ಮರಗಳು(Trees) ಪ್ರಾಕೃತಿಕ ಸಂಪತ್ತು. ಹಸಿರೇ ಉಸಿರು,!

ಮರಗಳು  ಪ್ರಾಕೃತಿಕ ಸಂಪತ್ತು. ಹಸಿರೇ ಉಸಿರು, ಕಾಡಿದ್ದರೆ ನಾಡು ಎಂಬ ಘೋಷಾವಾಕ್ಯಗಳನ್ನು ಕೇಳುತ್ತಾ ಬೆಳೆದವರೇ ಎಲ್ಲರೂ. ಆದರೂ ಮನುಷ್ಯ ಮೂರ್ಖತನದಿಂದ ವರ್ತಿಸುವುದು ಮಾತ್ರ ನಡೆಯುತ್ತಲೇ ಇರುವ ಘಟನೆ. ಬಹಳಷ್ಟು ಸಲ ಜನರು ಹೀಗೆ ಅತಿರೇಕವಾಗಿ ವರ್ತಿಸುತ್ತಾರೆ.ಜನರಿಗೆ ನೆರಳು, ಗಾಳಿ, ಹೂ, ಹಣ್ಣು ಕೊಡುವ ಮರಗಳನ್ನು  ನಮ್ಮಂತೆಯೇ ಬದುಕುವ ಜೀವ ಸಂಪತ್ತಾಗಿ ಜನರು ಕಾಣುವುದೇ ಇಲ್ಲ, ಇದೀಗ ಬೆಂಗಳೂರಿನಲ್ಲಿ  ಸುಮಾರು 35 ವರ್ಷ ಹಳೆಯ ಮರದ ಬೇರುಗಳಿಗೆ ಆಸಿಡ್  ಎರೆಯಲಾಗಿದೆ. ನೀರನ್ನು ಹೀರಿ, ಮಣ್ಣನನ್ನೂ ಹಿಡಿದಿಟ್ಟುಕೊಂಡು, ನೀರನ್ನು ಇಂಗಿಸುವ ಮರಗಳ ಬಗ್ಗೆ ಸ್ವಲ್ಪ ಕಾಳಜಿಯನ್ನೂ ಮನುಷ್ಯರು ತೋರಿಸುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಇದು.
ಬೆಂಗಳೂರು ಎಂದ ಮೇಲೆ ಹೇಳಬೇಕಿಲ್ಲ. ಇದು ಗಾರ್ಡನ್ ಸಿಟಿ  ಚಂದ ಚಂದ ಉದ್ಯಾನಗಳು, ಬಹಳಷ್ಟು ಹಳೆಯ ಮರಗಳೂ ಇರುವ ಚಂದದ ಊರು. ಆದರೆ ಬೆಂಗಳೂರಿನ ಹಳೆಯ ಮರಗಳಿಗೆ ಸಮಸ್ಯೆಯಾಗೋದು ಮಾತ್ರ ತಪ್ಪುವುದೇ ಇಲ್ಲ, ರಸ್ತೆ ಅಗಲೀಕರಣ, ಮೆಟ್ರೋ ಲೈನ್ , ಕಟ್ಟಗಳ ನಿರ್ಮಾಣ  ಹೀಗೆ ಒಂದಾ ಎರಡಾ ಪ್ರತಿ ಬಾರಿ ಈ ರೀತಿಯ ಸಮಸ್ಯೆಗಳು  ಆಗುತ್ತಲೇ ಇರುತ್ತವೆ. ಇದೀಗ ಕಿಡಿಗೇಡಿಗಳು 35 ವರ್ಷ ಹಳೆಯ ಮರ ಎನ್ನುವ ಮಮತೆಯೂ ಇಲ್ಲದೆ ಅದರ ಬುಡಕ್ಕೆ ಆಸಿಡ್ ಸುರಿದುಬಿಟ್ಟಿದ್ದಾರೆ.
ಇದೀಗ ಬೆಂಗಳೂರಿನ ಅರಣ್ಯ ವಿಭಾಗ  ಸೋಮವಾರದಂದು ದೂರು ದಾಖಲಿಸಿದ್ದು, 35 ವರ್ಷ ಹಳೆಯ ಮರದ ಬುಡಕ್ಕೆ ಆಸಿಡ್ ಸುರಿದಿರುವ ಅಪರಿಚಿತರ ವಿರುದ್ಧ ದೂರು ಕೊಟ್ಟಿದ್ದಾರೆ. ರೇಂಜ್ ಫಾರೆಸ್ಟ್ ಆಫೀಸರ್ ನರೇಂದ್ರ ಬಾಬು ಆರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಒಂದು ಸ್ಥಳಕ್ಕೆ ಭೇಟಿಕೊಟ್ಟಿದ್ದೆ. ಪೊಲೀಸರು  ಈ ವಿಚಾರವಾಗಿ ತನಿಖೆ ಮಾಡುತ್ತಿದ್ದಾರೆ. ಕಿಡಿಗೇಡಿಗಳನ್ನು ಸುಮಾರು 11 ಕಡೆಗಳಲ್ಲಿ ಮರಗಳ ಬೇರುಗಳನ್ನು ಅಗೆದು ಆಸಿಡ್ ಎರೆದಿದ್ದಾರೆ. ಮರದ ತುದಿ ಈಗ ಒಣಗಿ  ಹೋಗಿದೆ ಎಂದಿದ್ದಾರೆ.
ಸೆಪ್ಟೆಂಬರ್ 2021 ರಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅಂಗಡಿ ಮಾಲೀಕರಿಗೆ, ಕೇಬಲ್ ಆಪರೇಟರ್‌ಗಳಿಗೆ . ಜಾಹೀರಾತುದಾರರಿಗೆ, ಬೋರ್ಡ್, ಲೈಟ್ಸ್, ಪೇಪರ್‌ಗಳನ್ನು ಮರದ ಗೆಲ್ಲುಗಳಿಗೆ ಹಾಕದಂತೆ ಸೂಚನೆ ನೀಡಲಾಗಿತ್ತು.
ನಗರ ಮರಗಳ ಸಂರಕ್ಷಣಾಧಿಕಾರಿ ವಿಜಯ್ ನಿಶಾಂತ್, ಹಾಗೂ ಸ್ಥಳೀಯ ನಿವಾಸಿಗಳು ಗುಂಡಿಗಳನ್ನು ಸ್ವಚ್ಛಗೊಳಿಸಿ ಶಿಲೀಂಧ್ರನಾಶಕವನ್ನು ತುಂಬಿಸಿದ್ದಾರೆ. ಒಂದು ತಿಂಗಳ ಹಿಂದೆ ರಂಧ್ರಗಳನ್ನು ಕೊರೆಯಲಾಗಿದ್ದು, ಅದರ ಎಲೆಗಳು ಒಣಗುತ್ತಿವೆ ಎಂದು ಅವರು ಹೇಳಿದ್ದಾರೆ. ಕೊರೋನಾ ಸಮಯದಲ್ಲಿ, ಇಂತಹ ಘಟನೆಗಳು ಬೆಳಕಿಗೆ ಬರುತ್ತಿರಲಿಲ್ಲ. ಎರಡು ವರ್ಷಗಳ ಬಿಡುವಿನ ನಂತರ ಮರದ ಬುಡಕ್ಕೆ ಆಯಸಿಡ್ ಸುರಿದ ಪ್ರಕರಣವನ್ನು ಕಣ್ಣಾರೆ ಕಂಡಿದ್ದೇನೆ. ಮರದ ಉಳಿವು ಕಷ್ಟ, ಆದರೆ ಅದರ ಆರೋಗ್ಯವನ್ನು ಗಮನಿಸುತ್ತಲೇ ಇರುತ್ತೇನೆ. ಅಕಾಲಿಕವಾಗಿ ಮರಗಳು ಒಣಗುವ ಇಂತಹ ಘಟನೆ ನೋಡಿದಾಗ, ಸುತ್ತಲಿನ ಜನರು ಬೇರುಗಳಿಗೆ ಉದ್ದೇಶಪೂರ್ವಕ ಹಾನಿಯಾಗಿದೆಯೇ ಎಂದು ಪರಿಶೀಲಿಸಬೇಕು ಎಂದಿದ್ದಾರೆ.ಅರಣ್ಯ ವಿಭಾಗಕ್ಕೆ ಲೋಕಾಯುಕ್ತರು ಆದೇಶ ನೀಡಿದ್ದು ಈ ರೀತಿ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯಾರಾದರೂ ಮರ ಅಥವಾ ಮರದ ಕೊಂಬೆಗಳಿಗೆ ಹಾನಿ ಮಾಡಿದರೆ, ಅದನ್ನು ನೋಡಿಕೊಳ್ಳುವುದು ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆಯ ಕೆಲಸ. ನ್ಯಾಯವ್ಯಾಪ್ತಿಯ ಪೋಲೀಸರ ನೆರವಿನೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PM:ಲತಾ ಮಂಗೇಶ್ಕರ್ ಅವರ ಬ್ರೋ ವಜಾ, ಕಿಶೋರ್ ಕುಮಾರ್ ಹಾಡುಗಳ ಮೇಲೆ ನಿಷೇಧ;

