ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ಮ ತ್ತೊಮ್ಮೆ ಟಾಲಿವುಡ್​​ಗೆ ಕಾಲಿಡುತ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್   ಮತ್ತೊಮ್ಮೆ ಟಾಲಿವುಡ್​​ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಶಿವಣ್ಣ, ಬಾಲಯ್ಯನ ಸಿನಿಮಾದಲ್ಲೂ ಅಭಿನಯಿಸಿದ್ದರು. ಅದಕ್ಕೂ ಮೊದಲು ಟಾಲಿವುಡ್​  ಚಿತ್ರರಂಗದಲ್ಲಿ ಶಿವಣ್ಣನ   ನಂಟು ಇದ್ದೇ ಇದೆ.
ಆದರೆ ಈಗ ಶಿವಣ್ಣ ಬೇರೆ ಚಿತ್ರದಲ್ಲಿ ಅಭಿನಯಿಸೋಕೆ ಹೋಗ್ತಿಲ್ಲ. ತಮ್ಮದೇ ಒಂದು ವಿಶೇಷ ಸಿನಿಮಾ ತೆಗೆದುಕೊಂಡು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರ ಈಗಾಗಲೇ ಕನ್ನಡದಲ್ಲಿ ಭಾರೀ ಸೌಂಡ್ ಮಾಡಿದೆ. ಈ ಚಿತ್ರದಲ್ಲಿ ಶಿವನ ಖದರ್   ಜೋರಾಗಿಯೇ ಬಂದಿದೆ. ಜನ ಕೂಡ ಈ ಚಿತ್ರವನ್ನ ಮೆಚ್ಚಿಕೊಂಡಾಡಿದ್ದಾರೆ. ಟಾಲಿವುಡ್​ನಲ್ಲೂ ಈ ಚಿತ್ರ ಮೋಡಿ ಮಾಡುತ್ತದೆ ಎಂಬ ಭರವಸೆ ಈಗಲೇ ಶುರು ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ .
ಟಾಲಿವುಡ್​ಗೆ ಶಿವಣ್ಣನ ಭರ್ಜರಿ ರೀ ಎಂಟ್ರಿ!
ಟಾಲಿವುಡ್ ಚಿತ್ರರಂಗ ಭರ್ಜರಿಯಾಗಿದೆ. ಇಲ್ಲಿ ನಿರ್ಮಾಣ ಆಗೋ ಚಿತ್ರಗಳು ದೊಡ್ಡ ಬಜೆಟ್ ಚಿತ್ರಗಳೇ ಆಗಿರುತ್ತವೆ. ಇಂತಹ ಈ ಇಂಡಸ್ಟ್ರಿಯಲ್ಲಿ ಕನ್ನಡದ ಕಲಾವಿದರೂ ಈಗೀಗ ಮಿಂಚುತ್ತಿದ್ದಾರೆ. ಡಾಲಿ ಧನಂಜಯ್, ದುನಿಯಾ ವಿಜಯ ಇಲ್ಲಿ ಹೆಸರು ಮಾಡಿದ್ದಾರೆ.  ಟಾಲಿವುಡ್​​ಗೆ ಮತ್ತೆ ಕಾಲಿಡ್ತಿರೋ ಹ್ಯಾಟ್ರಿಕ್ ಹೀರೋ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಇವರೆಲ್ಲರಿಗಿಂತಲೂ ಮೊದಲೇ ಅಭಿನಯಿಸಿ ಬಂದಿದ್ದಾರೆ. ಟಾಲಿವುಡ್​​ನ ಬಾಲಯ್ಯ ಅಭಿನಯದ ಗೌತಮಿ ಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವಣ್ಣ ಕ್ಯಾಮಿಯೋ ರೋಲ್ ಮಾಡಿದ್ದರು.
ಟಾಲಿವುಡ್​ನ ಯಾವ ಚಿತ್ರದಲ್ಲಿ ಶಿವಣ್ಣನ ಅಭಿನಯ
ಟಾಲಿವುಡ್​ನಲ್ಲಿ ಶಿವರಾಜ್​ ಕುಮಾರ್ ಅಭಿನಯಿಸೋದು ಪಕ್ಕಾ ಆಗಿದೆ. ಹಾಗೆ ಒಪ್ಪಿಕೊಂಡಿರೋ ಈ ಚಿತ್ರದ ಕಥೆ ಕನ್ನಡದಲ್ಲಿ ಈಗಾಗಲೇ ಹಿಟ್ ಆಗಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಭರ್ಜರಿಯಾಗಿಯೇ ಅಭಿನಯಿಸಿದ್ದಾರೆ. ಜನರ ಮನಸು ಕೂಡ ಗೆದ್ದಿದ್ದಾರೆ.
ಹೌದು, ಶಿವರಾಜ್​ ಕುಮಾರ್ ಟಾಲಿವುಡ್​ಗೆ ತಮ್ಮ ವೇದ ಚಿತ್ರವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ದಿಲ್ ಕದ್ದ ಶಿವರಾಜ್​ ಕುಮಾರ್ ಈಗ ತಮ್ಮ ನಿರ್ಮಾಣದ ವೇದ ಸಿನಿಮಾವನ್ನ ಟಾಲಿವುಡ್​ನಲ್ಲೂ ರಿಲೀಸ್ ಮಾಡುತ್ತಿದ್ದಾರೆ.

