ಟಾಲಿವುಡ್ ನಟ ನಾನಿಗೆ ನಾಯಕಿಯಾದ ಮೃಣಾಲ್ ಠಾಕೂರ್.

`ಸೀತಾರಾಮಂ’ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಇದೀಗ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಸಿಂಪಲ್ ಸ್ಟಾರ್ ನಾನಿಗೆ ನಾಯಕಿಯಾಗುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ.ಮೃಣಾಲ್ ಠಾಕೂರ್ ಇದೀಗ ಸೌತ್ ಸಿನಿಮಾಗಳ ಜೊತೆ ಬಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ.ಸದ್ಯ ನಾನಿ ಜೊತೆಗಿನ ಹೊಸ ಸಿನಿಮಾಗೆ ಮುಹೂರ್ತ ಕಾರ್ಯಕ್ರಮ ನಡೆದಿದೆ. ಸಿನಿಮಾ ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ.ಹೈದರಾಬಾದ್‌ನಲ್ಲಿ ಸರಳವಾಗಿ `ನಾನಿ 30′ ಚಿತ್ರದ ಮುಹೂರ್ತ ನೆರವೇರಿದೆ. ಕಾರ್ಯಕ್ರಮಕ್ಕೆ ಮೆಗಾಸ್ಟಾರ್‌ ಚಿರಂಜೀವಿ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್‌ ಶುರುವಾಗಲಿದೆ. ವಿಭಿನ್ನ ಕಥೆಯ ಮೂಲಕ ನಾನಿ- ಮೃಣಾಲ್ ಜೋಡಿ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.ನಾನಿ ಹೊಸ ಸಿನಿಮಾಗೆ ಶೌರ್ಯುವ್ ನಿರ್ದೇಶನ ಮಾಡ್ತಿದ್ದಾರೆ. ನಾನಿ ನಟನೆಯ ಹೊಸ ಚಿತ್ರದ ಮೂಲಕ ಮೃಣಾಲ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶಾಲಾಕ್ಷಿ ದಕ್ಷಿಣಾಮೂರ್ತಿ ಕನ್ನಡದ ಪ್ರಖ್ಯಾತ ಕಾದಂಬರಿಗಾರ್ತಿ.

Wed Feb 1 , 2023
  ವಿಶಾಲಾಕ್ಷಿ ದಕ್ಷಿಣಾಮೂರ್ತಿ ಕನ್ನಡದ ಪ್ರಖ್ಯಾತ ಕಾದಂಬರಿಗಾರ್ತಿಯಾಗಿ ಹೆಸರಾದವರು. ಕನ್ನಡ ಚಲನಚಿತ್ರರಂಗದ ಅಪಾರ ಜನಪ್ರಿಯ ಚಿತ್ರ ‘ಜೀವನ ಚೈತ್ರ’ಕ್ಕೆ ಮೂಲವಾದ ‘ವ್ಯಾಪ್ತಿ ಪ್ರಾಪ್ತಿ’ ಕಾದಂಬರಿಯೂ ಸೇರಿದಂತೆ ಅವರ ಕಾದಂಬರಿಗಳು ಅನೇಕ. ಇಂದು ಅವರ ಸಂಸ್ಮರಣೆ ದಿನ.ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರು 1935ರ ನವೆಂಬರ್ 18ರಂದು ಚಳ್ಳಕೆರೆಯಲ್ಲಿ ಜನಿಸಿದರು. ಅವರು ಜನಿಸಿದ್ದು ಸಾಹಿತ್ಯ, ಸಂಸ್ಕೃತಿ, ಆದರ್ಶಗಳಿಗೆ ಹೆಸರಾದ ತಳುಕು ಮನೆತನದಲ್ಲಿ. ತಂದೆ ತಳುಕಿನ ಶ್ರೀನಿವಾಸರಾಯರು ಮತ್ತು ತಾಯಿ ನಂಜಮ್ಮನವರು.ಎಸ್.ಎಸ್.ಎಲ್‌.ಸಿ. ವರೆಗೆ ಓದಿದ ವಿಶಾಲಾಕ್ಷಿ […]

Advertisement

Wordpress Social Share Plugin powered by Ultimatelysocial