ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ:

ಳ್ಳಾರಿ ಜಿಲ್ಲೆಯ ಸಂಡೂರಿನ ಎಸ್​ಆರ್​ಎಸ್ ಮೈದಾನದಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಭಾಷಣ ಮಾಡಿದ ಕೇಂದ್ರ ಸಚಿವ ಅಮಿತ್ ಶಾ ಅವರು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಳ್ಳಾರಿ: ಈ ಬಾರಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಪೂರ್ಣ ಬಹುಮತದಲ್ಲಿ ಬಿಜೆಪಿ ಅಧಿಕಾರಕ್ಕೆBJP Govt)  (ಬರಲಿದೆ ಎಂದು ಕೇಂದ್ರ ಗೃಹಸಚಿವ(Amit Shah) ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಸಂಡೂರು ಪಟ್ಟಣದಲ್ಲಿರುವ ಎಸ್​ಆರ್​ಎಸ್​ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ (Ballari BJP Vijay Sankalp Convention) ಕಾರ್ಯಕರ್ತರ ಹಾಗೂ ಅಭಿಮಾನಿಗಳನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರಿಂದ ಜೋರಾದ ಶಬ್ದದೊಂದಿಗೆ ಜಯಘೋಷಗಳು ಮೊಳಗಿದವು. ಬಳಿಕ ಭಾಷಣ ಆರಂಭಿಸಿದ ಬಿಜೆಪಿ ಚಾಣಕ್ಯ, 2 ಗಂಟೆ ತಡವಾಗಿ ಬಂದಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಾನು ಸಂಡೂರು ಭೂಮಿಗೆ ಬಂದಿದ್ದೇನೆ. ಸಂಡೂರಿನ ಭೂಮಿಯ ಕುಮಾರಸ್ವಾಮಿಗೆ ನಮಸ್ಕರಿಸುವೆ, ವೀರ ಆಂಜನೇಯ ಅಂಜನಾದ್ರಿ ಭೂಮಿ, ಹಕ್ಕಬುಕ್ಕ ಭೂಮಿ, ಶ್ರೀಕೃಷ್ಣ ದೇವರಾಯ ಭೂಮಿ ಇದಾಗಿದೆ ಎಂದರು.ಇನ್ನು, ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ಆರಂಭಿಸಿದ ಅಮಿತ್ ಶಾ, ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಪರಿವಾರವಾದಿ ಪಕ್ಷಗಳಾಗಿವೆ. ಪರಿವಾರವಾದಿ ಪಕ್ಷಗಳು ಬಡವರ ಕಲ್ಯಾಣ ಮಾಡುವುದಿಲ್ಲ, ಜೆಡಿಎಸ್​ಗೆ ಮತ ಹಾಕಿದರೆ ಅದು ಕಾಂಗ್ರೆಸ್​ಗೆ ಮತ ಹಾಕಿದಂತೆ. ಸಿದ್ದರಾಮಯ್ಯ ಅವಧಿಯಲ್ಲಿ ಅವರ ಹೈಕಮಾಂಡ್​ಗೆ ಕರ್ನಾಟಕ ATM ಆಗಿತ್ತು ಎಂದರು,ಅಂದು ಸಿದ್ದರಾಮಯ್ಯ ಅವರ ರಾಜ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಪಿಎಫ್​ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿದ್ದರು. ಆದರೆ ನರೇಂದ್ರ ಮೋದಿ ಅವರು ಈ ಸಂಘಟನೆಯನ್ನೇ ಬ್ಯಾನ್ ಮಾಡಿದ್ದಾರೆ ಎಂದರು. ಇನ್ನು ಕೇಂದ್ರದಲ್ಲಿದ್ದ ಅಂದಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಹಲವು ಬಾರಿ ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮೌನವಹಿಸಿತ್ತು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಾಯಿತು. ಆ ಮೂಲಕ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ನಾವು ತಕ್ಕ ಪಾಠ ಕಲಿಸಿದ್ದೇವೆ ಎಂದರು.ದೇಶದಲ್ಲಿ ಗ್ಯಾಸ್ ಸಂಪರ್ಕ ಇಲ್ಲದ ಮನೆಗಳಿಗೆ ನಾವು ಗ್ಯಾಸ್ ಸಂಪರ್ಕ ಕಲ್ಪಿಸಿದ್ದೇವೆ, ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ವ್ಯಾಕ್ಸಿನ್ ನೀಡುವ ಮೂಲಕ ಕರ್ನಾಟಕದ ಹಾಗೂ ದೇಶವನ್ನು ಕೋವಿಡ್ ಮುಕ್ತ ಮಾಡುವಲ್ಲಿ ಶ್ರಮಿಸಿದ್ದೇವೆ. ಪ್ರತಿ ರೈತರ ಖಾತೆಗೆ 6 ಸಾವಿರ ಹಣ ಹಾಕಲಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್​ 370 ರದ್ದುಗೊಳಿಸಲು ನಮ್ಮ ಸರ್ಕಾರ ಮುಂದಾದಾಗ ವಿರೋಧ ಪಕ್ಷಗಳು ವಿರೋಧಿಸಿದ್ದರು. ಆ ಮೂಲಕ ವಿಪಕ್ಷಗಳು ಕಾಶ್ಮೀರ ಪ್ರತ್ಯೇಕವಾಗಿಡಲು ಯತ್ನಿಸುತ್ತಿದ್ದವು. ಆದರೆ ನಾವು ಅದಕ್ಕೆಲ್ಲ ಬಗ್ಗದೆ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್​ 370 ತೆಗೆದುಹಾಕಿದ್ದೇವೆ. ಜಮ್ಮು ಕಾಶ್ಮೀರ ಭಾರತದ್ದು ಎಂದು ಸಾಬೀತು ಮಾಡಿದ್ದೇವೆ ಎಂದರು.ಅಮಿತ್ ಶಾಗೆ ಬೆಳ್ಳಿ ಗದೆ ಕಾಣಿಕೆ ನೀಡಿದ ಬಿಜಪಿ ನಾಯಕರುಸಮಾವೇಶದಲ್ಲಿ ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದಿಂದ ಅಮಿತ್ ಶಾಗೆ ಸನ್ಮಾನ ಮಾಡಲಾಯಿತು. ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಬೆಳ್ಳಿ ಗದೆ ನೀಡಿ, ಕುಮಾರಸ್ವಾಮಿ ದೇಗುಲದ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಲಾಯಿತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು ಮತ್ತಿತರರು ಸನ್ಮಾನಿಸಿ ಗೌರವಿಸಿದರು.ಬಳ್ಳಾರಿ ಸಮಾವೇಶ ಮುಗಿಸಿ ವಿಭಾಗದ ಅವಲೋಕನ ಸಭೆಗೆ ಅಮಿತ್ ಶಾ‌ ಹಾಜರ್ಸಮಾವೇಶದ ನಂತರ ಮೈದಾನದ ಪಕ್ಕದ ಶಿವಪುರ ಅರಮನೆಯಲ್ಲಿ ಆಯೋಜಿಸಲಾದ ಬಳ್ಳಾರಿ ವಿಭಾಗದ ಅವಲೋಕನ ಸಭೆಗೆ ಅಮಿತ್ ಶಾ ಅವರು ತೆರಳಿದರು. ಸಭೆಯಲ್ಲಿ ಸಚಿವರಾದ ಶ್ರೀರಾಮುಲು, ಶಶಿಕಲಾ ಜೊಲ್ಲೆ, ಸೇರಿದಂತೆ ಸಚಿವರು ಹಾಗೂ ಶಾಸಕರು ಆಗಮಿಸಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಜಿಲ್ಲೆಗಳ ಶಾಸಕರು, ಪ್ರಮುಖರ ಜೊತೆ ಪಕ್ಷ ಸಂಘಟನೆ, ಪ್ರಚಾರದ ಬಗ್ಗೆ ಶಾ ಸಭೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯಾ ದಬ್ಬೆ ಪ್ರಾಧ್ಯಾಪಕರು.

