ವಿಶ್ವದಲ್ಲೇ ಅತ್ಯಂತ ವೇಗದ ಚಾರ್ಜಿಂಗ್ ಫೋನ್…

ಟೆಕ್ನಾಲಜಿಯ (Technology) ಪ್ರಗತಿ ಪ್ರತಿಯೊಂದು ಟೆಕ್ ಕಂಪನಿಗಳ ಬೆಳವಣಿಗೆಗೆ ಕಾರಣ ಅಂತಾನೇ ಹೇಳ್ಬಹುದು. ದಿನ ಹೋದಂತೆ ಮಾರುಕಟ್ಟೆಗೆ ಹೊಸಹೊಸ ಸಾಧನಗಳು ಬಿಡುಗಡೆಯಾಗುತ್ತಿದೆ. ಅದ್ರಲ್ಲೂ ಸ್ಮಾರ್ಟ್​ಫೋನ್​ಗಳಲ್ಲಿ (Smartphones) ಹೇಳುವುದೇ ಬೇಡ.
ಇದರಲ್ಲಿ ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಉತ್ತಮ ಫೀಚರ್ಸ್​ ಅನ್ನು ಒಳಗೊಂಡ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತಿದೆ. ಇದೀಗ ಸ್ಮಾರ್ಟ್​ಫೋನ್​ಗಳ ವಿನ್ಯಾಸದಿಂದ ಹಿಡಿದು ಬ್ಯಾಟರಿಯವರೆಗೆ ಬಹಳಷ್ಟು ಬದಲಾವಣೆಯಾಗುತ್ತಿದೆ. ಸ್ಮಾರ್ಟ್​ಫೋನ್​ಗಳು ಮಾನವನ ದೈನಂದಿನ ಕೆಲಸದ ಬಹಳ ಅಗತ್ಯವಾದ ಸಾಧನವಾಗಿದೆ. ಹೀಗಿರುವಾಗ ಸ್ಮಾರ್ಟ್​ಫೋನ್​ಗಳಲ್ಲಿ ಬ್ಯಾಟರಿ (Battery) ಬಾಳಿಕೆ ಬಹಳಷ್ಟು ಕಡಿಮೆ ಎಂಬ ದೂರುಗಳನ್ನು ಕೇಳಿಬರುತ್ತಿದೆ. ಆದ್ದರಿಂದ ಇದೀಗ ಮೊಬೈಲ್ ಕಂಪನಿಯೊಂದು ಹೊಸ ದಾಖಲೆ ಸೃಷ್ಟಿಸಲು ರೆಡಿಯಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಇತ್ತೀಚೆಗೆ ವೇಗದ ಚಾರ್ಜಿಂಗ್​ ಸಾಮರ್ಥ್ಯವನ್ನು ಹೊಂದಿರುವ ಮೊಬೈಲ್​ಗಳಿಗೆ ಹೆಚ್ಚು ಬೇಡಿಕೆಯಿದೆ. ಈ ವಿಷಯವನ್ನು ಕಂಪನಿಗಳು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸುತ್ತಿದೆ. ಇದೀಗ 240W ವೇಗದ ಚಾರ್ಜಿಂಗ್​ ಸಾಮರ್ಥ್ಯವುಳ್ಳ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಬರುತ್ತಿದೆ.ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್​ ಹೊಂದಿದ ಸ್ಮಾರ್ಟ್​ಫೋನ್​ಗಳಿಗೆ ಹೆಚ್ಚು ಬೇಡಿಕೆಯಿದೆ. ಇದನ್ನು ಗಮನಿಸಿದ ರಿಯಲ್​ಮಿ ಕಂಪನಿ ಹೊಸ ಸ್ಮಾರ್ಟ್​​ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ. ಇದು ಅತ್ಯಂತ ವೇಗದ ಚಾರ್ಜಿಂಗ್​ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಇದು ರಿಯಲ್​ಮಿ ಜಿಟಿ ನಿಯೋ 5 ಎಂಬುದಾಗಿದೆ. ರಿಯಲ್​ಮಿ ಪರಿಚಯಿಸಿರುವ ಈ ಸ್ಮಾರ್ಟ್​​ಫೋನ್​ ವಿಶ್ವದಲ್ಲೇ ಅತ್ಯಂತ ವೇಗದ ಚಾರ್ಜಿಂಗ್​ ಸಾಮರ್ಥ್ಯವನ್ನು ಹೊಂದಿರುವ ಮೊದಲ ಫೋನ್ ಆಗಲಿದೆ.ವಿಶ್ವದಲ್ಲೇ ವೇಗದ ಚಾರ್ಜಿಂಗ್​ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಹಾಗಿದ್ರೆ ಇದರ ಚಾರ್ಜಿಂಗ್ ವೇಗ ಎಷ್ಟಿರಬಹುದು ಎಂಬುದು ಎಲ್ಲರಿಗೂ ಪ್ರಶ್ನೆ ಮೂಡಬಹುದು. ರಿಯಲ್​ಮಿ ಕಂಪನಿಯ ಈ ಸ್ಮಾರ್ಟ್​​ಫೋನ್ 240W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಮಾಡುವುದಂತೂ ಖಚಿತವಾಗಿದೆ.