ಟ್ರಕ್‌ನಲ್ಲಿ ಶೇ 60ರಷ್ಟು ಆಕಳುಗಳ ಹಾಗೂ ಶೇ 40ರಷ್ಟು ಎಮ್ಮೆಗಳ ಚರ್ಮ : ಎಮ್ಮೆ ಚರ್ಮ ತುಂಬಿದ್ದ ಟ್ರಕ್ ವಶ

ಎಮ್ಮೆ ಚರ್ಮ ತುಂಬಿದ್ದ ಟ್ರಕ್ ವಶ

ಸಾರ್ವಜನಿಕರು ನೀಡಿದ್ದ ಮಾಹಿತಿ ಆಧರಿಸಿ ತಾಲ್ಲೂಕಿನ ಮಾರಿಹಾಳ ಠಾಣೆ ಪೊಲೀಸರು ಒಂದು ಟ್ರಕ್ ಗೋವು ಹಾಗೂ ಎಮ್ಮೆಗಳ ಚರ್ಮವನ್ನು ಈಚೆಗೆ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಠಾಣೆಗೆ ಭೇಟಿ ನೀಡಿ ಪ್ರಕರಣದ ಸಂಪೂರ್ಣ ವಿವರ ಪಡೆದರು.

‘ಡಿ.10ರಂದು ರಾತ್ರಿ ಬಂಕ್‌ವೊಂದರಲ್ಲಿ ಡೀಸೆಲ್ ತುಂಬಿಸುತ್ತಿದ್ದ ಟ್ರಕ್‌ನಿಂದ ರಕ್ತಮಿಶ್ರಿತ ನೀರು ಹರಿಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರು ಟ್ರಕ್ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ’ ಎಂದು ಸಚಿವರು ತಿಳಿಸಿದರು.

‘ಟ್ರಕ್‌ನಲ್ಲಿ ಶೇ 60ರಷ್ಟು ಆಕಳುಗಳ ಹಾಗೂ ಶೇ 40ರಷ್ಟು ಎಮ್ಮೆಗಳ ಚರ್ಮ ಸಿಕ್ಕಿದೆ. ಇದರ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ. ಗೋ ಹತ್ಯೆ ನಿಷೇಧವಿದ್ದರೂ ಇಷ್ಟೊಂದು ಪ್ರಮಾಣದ ಚರ್ಮ ಸಿಕ್ಕಿರುವುದು, ಗೋ ಹತ್ಯೆ ಮಾಡಿರುವುದಕ್ಕೆ ನಿದರ್ಶನವಾಗಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸಬೇಕು. ಶಿಕ್ಷೆಗೆ ಗುರಿ ಆಗುವಂತೆ ನೋಡಿಕೊಳ್ಳಬೇಕು’ ಎಂದು ಪೊಲೀಸರಿಗೆ ಸೂಚಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಗೆ ರಮೇಶ್ ಜಾರಕಿಹೊಳಿ ಮತ್ತೊಂದು ಶಾಕ್.?

Fri Dec 17 , 2021
ಪಕ್ಷದ 13 ಶಾಸಕರು, ಮೂವರು ಸಂಸದರಿದ್ದರೂ ಭದ್ರಕೋಟೆ ಬೆಳಗಾವಿಯಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿಗೆ ಈ ಸೋಲು ಅನಿರೀಕ್ಷಿತವಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಹೋದರ ಲಖನ್ ಅವರಿಗೆ ಎರಡನೇ ಅಭ್ಯರ್ಥಿಯಾಗಿ ಟಿಕೆಟ್ ನೀಡುವಂತೆ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರೂ, ವರಿಷ್ಠರು ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದ್ದರು. ಪಕ್ಷೇತರರಾಗಿ ಕಣಕ್ಕಿಳಿದ ಲಖನ್ ಜಯಗಳಿಸಿದ್ದು, ಬಿಜೆಪಿ ನಾಯಕರಿಗೆ […]

Advertisement

Wordpress Social Share Plugin powered by Ultimatelysocial