Tue Feb 8 , 2022
ಕಳೆದ ವಾರ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಸಂಬಂಧಿಸಿದ “ಇತಿಹಾಸದ ತುಣುಕನ್ನು” ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಹಿರಂಗಪಡಿಸಿದ್ದಾರೆ. ವೀರ್ ಸಾವರ್ಕರ್ ಕುರಿತು ಕವಿತೆ ವಾಚಿಸಿದ್ದಕ್ಕಾಗಿ ಮಂಗೇಶ್ಕರ್ ಅವರ ಕಿರಿಯ ಸಹೋದರ ಹೃದಯನಾಥ್ ಅವರನ್ನು ಆಲ್ ಇಂಡಿಯಾ ರೇಡಿಯೊದಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಸಂಸದರಿಗೆ ತಿಳಿಸಿದರು. ತುರ್ತು ಪರಿಸ್ಥಿತಿಯಲ್ಲಿ ಗಾಯಕ ಕಿಶೋರ್ ಕುಮಾರ್ ಅವರನ್ನು ರೇಡಿಯೊದಲ್ಲಿ ಹಾಡುವುದನ್ನು ಹೇಗೆ ನಿಷೇಧಿಸಲಾಯಿತು ಎಂಬುದನ್ನು ಅವರು […]

Advertisement

Wordpress Social Share Plugin powered by Ultimatelysocial