ಸಂಜೆ ಸುರಿಯುತ್ತಿರುವ ಮಳೆ ಹಾನಿಯನ್ನು ಉಂಟು ಮಾಡುತ್ತಿದೆ. ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ.

ಸಂಜೆ ಸುರಿಯುತ್ತಿರುವ ಮಳೆ ಹಾನಿಯನ್ನು ಉಂಟು ಮಾಡುತ್ತಿದೆ. ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಶುಕ್ರವಾರ ಸಂಜೆಯೂ ನಗರದಲ್ಲಿ ಮಳೆಯಾಗಿದೆ. ವಿಲ್ಸನ್ ಗಾರ್ಡನ್, ಕೆ. ಆರ್. ಮಾರುಕಟ್ಟೆ, ಎಂ. ಜಿ. ರಸ್ತೆ, ಜಯನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ.

ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು. ಬೈಕ್ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚಾರನಡೆಸಲು ಪರದಾಟ ನಡೆಸಿದರು. ಉತ್ತರಹಳ್ಳಿಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ರಸ್ತೆಗಳು ಜಲಾವೃತವಾದ ಪರಿಣಾಮ ಚಾಲುಕ್ಯ ಸರ್ಕಲ್, ಶಿವಾನಂದ ವೃತ್ತ, ಹಡ್ಸನ್ ಸರ್ಕಲ್, ಬ್ರಿಗೇಡ್ ರೋಡ್, ಆನಂದರಾವ್ ಸರ್ಕಲ್ ಮುಂತಾದ ಕಡೆ ಕೆಲವು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮಳೆಯಿಂದಾಗಿ ರಸ್ತೆಗಳ ನೀರು ಬಡಾವಣೆಗಳಿಗೆ ನುಗ್ಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಮಗಾರಿಗಳು, ಚರಂಡಿ ಅವ್ಯವಸ್ಥೆಯ ಕಾರಣ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಳೆ ಬಂದಾಗ ಆದ ಅನಾಹುತಗಳ ಬಗ್ಗೆ ಯಾರಿಗೆ ದೂರು ಕೊಡುವುದು?. ಈಗ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ, ಅಧಿಕಾರಗಳದ್ದೇ ಕಾರುಬಾರು. ಹೀಗಾಗಿ ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕಾರ ಮಾಡುವುದಿಲ್ಲ ಎಂಬ ಆರೋಪ ಸಹ ಇದೆ.

ದೂರು ಕೊಡಗು ಸಂಖ್ಯೆಗಳು; ಮಳೆ ಇಂದ ಆದ ಹಾನಿ ಕುರಿತು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಅಥವ ನಿಮ್ಮ ವಾರ್ಡ್‌ ಕಚೇರಿಗೆ ದೂರು ನೀಡಬಹುದು. ಇ-ಮೇಲ್ ಮೂಲಕವೂ ದೂರು ನೀಡಬಹುದಾಗಿದೆ.

* ಬಿಬಿಎಂಪಿ ಮುಖ್ಯ ಕಚೇರಿ ದೂರವಾಣಿ ಸಂಖ್ಯೆ 808-22660000

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟಅದು ಡಿಕೆ ಶಿವಕುಮಾರ್ ಮಾತ್ರ ಎಂದು ಬಿಜೆಪಿ ಲೇವಡಿ ಮಾಡಿದೆ.

Sat Apr 16 , 2022
ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಎನ್ನುವವರೊಬ್ಬರಿದ್ದರೆ ಅದು ಡಿಕೆ ಶಿವಕುಮಾರ್ ಮಾತ್ರ ಎಂದು ಬಿಜೆಪಿ ಲೇವಡಿ ಮಾಡಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ತಿಹಾರ್ ಜೈಲು ಸೇರಿ ಗಡ್ಡ ಬೆಳೆಸಿದ ಮಾತ್ರಕ್ಕೆ ಡಿಕೆ ಶಿವಕುಮಾರ್ ಅವರ ಪಾಪಕರ್ಮಗಳು ಬತ್ತಿ ಹೋಗುವುದೇ? ಭ್ರಷ್ಟತೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹಾಸ್ಯಾಸ್ಪದವಲ್ಲವೇ? ಸುಮಾರು 50 ದಿನಗಳ ತಿಹಾರ್ ಜೈಲು ವಾಸ, ಜೈಲಿನಿಂದ ಬಂದ ಕೂಡಲೇ ಕೆಪಿಸಿಸಿ […]

Advertisement

Wordpress Social Share Plugin powered by Ultimatelysocial