ಹುಡುಗನಿಗೆ ಸರ್ಕಾರಿ ಉದ್ಯೋಗವೆಂದು ಮದುವೆ ಮಾಡಿಕೊಟ್ಟ ಹುಡುಗಿ ಮನೆಯವರು, ಮಾರನೇ ದಿನ ಕಾದಿತ್ತು ಬಿಗ್​ ಶಾಕ್​!

ಪ್ರತಿಯೊಬ್ಬರೂ ತಮ್ಮ ಮಗಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಡಬೇಕೆಂದು ಬಯಸುತ್ತಾರೆ. ಆ ಹುಡುಗನಿಗೆ ಸರ್ಕಾರಿ ನೌಕರಿಯಿದ್ದರೆ ಸಿಗುವ ಖುಷಿಯೇ ಬೇರೆ. ಯಾಕಂದ್ರೆ ಲೈಫ್​ ಸೆಟಲ್   ಆಗಿ ಇರುತ್ತದೆ ಎಂಬ ಕಾರಣಕ್ಕಾಗಿ, ಅಳಿಯನಿಗೆ ಸರ್ಕಾರಿ ಕೆಲಸ ಇರಲಿ ಅಂತ ಆದಷ್ಟು ಯೋಚನೆ ಮಾಡುತ್ತಾರೆ.
ಇದೀಗ ಇಂತದ್ದೇ ಒಂದು ಕುಟುಂಬದ ರೋಧನೆ ಕಥೆಯು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಕೂಚ್ ವಿಹಾರ್‌ನಲ್ಲಿರುವ ಕುಟುಂಬವೊಂದು ಇದೇ ರೀತಿಯ ಆಸೆಯನ್ನು ಹೊಂದಿತ್ತು. ಮಗಳ ಮದುವೆಯನ್ನು ಸರ್ಕಾರಿ ಶಿಕ್ಷಕನೊಂದಿಗೆ ಏರ್ಪಡಿಸಿದರು. ತನ್ನ ಮಗಳನ್ನು ಸರ್ಕಾರಿ ನೌಕರನಿಗೆ ಮದುವೆ ಮಾಡಿ ಕೊಡುತ್ತೇವೆ ಎಂದುಕೊಂಡು ಹುಡುಗಿಯ ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷಪಟ್ಟಿದ್ದರು. ಆದುದರಿಂದಲೇ ಮದುವೆಯ ತಯಾರಿಯಲ್ಲಿ ಜೋರಾಗಿಯೇ ಇತ್ತು. ಆದರೆ ಆನಂದ ಮೂಲಿ ಅವರ ಮನೆಯಲ್ಲಿ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಯಾಕೆ ಎಂದು ಈ ಸ್ಟೋರಿಯನ್ನು ಸಂಪೂರ್ಣವಾಗಿ .
ವರನ ಹೆಸರು ಪ್ರಣವ್ ರಾಯ್. ಅವರು 2017 ರಿಂದ ಜಲ್ಪೈಗುರಿಯ ರಾಜದಂಗ ಕೆಂಡಾ ಮೊಹಮ್ಮದ್ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನು ನೋಡಿದ ಹುಡುಗಿಯ ಮನೆಯವರು ಹುಡುಗಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ಎರಡೂ ಕುಟುಂಬಗಳು ತುಂಬಾ ಸಂತೋಷದಿಂದ ಇದ್ದವು. ಕಳೆದ ಗುರುವಾರ ಇಬ್ಬರೂ ಅದ್ಧೂರಿಯಾಗಿ ವಿವಾಹವಾದರು. ಪ್ರಣವ್ ಶುಕ್ರವಾರ ಪತ್ನಿಯೊಂದಿಗೆ ಮನೆಗೆ ಮರಳಿದ್ದರು. ಆದರೆ ಅದೇ ದಿನ ನ್ಯಾಯಾಲಯ ಮಹತ್ವದ ತೀರ್ಪು ನೀಡಿ 842 ಶಿಕ್ಷಕರ ನೇಮಕಾತಿ ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಪಟ್ಟಿಯನ್ನು ಸಾರ್ವಜನಿಕಗೊಳಿಸಿದಾಗ ಅದರಲ್ಲಿ ಪ್ರಣವ್ ರಾಯ್ ಹೆಸರೂ ಇತ್ತು. ಕೆಲಸ ಕಳೆದುಕೊಂಡ ಸುದ್ದಿ ತಿಳಿದ ತಕ್ಷಣ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಅಷ್ಟರಲ್ಲಾಗಲೇ ಪ್ರಣವ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು. ಜನರು ವಿವಿಧ ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದರು. ಒಬ್ಬರು ಬರೆದರು, ‘ಗುರುವಾರ ಮದುವೆಯಾಯಿತು, ಶುಕ್ರವಾರ ಕೆಲಸ ಸಿಕ್ಕಿತು’ ಅಂತ ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ಈ ಘಟನೆ ಇತಿಹಾಸದ ಪುಟಗಳಲ್ಲಿ ಬರೆಯಲ್ಪಡುತ್ತದೆ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.