ಆಗಲು ಕೆಲವೇ ನಿಮಿಷಗಳು ಸಾಕು. ಅದರೆ ಈಗಾಗಲೆ ಬಿಡುಗಡೆಯಾಗಿರುವ ಸ್ಮಾರ್ಟ್​ಫೋನ್​ಗಳನ್ನು ಚಾರ್ಜ್​ ಮಾಡಲು 1 ಗಂಟೆಗಳ ಸಮಯವಾದರೂ ಬೇಕಾಗುತ್ತದೆ. ಆದರೆ ಇನ್ನುಮುಂದೆ ನಿಮಿಷಗಳಲ್ಲಿ ಫುಲ್ ಚಾರ್ಜ್​ ಆಗುವಂತಹ ಸ್ಮಾರ್ಟ್​ಫೋನ್​ಗಳು ಬರಲಿದೆ.ಈಗಾಗಲೇ ಹಲವು ವರ್ಷಗಳಿಂದ, ಒನ್‌ಪ್ಲಸ್‌ ಕಂಪನಿ ತನ್ನ ಫೋನ್‌ಗಳಲ್ಲಿ ವೇಗದ ಚಾರ್ಜಿಂಗ್‌ ಟೆಕ್ನಾಲಜಿಯನ್ನು ಬಿಡುಗಡೆ ಮಾಡಿದೆ.ಕಂಪನಿ ಕೂಡ 120W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುವ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಒಪ್ಪೋ ಕಂಪನಿ ಕೂಡ ಸೂಪರ್‌ವೂಕ್‌ ಫ್ಲ್ಯಾಷ್ ಚಾರ್ಜಿಂಗ್‌ ಅನ್ನು ಈ ಹಿಂದೆ ಪರಿಚಯಿಸಿದೆ. ಇದು ಕೇವಲ ಒಂಬತ್ತು ನಿಮಿಷಗಳಲ್ಲಿ ಫುಲ್​ ಚಾರ್ಜ್​ ಆಗುವಂತಹ ಸಾಮರ್ಥ್ಯವನ್ನು ಹೊಂದಿರಲಿದೆ ಎಂದೂ ಹೇಳಲಾಗಿದೆ. ಇದೀಗ ರಿಯಲ್‌ಮಿ ಫೋನ್‌ ಇನ್ನಷ್ಟು ವೇಗದ ಚಾರ್ಜಿಂಗ್​ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ.ಸದ್ಯ VCKCJACH ಮಾದರಿ ಸಂಖ್ಯೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ 240W ಸೂಪರ್​​ವೂಕ್ ಅಡಾಪ್ಟರುಗಳನ್ನು ಹೊಂದಿದೆ ಎಂದು ಚೀನೀ ವೆಬ್‌ಸೈಟ್ ಮೈಡ್ರೈವರ್ಸ್​​ ಸಂಸ್ಥೆ ವರದಿ ಮಾಡಿದೆ. ಒಪ್ಪೋ ಮತ್ತು ರಿಯಲ್‌ಮಿ R&D ಸಂಪನ್ಮೂಲಗಳನ್ನು ಹಂಚಿಕೊಳ್ಳುವುದನ್ನು ಪರಿಗಣಿಸಿದರೆ ಈ ಹೊಸ ವೇಗದ ಚಾಜಿಂಗ್‌ ತಂತ್ರಜ್ಞಾನವು ರಿಯಲ್‌ಮಿ ಜಿಟಿ ನಿಯೋ 5 ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ರಿಯಲ್‌ಮಿ ಜಿಟಿ ನಿಯೋ 5 ಡ್ಯುಯಲ್ ಸೆಲ್ ಬ್ಯಾಟರಿ ಹೊಂದಿರಬಹುದು ಎನ್ನುವ ನಿರೀಕ್ಷೆಯಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

'ನಾಯಿ ನಾರಾಯಣ ಅಂತಾರೆ ,ಅದು ಕಷ್ಟ-ಸುಖಕ್ಕೆ ಬೇಕು'!

Wed Jan 4 , 2023
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿಯಂತೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘ನಾಯಿ ನಾರಾಯಣ ಅಂತಾರೆ , ಅದು ಪ್ರಿಯವಾದ ಪ್ರಾಣಿ’ ಸಿದ್ದರಾಮಯ್ಯ ಏನು ಹೇಳಿದ್ದಾರೋ ಗೊತ್ತಿಲ್ಲ ಎಂದರು.ನಾಯಿ ಬಗ್ಗೆ ನನಗೆ ಗೌರವ ಇದೆ, ನಮ್ಮ ಮನೆಯಲ್ಲೂ ಕೂಡ ನಾಯಿ ಇದೆ. ನಮ್ಮ ರಕ್ಷಣೆಗೆ ನಾಯಿ ಬೇಕು. […]

Advertisement

Wordpress Social Share Plugin powered by Ultimatelysocial