ತೋತಾಪುರಿ ಟ್ರೇಲರ್’ಗೆ ಸುದೀಪ್ ಸಾಥ್

ಕಿಚ್ಚನ ಕೈಲಿ ತೋತಾಪುರಿ

ನವರಸ ನಾಯಕ ಜಗ್ಗೇಶ್ ನಟಿಸಿರುವ ‘ತೋತಾಪುರಿ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡಿನ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ ‘ತೋತಾಪುರಿ’ ಟ್ರೇಲರ್ ಏಪ್ರಿಲ್ 21ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ತೋತಾಪುರಿ ಟ್ರೇಲರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.

ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್’ನಲ್ಲಿ ಈಗಾಗಲೇ ‘ನೀರ್’ದೋಸೆ’ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಇದೇ ಜೋಡಿ ಈಗ ‘ತೋತಾಪುರಿ’ ಮೂಲಕ ಕಮಾಲ್ ಮಾಡಲು ಹೊರಟಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ನೂರೈವತ್ತು ಮಿಲಿಯನ್’ಗೂ ಅಧಿಕ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ.

ಈ ವಾರ ‘ಕೆಜಿಎಫ್-2’ ವಿಶ್ವಾದ್ಯಂತ ತೆರೆಕಂಡಿದೆ. ಅದಾದ ಬಳಿಕ ಅತಿಹೆಚ್ಚು ಗಮನ ಸೆಳೆದಿರುವ ಸಿನಿಮಾಗಳ ಪೈಕಿ ಮೊದಲಿಗೆ ‘ತೋತಾಪುರಿ’ ಮೊದಲನೆಯ ಭಾಗ ರಿಲೀಸ್ ಆಗಲಿದೆ. ದೇಶ-ವಿದೇಶದಲ್ಲೂ ಹಾಡು ಗಮನ ಸೆಳೆದಿತ್ತು. ಈಗ ಟ್ರೇಲರ್ ಮೂಲಕ ಜಗತ್ತಿನಾದ್ಯಂತ ಮತ್ತಷ್ಟು ಸೌಂಡು ಮಾಡಲು ಚಿತ್ರತಂಡ ಸಜ್ಜಾಗಿದೆ.

ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ‘ಡಾಲಿ’ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮ‍ದತ್ ಮೊದಲಾದವರ ತಾರಾಗಣ ಈ ಚಿತ್ರದಲ್ಲಿದೆ. ಸುರೇಶ್ ಅರಸ್ ಸಂಕಲನ, ನಿರಂಜನ್ ಬಾಬು ಕ್ಯಾಮೆರಾ ಕೆಲಸ ಈ ಚಿತ್ರಕ್ಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವರು ಹೆಚ್ಚು ಕ್ರಿಕೆಟ್ ಆಡಿಲ್ಲ':ದಿನೇಶ್ ಕಾರ್ತಿಕ್ ಅವರ ಬಿರುಸಿನ ಫಾರ್ಮ್ ಡಿವಿಲಿಯರ್ಸ್ ಅನ್ನು ದಿಗ್ಭ್ರಮೆಗೊಳಿಸಿತು!

Wed Apr 20 , 2022
ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ (ಐಪಿಎಲ್) ದಿನೇಶ್ ಕಾರ್ತಿಕ್ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ. ಐಪಿಎಲ್‌ನಲ್ಲಿ ಕಾರ್ತಿಕ್ ಅವರ ಪ್ರದರ್ಶನವು ನಿವೃತ್ತಿಯಿಂದ ಹೊರಬಂದು ಮತ್ತೆ ಕ್ರಿಕೆಟ್ ಆಡಲು ಅವರನ್ನು ಬಹುತೇಕ ಮನವರಿಕೆ ಮಾಡಿದೆ ಎಂದು ಡಿವಿಲಿಯರ್ಸ್ ಟೀಕಿಸಿದ್ದಾರೆ. ಕಾರ್ತಿಕ್ ಸ್ಪರ್ಧೆಯುದ್ದಕ್ಕೂ ತನ್ನ ವೇಗವನ್ನು ಮುಂದುವರಿಸಿದರೆ, RCB ಈ ಋತುವಿನಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ ಎಂದು ಡಿವಿಲಿಯರ್ಸ್ ಹೇಳಿದರು. “ಅವರು […]

Advertisement

Wordpress Social Share Plugin powered by Ultimatelysocial