ಹುಲಿ ಬಾಲಕ್ಕೆ ಕೋಲಿನಿಂದ ಹೊಡೆದ ರೈತ!

ನಗತ್ಯವಾಗಿ ಯಾರನ್ನಾದರೂ ಸುಮ್ಮನೇ ಕೆಣಕುವುದು ಒಳ್ಳೆಯದಲ್ಲ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ವರದಿಯಾದ ದುರಂತ ಘಟನೆಯೊಂದರಲ್ಲಿ ಹುಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿಯಲು ರೈತರೊಬ್ಬರು ಹುಲಿಯ ಬಾಲವನ್ನು ಕೋಲಿನಿಂದ ಹೊಡೆದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಹುಲಿಯು ರೈತನ ಕುತ್ತಿಗೆಯ ಮೇಲೆ ದಾಳಿ ಮಾಡಿದ ಪರಿಣಾಮ ಕುತ್ತಿಗೆಯಲ್ಲಿ ಆಳವಾದ ಗಾಯವಾಯಿತು. ಈ ಮೂಲಕ ರೈತನ ಉತ್ಸಾಹ ದುರಂತದೆಡೆಗೆ ತಿರುಗಿತು. ಸಂತ್ರಸ್ತರನ್ನ 35 ವರ್ಷದ ಸಂತೋಷ್ ಎಂದು ಗುರುತಿಸಲಾಗಿದ್ದು ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ನಿಧನರಾದರು.

ಏತನ್ಮಧ್ಯೆ ಜನರು ಕಾಡಿಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ಹುಲಿಗಳಿಗೆ ತೊಂದರೆಯಾಗದಂತೆ ವರ್ತಿಸಬೇಕೆಂದು ಅರಣ್ಯ ಇಲಾಖೆ ಕೇಳಿಕೊಂಡಿದೆ. ಇಲ್ಲಿಯವರೆಗೆ ಹುಲಿಯ ಕುರುಹು ಸಿಕ್ಕಿಲ್ಲ.

ಅರಣ್ಯ ಅಧಿಕಾರಿಗಳ ಪ್ರಕಾರ ಹುಲಿ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಯವಲ್ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿರಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಬಿಎಂಪಿ ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ!

Sat Mar 11 , 2023
ಬೆಂಗಳೂರು, ಮಾರ್ಚ್‌ 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸುಮಾರು 200 ಪೌರಕಾರ್ಮಿಕರನ್ನು ಸ್ವಚ್ಛತೆಯ ಸಮಸ್ಯೆಗಳ ನಿರ್ವಹಣೆಯ ಬಗ್ಗೆ ಅಧ್ಯಯನ ಮಾಡಲು ಸಿಂಗಾಪುರಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ಪೌರಕಾರ್ಮಿಕರ ಸೇವೆಗಳನ್ನು ಇತ್ತೀಚೆಗೆ ಸರ್ಕಾರ ಕ್ರಮಬದ್ಧಗೊಳಿಸಲಾಗಿತ್ತು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಕೆಡಿಸಿ) ಮೂಲಕ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿರುವ ಪ್ರವಾಸಕ್ಕೆ ಬಿಬಿಎಂಪಿ ಅಧಿಕಾರಿಗಳು 200 ಪೌರಕಾರ್ಮಿಕರನ್ನು ಕಳುಹಿಸುವುದಾಗಿ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ. ಕೆಎಸ್‌ಎಸ್‌ಕೆಡಿಸಿಯ ಎಂಡಿ […]

Advertisement

Wordpress Social Share Plugin powered by Ultimatelysocial