ಟಾಲಿವುಡ್ ನಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಎಂಟ್ರಿ..!ಖಳನಾಯಕನಾಗಿ ಬಾಲಯ್ಯನ ವಿರುದ್ಧ ‘ಸಲಗ’ನ ಅಬ್ಬರ

ಟಾಲಿವುಡ್ ನಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಎಂಟ್ರಿ..!ಖಳನಾಯಕನಾಗಿ ಬಾಲಯ್ಯನ ವಿರುದ್ಧ 'ಸಲಗ'ನ ಅಬ್ಬರ

ದುನಿಯಾ ಮೂಲಕ ನಾಯಕನಟನಾಗಿ ಎಂಟ್ರಿಯಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ‘ಸಲಗ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದವರು. ಸಲಗ ಸಿನಿಮಾದಲ್ಲಿ ನಟನೆ ಜೊತೆ ನಿರ್ದೇಶಕ ಜವಾಬ್ದಾರಿ ಹೊತ್ತು ದುನಿಯಾ ವಿಜಯ್​ ಸಕ್ಸಸ್​ ಆಗಿದ್ದಾರೆ. ಸ್ಯಾಂಡಲ್​ವುಡ್ನಲ್ಲಿ ಕರಿಚಿರತೆ ಸಾಮರ್ಥ್ಯ ಏನು ಎಂಬುದನ್ನು ಸಲಗ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದಾರೆ.

ಸಲಗ ಬಳಿಕ ದುನಿಯಾ ವಿಜಯ್‌ಗೆ ಮತ್ತೊಂದು ಅದೃಷ್ಟದ ಬಾಗಿಲು ತೆರೆದಿದೆ. ದುನಿಯಾ ವಿಜಯ್‌ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಈ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿದೆ.

ದುನಿಯಾ ವಿಜಯ್ ಸೈಡ್ ಆರ್ಟಿಸ್ಟ್​, ಜೂನಿಯರ್ ಆರ್ಟಿಸ್ಟ್​, ಫೈಟರ್​ ಆಗಿ ಸ್ಯಾಂಡಲ್​ವುಡ್​ನಲ್ಲಿ ನೆಲೆ ಕಂಡುಕೊಳ್ಳಲು ಹೋರಾಟ ನಡೆಸಿದವರು. ಟೈಗರ್​ ಪ್ರಭಾಕರ್​ರಂತೆ ಮಾಸ್ ಸಿನಿಮಾಗಳಿಗೆ ದುನಿಯಾ ವಿಜಯ್ ಟ್ರೇಡ್​ ಮಾರ್ಕ್ ಆದವರು. ಸಲಗ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸೆಕಂಡ್​ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಇದೀಗ ಹೊಸ ವಿಚಾರ ಏನಪ್ಪ ಅಂದರೆ, ದುನಿಯಾ ವಿಜಯ್​ ಟಾಲಿವುಡ್ ಅಖಂಡನ ವಿರುದ್ಧ ತೊಡೆ ತಟ್ಟಲಿದ್ದಾರೆ.ಸಲಗ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ವಿಜಯ್ ಹೆಜ್ಜೆ ಇಟ್ಟಿದ್ದಾರೆ.

https://www.instagram.com/p/CXpogKXPLy0/?utm_source=ig_embed&ig_rid=4c47abfd-05ca-4330-a55b-d33ef1284860

ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್​ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ? ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದೆ. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ದುನಿಯಾ ವಿಜಯ್​ ಅವರ ಮುಂದಿನ ಟಾಲಿವುಡ್ ಸಿನಿಮಾದ ಲುಕ್​ ರಿವೀಲ್​ ಆಗಿದೆ. ಕರಿಚಿರತೆ ನ್ಯೂ ಲುಕ್​ ಕಂಡು ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

''ಓಮಿಕ್ರಾನ್'' ತಡೆಗೆ ಸರ್ಕಾರದಿಂದ ಹೊಸ ಗೈಡ್ ಲೈನ್ಸ್ ಬಿಡುಗಡೆ..! ರಾಜ್ಯದಲ್ಲಿ ಏನಿರುತ್ತೆ, ಏನಿರಲ್ಲ..?

Mon Dec 27 , 2021
ಬೆಂಗಳೂರು : ಓಮಿಕ್ರಾನ್​ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಂಗಳವಾರದಿಂದಲೇ ರಾಜ್ಯದಲ್ಲಿ ನ್ಯೂ ಇಯರ್ ಕರ್ಫ್ಯೂ ಜಾರಿಯಾಗಲಿದ್ದು, 10 ದಿನಗಳ ಕಾಲ ರಾಜ್ಯದಲ್ಲಿ ರಾತ್ರಿ 10ಗಂಟೆಯಿಂದ ಬೆಳಗ್ಗೆ 5 ರ ವರೆಗೆ ನೈಟ್​​ ಕರ್ಫ್ಯೂ ಇರುತ್ತದೆ. ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಹಲವು ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದ್ದು, 4 ದಿನ ರೆಸ್ಟೋರೆಂಟ್, ಹೋಟೆಲ್​ ಸೇರಿದಂತೆ ಕ್ಲಬ್​, ಪಬ್​ಗಳಲ್ಲೂ ಶೇ.50ರಷ್ಟು ಸೀಟಿಂಗ್​ಗೆ ಅನುಮತಿ ನೀಡಲಾಗಿದೆ. ಡಿ.30 ರಿಂದ ಜ.2ರ ವರೆಗೆ ಶೇ.50ರಷ್ಟು […]

Advertisement

Wordpress Social Share Plugin powered by Ultimatelysocial