ಟಾಲಿವುಡ್​ನ ತೆಲುಗು ಭಾಷೆಯಲ್ಲಿ ವೇದ ಚಿತ್ರ ರಿಲೀಸ್
ಕನ್ನಡದ ವೇದ ಸಿನಿಮಾ ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತದೆ ಅನ್ನೋದನ್ನ ಶಿವರಾಜ್​ಕುಮಾರ್ ಹೇಳಿಕೊಂಡಿದ್ದರು. ಕನ್ನಡ ವೇದ ಚಿತ್ರದ ಪ್ರಮೋಷನ್ ದಿನಗಳಲ್ಲಿ ಈ ವಿಷಯವನ್ನ ಸ್ವತಃ ಶಿವಣ್ಣ ಹೇಳಿಕೊಂಡಿದ್ದರು. ಅದರಂತೆ ಕನ್ನಡದ ವೇದ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ಕನ್ನಡದಲ್ಲಿ ವೇದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈ ಚಿತ್ರದ ಮೂಲಕ ಶಿವಣ್ಣ ಕನ್ನಡದ ಪ್ರೇಕ್ಷಕರಿಗೆ ಹೊಸ ರೀತಿ ಕಾಣಿಸಿಕೊಂಡರು. ಜನರ ಹೃದಯದಲ್ಲಿ ಒಂದು ಜಾಗೃತಿ ಕೂಡ ಮೂಡಿಸಿದ್ದರು.
ಕನ್ನಡದಲ್ಲಿ 50 ದಿನ ಪೂರೈಸಿದ ವೇದ ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಅಭಿನಯದ ವೇದ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಬಹು ನಿರೀಕ್ಷೆಯೊಂದಿಗೆ ಡಿಸೆಂಬರ್-23 ರಂದು ರಾಜ್ಯದೆಲ್ಲೆಡೆ ವೇದ ರಿಲೀಸ್ ಆಗಿತ್ತು. ಒಳ್ಳೆ ಓಪನಿಂಗ್​ನೊಂದಿಗೆ ಕನ್ನಡ ನಾಡಿನ ಜನರ ಹೃದಯವನ್ನ ಕನ್ನಡದ ವೇದ ಗೆದ್ದೆ ಬಿಟ್ಟಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತ್ಯಂತ ವೇಗವಾಗಿ 400 ಕೋಟಿ ಕ್ಲಬ್ ಸೇರಿದ ಪಠಾಣ್:

Sun Jan 29 , 2023
ಸುಮಾರು 4 ವರ್ಷಗಳ ಬಿಡುವಿನ ನಂತರ ಬಿಡುಗಡೆಯಾದ ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರ ಅತ್ಯಂತ ವೇಗವಾಗಿ 400 ಕೋಟಿ ರೂ. ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನವರಿ 25ರಂದು ಜಗತ್ತಿನಾದ್ಯಂತ ಏಕಾಕಾಲದಲ್ಲಿ ಬಿಡುಗಡೆ ಆದ ಪಠಾಣ್ ಚಿತ್ರ 4 ದಿನದಲ್ಲಿ 400 ಕೋಟಿ ರೂ.ಗೂ ಅಧಿಕ ಮೊತ್ತ ಗಳಿಸಿ ದಾಖಲೆ ಬರೆದಿದೆ. ವಿಶೇಷ ಅಂದರೆ ಭಾರತದಲ್ಲೇ 200 ಕೋಟಿ ರೂ. ಗಳಿಸಿದೆ. ಶುಕ್ರವಾರದ ವೇಳೆ ಭಾರತದಲ್ಲಿ […]

Advertisement

Wordpress Social Share Plugin powered by Ultimatelysocial