ತುಂಬಾ ಹೊತ್ತು ಕುಳಿತು ಕೆಲಸ ಮಾಡ್ತೀರಾ…? ಎಚ್ಚರ.!

ಕಚೇರಿಯಲ್ಲಿ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವೂ ಇವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ತುಂಬಾ ಸಮಯ ಕುಳಿತು ಕೆಲಸ ಮಾಡೋದು ಮೆದುಳಿನ ರಕ್ತ ಪ್ರಸರಣವನ್ನು ನಿಧಾನಗೊಳಿಸುತ್ತದೆಯಂತೆ. ಇದು ಜೀವಕ್ಕೆ ಮಾರಕವೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.ಕಚೇರಿಯಲ್ಲಿ ಕೆಲಸ ಮಾಡುವ ಕೆಲ ವ್ಯಕ್ತಿಗಳ ಮೇಲೆ ಈ ಸಂಶೋಧನೆ ನಡೆದಿದೆ. ತುಂಬಾ ಸಮಯ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಮೆದುಳಿಗೆ ಹಾನಿಕರ. ಅರ್ಧ ಗಂಟೆಗೊಮ್ಮೆ ಎದ್ದು, 2 ನಿಮಿಷ ಅತ್ತಿಂದಿತ್ತ ಓಡಾಡಿದ್ರೆ ತೊಂದರೆಯಿಲ್ಲ. ರಕ್ತ ಸಂಚಾರ ಸುಗಮವಾಗಲಿದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.ಮೆದುಳಿಗೆ ರಕ್ತ ಸಂಚಾರವಾಗುವುದು ಒಂದು ಸಾಮಾನ್ಯ ಪ್ರಕ್ರಿಯೆ. ರಕ್ತ ಸಂಚಾರ ಮೆದುಳನ್ನು ಆರೋಗ್ಯವಾಗಿಡುತ್ತದೆ. ರಕ್ತ ಸಂಚಾರದಲ್ಲಿ ವ್ಯತ್ಯಯವಾದ್ರೆ ಅನೇಕ ಖಾಯಿಲೆಗಳು, ಸಮಸ್ಯೆಗಳು ಕಾಡಲು ಶುರುವಾಗುತ್ತವೆ.ಹಿಂದೆ ನಡೆದ ಅಧ್ಯಯನ ಕೂಡ ಇದನ್ನೇ ಹೇಳಿದೆ. ರಕ್ತ ಸಂಚಾರದಲ್ಲಿ ವ್ಯತ್ಯಾಸವಾದ್ರೆ ಯೋಚನೆ, ಗುರುತಿಸುವಿಕೆ ಮೇಲೆ ಪ್ರಭಾವ ಬೀರುತ್ತದೆ. ಬುದ್ಧಿಮಾಂದ್ಯತೆ ಮತ್ತು ಮೆಮೊರಿ ಲಾಸ್ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೂದಲಿಗೆ ಡೈ ಹಚ್ಚಿಕೊಳ್ತಿದ್ದೀರಾ...? ಇಲ್ಲಿದೆ ನೋಡಿ ಆಘಾತಕಾರಿ ಸುದ್ದಿ...!

Mon Mar 14 , 2022
ಇದು ಮಹಿಳೆಯರು ಓದಲೇಬೇಕಾದ ಸುದ್ದಿ. ಕೂದಲಿಗೆ ಪರ್ಮನೆಂಟ್ ಹೇರ್ ಡೈ, ಕೆಮಿಕಲ್ ಹೇರ್ ಸ್ಟ್ರೇಟ್ ನರ್ ಗಳನ್ನು ನೀವು ಬಳಸ್ತಾ ಇದ್ರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಸಂಶೋಧನೆಯೊಂದರಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ. ಈ ಕೆಮಿಕಲ್ ಹೇರ್ ಪ್ರಾಡಕ್ಟ್ ಗಳಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು ಅಂತಾ ಸಂಶೋಧಕರು ದೃಢಪಡಿಸಿದ್ದಾರೆ. ಕ್ಯಾನ್ಸರ್ ಮತ್ತು ಹೇರ್ ಡೈಗೆ ಯಾವ ರೀತಿ ಕನೆಕ್ಷನ್ ಇದೆ ಅನ್ನೋ ಬಗ್ಗೆ ಅಧ್ಯಯನ ನಡೆಸಲಾಗಿದೆ. […]

Advertisement

Wordpress Social Share Plugin powered by Ultimatelysocial