ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ ದಂಡ ಪಡೆದ ಕಾನ್​ಸ್ಟೇಬಲ್​ ಅಮಾನತು

 

ಬೆಂಗಳೂರು: ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ 100 ರೂ. ದಂಡ ಪಡೆದು ನಂತರ ವಾಪಸ್​ ಕೊಟ್ಟ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.ಎಚ್​ಎಎಲ್​ ಸಂಚಾರ ಠಾಣೆ ಕಾನ್​ಸ್ಟೇಬಲ್​ ಪವನ್​ ದ್ಯಾಮಣ್ಣನವರ್​ ಅಮಾನತಿಗೆ ಒಳಗಾದವರು.ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ 100 ರೂ. ದಂಡ ಪಡೆದಿದ್ದರು. ಬೈಕ್​ ಸವಾರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ದಂಡವನ್ನು ಪೇದೆ ವಾಪಸ್​ ಕೊಟ್ಟಿದ್ದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿತ್ತು.ಸ್ಥಳದಲ್ಲಿ ದಂಡ ವಿಧಿಸುವ ಅಧಿಕಾರ ಎಎಸ್​ಐ ಮತ್ತು ಮೇಲ್ದರ್ಜೆ ಅಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಕಾನ್​ಸ್ಟೇಬಲ್​ ಮತ್ತು ಹೆಡ್​ ಕಾನ್​ಸ್ಟೇಬಲ್​ಗಳಿಗೆ ಈ ಅಧಿಕಾರ ಇಲ್ಲ. 15 ದಿನಗಳಿಂದ ಐಎಸ್​ಐ ಗುಣಮಟ್ಟದ ಹೆಲ್ಮೆಟ್​ ಧರಿಸುವಂತೆ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಆದರೆ, ಇಲ್ಲಿಯವರೆಗೂ ಸವಾರರಿಗೆ ದಂಡ ವಿಧಿಸುವಂತೆ ಯಾವುದೇ ಆದೇಶ ನೀಡಿಲ್ಲ. ಆಂತರಿಕ ವರದಿ ಪಡೆಯಲಾಗಿದೆ. ಕಾನ್​ಸ್ಟೇಬಲ್​ ತಪ್ಪು ಮಾಡಿರುವುದು ಕಂಡುಬಂದಿದೆ ಎಂದು ಜಂಟಿ ಪೊಲೀಸ್​ ಆಯುಕ್ತ (ಸಂಚಾರ) ಡಾ.ಬಿ.ಆರ್​. ರವಿಕಾಂತೇಗೌಡ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಯಾಲಯಗಳಲ್ಲಿ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಿರ್ಣಯ

Sat Feb 5 , 2022
ಬೆಂಗಳೂರು: ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ಹಾಗೂ ನ.26ರ ಸಂವಿಧಾನ ದಿನದಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇರಿಸಲು ತೀರ್ಮಾನ ಮಾಡಲಾಗಿದೆ.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣಪೀಠ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಸುತ್ತೋಲೆ ಹೊರಡಿಸಿ ಆಯಾ ನ್ಯಾಯಾಲಯಗಳ […]

Advertisement

Wordpress Social Share Plugin powered by Ultimatelysocial