ತೆರೆಗೆ ಬರುತ್ತಿದೆ ಶಿಕ್ಷಕ, ಹೀರೋ ಆಗುವ ಕತೆ ‘ಸೌತ್ ಇಂಡಿಯನ್ ಹೀರೋ’ ಸಿನಿಮಾ

ಮನ ಸೆಳೆದಿದ್ದ ‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾ ಮಾಡಿದ್ದ ನಿರ್ದೇಶಕ ‘ಸೌತ್ ಇಂಡಿಯನ್ ಹೀರೋ’ ಹೆಸರಿನ ಹೊಸ ಸಿನಿಮಾ ನಿರ್ದೇಶಿಸಿದ್ದು ಸಿನಿಮಾ ಫೆ. 24 ರಂದು ರಾಜ್ಯದ 100 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.

ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹೆಚ್.ಎನ್ ನರೇಶ್ ಕುಮಾರ್, ಈ ಮೊದಲು ‘ಫಸ್ಟ್ ರ್ಯಾಂಕ್ ರಾಜು’ ಚಿತ್ರ ನಿರ್ದೇಶನ ಮಾಡಿದ್ದೇನೆ ಆ ಚಿತ್ರಕ್ಕೆ ಪ್ರೇಕ್ಷಕರು ಸ್ಪಂದನೆ ನೀಡಿದ್ದರು.

ಈ ರೀತಿ ಸೌತ್ ಇಂಡಿಯನ್ ಹೀರೋ ಚಿತ್ರ ನಿರ್ದೇಶನ ಮಾಡಿದ್ದೇನೆ ಎಂದರು.

ಹಂಪಿಯ ಒಂದು ಸಣ್ಣ ಊರಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿರುವ ನಾಯಕ ಹೇಗೆ ಚಲನಚಿತ್ರೋದ್ಯಮದಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ ಎಂಬುದರ ಕುರಿತಾದ ಚಲನಚಿತ್ರವಾಗಿದೆ ಅದರ ನಂತರ ಒಬ್ಬ ಸೂಪರ್‌ಸ್ಟಾರ್ ಅವರಿಂದ ನಿಭಾಯಿಸಲಾಗದ ಸ್ಟಾರ್ ಡಮ್ ನಿಂದ ತುಂಬಿದ ಜೀವನದಲ್ಲಿ ಬೀಳುತ್ತಾನೆ, ಮುಂದೆ ಏನಾಗುತ್ತದೆ ಎಂಬುದು ಕಥೆಯ ತಿರುಳು ಎಂದು ವಿವರಿಸಿದರು.

ಖ್ಯಾತಿ ಮತ್ತು ಗ್ಲಾಮರ್ ಹೇಗೆ ಅವನ ಮುಗ್ಧ ಮನಸ್ಸು ಮತ್ತು ಜೀವನಶೈಲಿಯನ್ನು ಕತ್ತು ಹಿಸುಕುತ್ತದೆ. ಅವನು ತನ್ನ ಪ್ರೀತಿ, ಕುಟುಂಬ ಮತ್ತು ಆತ್ಮೀಯರನ್ನು ಹೇಗೆ ಕಳೆದು ಕೊಳ್ಳುವಂತೆ ಮಾಡುತ್ತದೆ ಮತ್ತು ಅವರನ್ನು ಮತ್ತೆ ತನ್ನ ಜೀವನಕ್ಕೆ ಮರಳಿ

ಪಡೆಯುವ ಅವನ ಅನ್ನೇಷಣೆಯು ಉಳಿದ ಕಥೆಯನ್ನು ರೂಪಿಸುತ್ತದೆ ಎಂದು ಹೇಳಿದರು.

ಚಿತ್ರಕ್ಕೆ ಹರ್ಷವರ್ಧನ್ ರಾಜ್ ,ಅನಿಲ್ ಸಿ.ಜೆ ಸಂಗೀತ ನೀಡಿದ್ದಾರೆ.ವಿ.ಆರ್ ನಾಗೇಂದ್ರ ಪ್ರಸಾದ್,ಜಗದೀಶ್ ನಡಹಳ್ಳಿ,ಶಾಮ್ ರಾವ್,ವಿಜಯ್ ಈಶ್ವರ್ ಸಾಹಿತ್ಯ ನೀಡಿದ್ದಾರೆ ಎಂದು ತಿಳಿಸಿದರು.

ನಾಯಕನಟ ಸಾರ್ಥಕ್ ಮಾತನಾಡಿ ಧಾರಾವಾಹಿಯಲ್ಲಿ ನಟಿಸಿದ್ದೇನೆ ಇದೀಗ ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶಿಸಿದ್ದೇನೆ.ಹೊಸಬರಿಗೆ ಚಿತ್ರದಲ್ಲಿ ನಿರ್ದೇಶಕರು ಅವಕಾಶ ಕಲ್ಪಿಸಿದ್ದಾರೆ. ಹಂಪಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದರು.

ನಾಯಕಿ ಕಾಶಿಮಾ ಮಾತನಾಡಿ ಚಿತ್ರದಲ್ಲಿ ಗ್ರಾಮೀಣಭಾಗದ ಶಿಕ್ಷಕಿಯಾಗಿ ಪಾತ್ರ ಮಾಡಿದ್ದೇನೆ.ನನ್ನ ಪಾತ್ರ ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಮೂಡಿಬಂದಿದೆ ಎಂದು ಹರ್ಷವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ನಟ ಅಮಿತ್ ಹಾಗೂ ತಂಡದವರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಂದಮೂರಿ ಬಾಲಕೃಷ್ಣ ಸಹೋದರ ಗ್ರೇಟ್ ಎಸ್ಕೇಪ್

Sat Feb 11 , 2023
ಎನ್​ಟಿಆರ್​ ಕುಟುಂಬಕ್ಕೆ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಲೇ ಇವೆ. ಕೆಲ ದಿನಗಳ ಹಿಂದೆ ತಾರಕರತ್ನ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಇದರ ಬೆನ್ನಲ್ಲೇ ನಟ ಬಾಲಕೃಷ್ಣ ಅವರ ಸಹೋದರ ನಂದಮೂರಿ ರಾಮಕೃಷ್ಟ ಅವರ ಕಾರು ಆಯಕ್ಸಿಡೆಂಟ್​ ಆಗಿದೆ. ಸ್ವಲ್ಪದರಲ್ಲೇ ಅನಾಹುತದಿಂದ ಪಾರಾಗಿದ್ದು ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಿನ್ನೆ ಬೆಳಗ್ಗೆ ಹೈದರಾಬಾದ್​ನ ಜೂಬಿಲಿ ಹಿಲ್ಸ್​ನ​ 10ನೇ ರಸ್ತೆಯಲ್ಲಿ ರಾಮಕೃಷ್ಣ ಅವರು ಕಾರು ಚಾಲನೆ ಮಾಡಿಕೊಂಡು ತೆರಳುತ್ತಿದ್ದರು. ಈ ವೇಳೆ ಕಾರು […]

Advertisement

Wordpress Social Share Plugin powered by Ultimatelysocial