗೆ ಶಿಕ್ಷೆಯಾಗುತ್ತದೆ ಎಂದು ಭಯಗೊಂಡ ಹಾರ್ವೆ ಆತ್ಮಹತ್ಯೆಗೆ ಶರಣಾಗುತ್ತಾನೆ, ಆದರೆ ಬದುಕಿ ಬಂದ ಟರ‍್ರಿ ಅಂದು ನಡೆದ.

ಘಟನೆಯನ್ನ ಯಾರಿಗು ತಿಳಿಸಿಲ್ಲ ಬದಲಾಗಿ ೫೫ ವರ್ಷಗಳ ಬಳಿಕ ತಾನು ಬರೆದ ಪುಸ್ತಕದಲ್ಲಿ ಹೇಳುತ್ತಾಳೆ , ಹಾಗಿದ್ರೆ ಡ್ಯುಪೆರಾಲ್ಟ್ ಸ್ನೇಹಿತನಾಗಿದ್ದ ಹಾರ್ವೆ ಆತನ ಕುಟುಂಬವನನ್ನ ನಾಶ ಮಾಡಿದ್ಯಾಕೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ

 

ಹಾರ್ವೆ ಒಬ್ಬ ಉದ್ಯಮಿ ,ತನ್ನ ಉದ್ಯಮದಲ್ಲಿ ನಷ್ಟ ಅನುಭವಿಸ್ತಾ ಆರ್ಥಿಕ ನಷ್ಟ ಅನುಭವಿಸ್ತಾ ಇದ್ದ ಹಾರ್ವೆಗೆ ತನ್ನ ಹೆಂಡತಿ ಹೆಸರಲ್ಲಿದ್ದ ಇನ್ಸುರೆನ್ಸ್ ಮೇಲೆ ಕಣ್ಣು ಬಿದ್ದಿತ್ತು , ಇನ್ಸುರೆನ್ಸ್ ಹಣ ಸಿಕ್ಕರೆ ತನಗೆ

ಆಗಿರು ನಷ್ಟದಿಂದ ಚೇತರಿಸಿಕೊಳ್ಳಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದ ಅದೇ ಸಮಯಕ್ಕೆ

ಗೆಳೆಯನಿಂದ ಸಮುದ್ರ ಪ್ರಯಾಣಕ್ಕೆ ಬಂದ ಆಹ್ವಾನ , ಆತನ ಪ್ಲಾನ್ಗೆ ಇನ್ನಷ್ಟು ಪುಷ್ಟಿ ಕೊಟ್ಟಿತ್ತು. ತನ್ನ ಲೆಕ್ಕಾಚಾರದಂತೆ ಹಣದಾಸೆಗೆ ತನ್ನ ಪತ್ನಿಯನ್ನ ಸಮುದ್ರಕ್ಕೆ ತಳ್ಳಿದ್ದ, ಆದರೆ ಆ ರಾತ್ರಿ ಏನೋ ಸದ್ದು ಕೇಳಿತ್ತೆಂದು ಅಲ್ಲಿಗೆ ಬಂದ ಡ್ಯುಪೆರಾಲ್ಡ್ನನ್ನ ಕಂಡ ಹಾರ್ವೆ ತನ್ನ ಸ್ನೇಹಿತನಿಗೆ ನಾನು ಕೊಲೆಗಾರನೆಂಬ ಸತ್ಯ ಗೊತ್ತಾಗಿದೆ , ಇವನನ್ನ ಹೀಗೆ ಬಿಟ್ಟ÷ರೆ ಅಪಾಯ ಕಂಡಿತ ಎಂದು ಡ್ಯುಪೆರಾಲ್ಡ್ ಸೇರಿದಂತೆ ,ಆತನ ಇಡೀ ಕುಟುಂಬವನ್ನೇ ಸಾಯಿಸಿದ್ದ , ಆದರೆ ಈ ಸತ್ಯ ಘಟನೆಯಲ್ಲಿ ಓದುಗರನ್ನ ಕೊನೆವರೆಗೂ ಕಾಡುವ ಪ್ರಶ್ನೆ ಅಂದರೆ ಅಂದು ಬದುಕುಳಿದ ಟರ‍್ರಿ ಪೋಲೀಸರಿಗೆ ಸತ್ಯಾಂಶ ಯಾಕೆ ಹೇಳಿಲ್ಲ ಅನ್ನೋದು ಹಾಗೆ ಈ ವಿಷಯವನ್ನ ಟರ‍್ರಿ ೫೫ ವರ್ಷಗಳ ನಂತರ ಆಕೆಯೇ ಬರೆದ ಪುಸ್ತಕದಲ್ಲಿಯೂ ಹೇಳಿಲ್ಲ.

ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ ?????

 

 

Please follow and like us:

Leave a Reply

Your email address will not be published. Required fields are marked *

Next Post

ಇವತ್ತಿಗೂ ಜೀವಂತವಾಗಿದೆ ಭಗವನ್ ಬುದ್ಧನ ಬೋಧಿವೃಕ್ಷ

Thu Mar 18 , 2021
ವಿವಿಐಪಿ ಟ್ರೀಟ್‍ಮೆಂಟ್ ಸಾಮಾನ್ಯವಾಗಿ ಈ ಪದವನ್ನ ನಾವೆಲ್ಲರೂ ಕೇಳಿರ್ತೀವಿ. ತುಂಬಾ ಸ್ಪೆಷಲ್ ವ್ಯಕ್ತಿಗಳಿಗೆ ವಿವಿಐಪಿ ಟ್ರೀಟ್ಮೆಂಡ್ ಕೊಡಲಾಗುತ್ತೆ.ನಮ್ಮ ದೇಶದಲ್ಲಿಯೂ ಕೂಡ ಬೆರಳೆಣಿಕೆ ಮಂದಿಗಳಿಗಷ್ಟೇ ವಿವಿಐಪಿ ಟ್ರೀಟ್ಮೆಂಟ್ ಒದಗಿಸಲಾಗಿದೆ. ಪೊಲೀಸ್ ಬೆಂಗಾವಲು,ಐಟಿಬಿಪಿ ಅಥವಾ ಸಿಆರ್‍ಪಿಎಫ್‍ಸಿಬ್ಬಂದಿ, ಬೆಂಗಾವಲು ಕಾರಿನಿಂದ ರಕ್ಷಣೆ ಕೊಟ್ಟಿರ್ತಾರೆ.ಇದು ಬಹ ವಿಸೇಷವಾಗಿರುವ ವ್ಯಕ್ತಿ ಗಳಿಗೆ ನೀಡುವಂತಹ ವಿವಿಐಪಿ ಟ್ರೀಟ್ಮೆಂಟ್. ಹಾಗೆಯೇ ವಿವಿಐಪಿ ಮರಕ್ಕೆ ಯಾವ ರೀತಿ ಟ್ರೀಟ್ಮೆಂಟ್ ಕೊಡ್ತಾರೆ ಅನ್ನೋದನ್ನ ನಾವು ತಿಳಿದುಕೊಳ್ಳೋಣ.. ಮರಕ್ಕೆ ವಿವಿಐಪಿ ಟ್ರೀಟ್‍ಮೆಂಟಾ..? ..ಇವ್ರೆನ್ ಹೇಳ್ತಿದಾರೆ..? […]

Advertisement

Wordpress Social Share Plugin powered by Ultimatelysocial