ನಂದಿನಿ ತುಪ್ಪ ತಿನ್ನುವ ಮುನ್ನ ಹುಷಾರ್‌..!ನಂದಿನಿ ತುಪ್ಪ ಸೇವಿಸುವವರನ್ನು ಬೆಚ್ಚಿ ಬೀಳಿಸುವ ಸುದ್ದಿ: ನಂದಿನಿ ತುಪ್ಪವನ್ನೇ ನಕಲಿ ಮಾಡಿ ತಯಾರಿಸುವ ಗೋಡೌನ್ ನಿರ್ಮಾಣ

ಶುದ್ಧ ನಂದಿನಿ ತುಪ್ಪ ಯಾರಿಗೆ ತಾನೇ ಇಷ್ಟವಾಗಲ್ಲ. ಆದರೆ ಇಲ್ಲಿ ನಂದಿನಿ ತುಪ್ಪ ಸೇವಿಸುವವರನ್ನು ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ..! ನಂದಿನಿ ತುಪ್ಪವನ್ನೇ ನಕಲಿ ಮಾಡಿ ತಯಾರಿಸುವ ಗೋಡೌನ್ ಒಂದು ಮೈಸೂರಿನ ಹೊಸ ಹುಂಡಿ ಬಳಿ ಪತ್ತೆಯಾಗಿದೆ.ಈ ಗೋಡೌನ್‌ನ ಮೂಲಕ ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪವನ್ನು ಮೈಸೂರು ನಗರಾದ್ಯಂತ ವಿತರಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಈ ನಕಲಿ ತುಪ್ಪ ತಯಾರಕರ ವಿತರಣೆ ಜಾಲ ಬಯಲಾಗಿದೆ.

ಗುರುವಾರ ಬೆಳ್ಳಗ್ಗೆ ಹೊಸ ಹುಂಡಿಯಲ್ಲಿ ಇರುವ ನಕಲಿ ನಂದಿನಿ ತುಪ್ಪ ತಯಾರಿಕಾ ಗೋಡೌನ್ ಮೇಲೆ ಮಾನವ ಹಕ್ಕು ಹೋರಾಟಗಾರರ ತಂಡ ದಾಳಿ ನಡೆಸಿದೆ. ದಾಳಿ ಕುರಿತಾಗಿ ಮಾಹಿತಿ ನೀಡಿದ ತಂಡದ ಉಪಾಧ್ಯಕ್ಷ ಪ್ರದೀಪ್, ಗುರುವಾರ ಬೆಳಗಿನ ಜಾವ ನಮಗೆ ಒಂದು ದೂರವಾಣಿ ಕರೆ ಬಂತು. ಹೊಸ ಹುಂಡಿಯಲ್ಲಿ ಈ ರೀತಿ ನಂದಿನಿ ತುಪ್ಪವನ್ನು ನಕಲಿ ಮಾಡಿ ತಯಾರಿಸಿ ಲೋಡ್ ಮಾಡಿ ಮೈಸೂರು ನಗರಾದ್ಯಂತ ವಿತರಣೆ ಮಾಡುತ್ತಿದ್ದಾರೆ ಎಂದು ಸುದ್ದಿ ಬಂತು. ಏನು ನಡೆಯುತ್ತಿದೆ ಅಂತ ನೋಡೋದಕ್ಕೆ ಓಡೋಡಿ ಬಂದೆವು. ಕೆಲವರು ಲಾಕ್ ಮಾಡಿ ಒಳಗಡೆ ಕೆಲಸ ಮಾಡುತ್ತಿದ್ದರು. ನಾವೇ ಈ ಗೋಡೌನ್ ಸೀಜ್ ಮಾಡಿದ್ದೇವೆ. ಒಳಗಡೆ ಬಂದು ನೋಡಿದಾಗ ನಮಗೆ ಗೊತ್ತಾಯಿತು ಎಂದು ತಿಳಿಸಿದರು….

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸರ ಲಾಠಿ ಚಾರ್ಜ್‌ ಮುಚ್ಚಿಹಾಕಲು ಪಿತೂರಿ ಪಿಎಫ್ ಐ ರಾಜ್ಯ ಕಾರ್ಯದರ್ಶಿ, ಎ.ಕೆ.ಅಶ್ರಫ್

Fri Dec 17 , 2021
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್ ನಲ್ಲಿ ಅಮಾಯಕರ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು ಕಟ್ಟುಕಥೆಗಳನ್ನು ಸೃಷ್ಟಿಸಿ ಹರಿಯಬಿಡುತ್ತಿದೆ. ಇದು ಬರ್ಬರ ಲಾಠಿಚಾರ್ಜ್ ಪ್ರಮಾದವನ್ನು ಮುಚ್ಚಿ ಹಾಕುವ ಪಿತೂರಿಯಾಗಿದೆ ಎಂದು ಪಿಎಫ್ ಐ ರಾಜ್ಯ ಕಾರ್ಯದರ್ಶಿ, ಎ.ಕೆ.ಅಶ್ರಫ್ ಹೇಳಿದ್ದಾರೆ. ಮಂಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿ ಪೊಲೀಸ್ ಠಾಣಾ ಮುಂಭಾಗದಲ್ಲಿ ಡಿಸೆಂಬರ್ 14ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ […]

Advertisement

Wordpress Social Share Plugin powered by Ultimatelysocial