ಆದರೆ, ಇಡೀ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ವಧು ಅಥವಾ ವರ ಸಿದ್ಧರಿರಲಿಲ್ಲ. ನವ ದಂಪತಿಗಳು ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿದೆ. ಹಣ ಕೊಟ್ಟು ಕೆಲಸ ಕೊಟ್ಟಿರುವುದಕ್ಕೆ ಸಾಕ್ಷಿಯೂ ಸಿಕ್ಕಿದೆ. ಇದಾದ ಬಳಿಕ ಹೈಕೋರ್ಟ್ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿತ್ತು. ಪ್ರೌಢ ಶಿಕ್ಷಣ ಮಂಡಳಿಯ 57 ಮತ್ತು 785 ರ ಒಟ್ಟು 842 ನೇಮಕಾತಿಗಳನ್ನು ರದ್ದುಪಡಿಸಲು ಸೂಚಿಸಲಾಗಿದೆ. ಅವರಲ್ಲಿ ಯಾರಿಗೂ ಶಾಲೆಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಅವರು ಶಾಲೆಯಲ್ಲಿ ಏನನ್ನೂ ಮುಟ್ಟುವಂತಿಲ್ಲ.
ಅವರ ಸಂಬಳವನ್ನು ಮರುಪಾವತಿ ಮಾಡುವ ವಿಷಯದ ಬಗ್ಗೆ ನ್ಯಾಯಾಲಯವು ನಂತರ ನಿರ್ಧರಿಸುತ್ತದೆ. ಗ್ರೂಪ್ ಸಿ ಪ್ರಕರಣಗಳಲ್ಲಿ ಶಿಫಾರಸು ಮಾಡಿದ ಎಷ್ಟು ವ್ಯಕ್ತಿಗಳು ಒಎಂಆರ್ ಅನ್ನು ತಿದ್ದಿದ್ದಾರೆ ಎಂದು ನ್ಯಾಯಾಲಯ ಕೇಳಿದೆ. ಪ್ರಣವ್ ರಾಯ್ ಮಾತ್ರವಲ್ಲದೆ ಮದುವೆಯಾದ ಕೆಲವೇ ದಿನಗಳಲ್ಲಿ ವರ ಕೆಲಸ ಕಳೆದುಕೊಂಡ ಪ್ರಕರಣಗಳು ಇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಕ್ಷಕ್ಕೆ ವಾಪಸ್ ಬನ್ನಿ; ಜೆಡಿಎಸ್ ಶಾಸಕನಿಗೆ ಬಿಗ್ ಆಫರ್‌ ಕೊಟ್ಟ ಅಧ್ಯಕ್ಷರು!

Tue Mar 14 , 2023
ತುಮಕೂರು, ಮಾರ್ಚ್ 14; ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರ ನಡೆಸಬೇಕು ಎಂಬುದು ಜೆಡಿಎಸ್ ಪಕ್ಷದ ಗುರಿ. ಇದಕ್ಕಾಗಿಯೇ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪಂಚರತ್ನ ರಥಯಾತ್ರೆ ಮೂಲಕ ಜನರ ಬಳಿ ಹೋಗಲಾಗಿದೆ. ಅಲ್ಲದೇ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು 93 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಹಲವು ನಾಯಕರು, ಮಾಜಿ ಶಾಸಕರು, ಹಾಲಿ ಶಾಸಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಇಂತಹ […]

Advertisement

Wordpress Social Share Plugin powered by Ultimatelysocial