Thu Feb 23 , 2023
  ವಿಜಯಾ ದಬ್ಬೆ ಪ್ರಾಧ್ಯಾಪಕರಾಗಿ ಮತ್ತು ಬರಹಗಾರ್ರರಾಗಿ ಪ್ರಸಿದ್ಧರಾಗಿದ್ದರು. ಇಂದು ಅವರ ಸಂಸ್ಮರಣೆ ದಿನ. ವಿಜಯಾ ದಬ್ಬೆ ಅವರು 2018 ವರ್ಷದ ಫೆಬ್ರವರಿ 23 ರಂದು ಈ ಲೋಕವನ್ನಗಲಿದರು.1951ರ ಜೂನ್ 1ರಂದು ಬೇಲೂರಿನಲ್ಲಿ ಜನಿಸಿದ ವಿಜಯಾ ದಬ್ಬೆ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಪುಸ್ತಕ ಪ್ರಕಟಣೆ ಮತ್ತು ಪತ್ರಿಕಾ ಸಂಪಾದಕರಾಗಿ ಮತ್ತು ವಿಶಿಷ್ಟ ಲೇಖಕರಾಗಿ ವಿವಿಧಮುಖಿ ಸೇವೆ ಸಲ್ಲಿಸಿದ್ದರು.ಉದಯೋನ್ಮುಖ ಕವಯತ್ರಿಯಾಗಿ ಪ್ರತಿಷ್ಟಿತ ವರ್ಧಮಾನ ಪ್ರಶಸ್ತಿ ಗಳಿಕೆಯಿಂದ […]

Advertisement

Wordpress Social Share Plugin powered by Ultimatelysocial