ಥಿಚ್ ನಾತ್ ಹಾನ್ ಒಬ್ಬ ಸಮೃದ್ಧ ಲೇಖಕ ಮತ್ತು ಶಾಂತಿ ಕಾರ್ಯಕರ್ತರಾಗಿದ್ದರು.

 

Mindfulness ಎಂಬುದು ಇಂದಿನ ಯುಗದ ಪ್ರಖ್ಯಾತ ನುಡಿ. ಅರಿವು, ಜಾಗೃತಿ, ಧ್ಯಾನ, ಮೆಡಿಟೇಷನ್, ಝೆನ್, ಸಾವಧಾನ ಇತ್ಯಾದಿಗಳ ಸಮೀಪದ – ಒಂದು ಸ್ವರೂಪದ ಚಿಂತನೆ ಇದೆಂದು ಹೇಳಬಹುದೇನೊ! ಆದರೆ ಸಿಹಿ ಎಂಬುದು ಪದವಲ್ಲ, ಅದೊಂದು ಅನುಭವ. ಅಂತೆಯೇ mindfulness ಎಂಬುದು ಕೂಡಾ ಅನುಭವದ ಸ್ಥಿತಿ. ಪದವಲ್ಲ. ಅನುಭವಿಗಳ ಅನುಭವ ಮಾತ್ರಾ ಅದನ್ನು ಬಲ್ಲದು. ನಾವು ಹೇಳುವುದು ಪದ ಮಾತ್ರಾ. ವಿಶ್ವದಲ್ಲಿ ಅನೇಕ ಜನ mindfulness ಅನುಭವದ ಪ್ರಯೋಜನ ಪಡೆದಿದ್ದಾರೆ.
ವಿಯೆಟ್ನಾಂನ ಪ್ರಭಾವಿ ಬೌದ್ಧ ಸನ್ಯಾಸಿ ಥಿಚ್ ನಾತ್ ಹಾನ್ ಅವರು ‘ಫಾದರ್ ಆಫ್ ಮೈಂಡ್ಫುಲ್ನೆಸ್’ ಎಂದು ಗಣ್ಯರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ.
ಥಿಚ್ ನಾತ್ ಹಾನ್ ಒಬ್ಬ ಸಮೃದ್ಧ ಲೇಖಕ ಮತ್ತು ಶಾಂತಿ ಕಾರ್ಯಕರ್ತರಾಗಿದ್ದರು. ಅವರ ಪುಸ್ತಕಗಳು ಸುಲಭ ರೀತಿಯಲ್ಲಿ ಮನಸ್ಸಿಗೆ ಹಿತಭಾವ ತರುವ ಪ್ರಶಾಂತ ಭಾವಗಳನ್ನು ಹೊಂದಿದ್ದು ವಿಶ್ವದಾದ್ಯಂತ ಜನಪ್ರಿಯಗೊಂಡಿವೆ.
ಥಿಚ್ ನಾತ್ ಹಾನ್ ಅವರನ್ನು ಯುದ್ಧವನ್ನು ವಿರೋಧಿಸಿದ ಕಾರಣದಿಂದ 1960ರ ದಶಕದಲ್ಲಿ ವಿಯೆಟ್ನಾಂನಿಂದ ಗಡಿಪಾರು ಮಾಡಲಾಯಿತು. ವಿಯೆಟ್ನಾಂ ಯುದ್ಧದ ಉತ್ತುಂಗದಲ್ಲಿ, ಅವರು ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಭೇಟಿಯಾದರು, ಈ ಯುದ್ಧ ಸಂಘರ್ಷದ ವಿರುದ್ಧ ಮಾತನಾಡಲು ನಾಗರಿಕ ಹಕ್ಕುಗಳ ನಾಯಕರಾದ ಮಾರ್ಟಿನ್ ಲೂಥರ್ ಕಿಂಗ್ ಅವರ ಮನವೊಲಿಸಿದರು.
ಸನ್ಯಾಸಿಗಳಾದ ಥಿಚ್ ನಾತ್ ಹಾನ್ ದೇಶಭ್ರಷ್ಟರಾದ ನಂತರ ಫ್ರಾನ್ಸ್‌ನಲ್ಲಿ ಹಲವು ದಶಕಗಳ ಕಾಲ ಬದುಕು ಕಳೆದರು. ಪ್ರಪಂಚದಾದ್ಯಂತ ‘ಪ್ಲಮ್ ವಿಲೇಜ್ ಟ್ರೆಡಿಶನ್(ಸಂಸ್ಕಾರ)’ದಲ್ಲಿ ಮಠಗಳು ಮತ್ತು ಧ್ಯಾನ ಕೇಂದ್ರಗಳನ್ನು ಸ್ಥಾಪಿಸುವ ಕೆಲಸ ಮಾಡಿದರು.
ಥಿಚ್ ನಾತ್ ಹಾನ್ 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ, ಅವು 40 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಯುರೋಪ್ ಮತ್ತು ಅಮೆರಿಕದಲ್ಲಿನ ಸಾವಧಾನತೆಯ ಅಭ್ಯಾಸದ ಬಗೆಗಿನ ಭಾಷಣಗಳಿಗೆ ಹೆಸರಾದರು. 2009ರಲ್ಲಿ ವಿಯೆಟ್ನಾಂನ ಕಮ್ಯುನಿಸ್ಟ್ ಸರ್ಕಾರವು ಲ್ಯಾಮ್ ಡಾಂಗ್‌ನಲ್ಲಿರುವ ಅವರ ಝೆನ್ ಕೇಂದ್ರವನ್ನು ಬಲವಂತವಾಗಿ ಮುಚ್ಚಲು ಆಜ್ಞೆ ಹೊರಡಿಸಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಂ ಯುವಕನ ಜತೆ 4 ಮಕ್ಕಳ ತಾಯಿ ಎಸ್ಕೇಪ್​ ಪ್ರಕರಣ.

Sun Jan 22 , 2023
ಗದಗ: ನಾಲ್ಕು ಮಕ್ಕಳ ತಾಯಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ನಾಪತ್ತೆಯಾಗಿ, ಮತಾಂತರಗೊಳ್ಳುವ ಮೂಲಕ ಆತನನ್ನು ಮದುವೆಯಾಗುವ ಆಗಿದ್ದಾಳೆ ಎನ್ನಲಾದ ಪ್ರಕರಣವೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಓಡಿಹೋಗಿದ್ದ ಆ ತಾಯಿಯನ್ನು ಪತ್ತೆ ಮಾಡಿ ಪೊಲೀಸರು ವಿಚಾರಣೆ ನಡೆಸಿದ್ದು, ನಾನು ಮತಾಂತರವೇ ಆಗಿಲ್ಲ ಎನ್ನುತ್ತಿದ್ದಾಳೆ. ಹೇಮಾವತಿ ಎಂಬಾಕೆ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿ ಮತಾಂತರಗೊಂಡು ಮದುವೆಯಾಗಿದ್ದಾಳೆ ಎಂದು ಆಕೆಯ ಗಂಡ ಪ್ರಕಾಶ ಗುಜರಾತಿ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾದಿಂದ ಹೇಮಾವತಿಯನ್ನು ಕರೆದುಕೊಂಡು ಬಂದು ಗದಗಿನ […]

Advertisement

Wordpress Social Share Plugin powered by Ultimatelysocial