ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ

ಟಾಟಾ ಒಡೆತನದ ಏರ್​ ಇಂಡಿಯಾದ ವಿಶೇಷ ವಿಮಾನವು ಇಂದು ರಾತ್ರಿ ಉಕ್ರೇನ್​ ವಿಮಾನ ನಿಲ್ದಾಣದಿಂದ ಸುರಕ್ಷಿತ ವಾಪಸ್ಸಾತಿಗಾಗಿ ವಾಪಸ್ಸಾತಿಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್​ ಕರೆದುಕೊಂಡು ಹೋಗಲಿದೆ.ಏರ್​ ಇಂಡಿಯಾದ ಮೊದಲ ವಿಶೇಷ ವಿಮಾನವು ಉಕ್ರೇನ್​ನಿಂದ ಭಾರತಕ್ಕೆ ಇಂದು ರಾತ್ರಿ ಹಾರಾಟ ನಡೆಸಲಿದೆ ಎಂದು ಏರ್​ಲೈನ್​ನ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.ಸೋಮವಾರದಂದು ಏರ್​ ಇಂಡಿಯಾ ವಿಮಾನವು ಸ್ವದೇಶಕ್ಕೆ ಮರಳಲು ಇಚ್ಛಿಸುವ ಭಾರತೀಯ ಪ್ರಜೆಗಳನ್ನು ಮರಳಿ ತರಲು ಉಕ್ರೇನ್​​ಗೆ ಹೊರಟಿತ್ತು. ಉಕ್ರೇನ್​ನಿಂದ ಭಾರತಕ್ಕೆ ಒಟ್ಟು ಮೂರು ವಿಮಾನಗಳು ಹಾರಾಟ ನಡೆಸಲಿದೆ ಎಂದು ಏರ್​ ಇಂಡಿಯಾ ಈ ಹಿಂದೆಯೇ ಘೋಷಣೆ ಮಾಡಿತ್ತು. ಇದರಲ್ಲಿ ಮೊದಲ ವಿಮಾನ ಇಂದು ರಾತ್ರಿ ಹಾರಾಟ ನಡೆಸಲಿದೆ.ಉಕ್ರೇನ್​ನಿಂದ ಭಾರತಕ್ಕೆ ಏರ್​ ಇಂಡಿಯಾ ಮೂರು ವಿಮಾನಗಳ ಕಾರ್ಯಾಚರಣೆ ನಡೆಸಲಿದೆ. ಫೆಬ್ರವರಿ 22, 24 ಹಾಗೂ 26ರಂದು ಮೂರು ವಿಮಾನಗಳು ಹಾರಾಟ ನಡೆಸಲಿವೆ. ದೆಹಲಿಯಿಂದ ಬೋಯಿಂಗ್ ಡ್ರೀಮ್ ‌ಲೈನರ್ ಎಐ-1947 ವಿಮಾನವು ಟೇಕ್ ಆಫ್ ಆಗಿದೆ. ಇದು 200 ಪ್ರಯಾಣಿಕರಿಗೆ ಆಸನ ವ್ಯವಸ್ಥೆಯನ್ನು ಹೊಂದಿದೆ ಎಂದು ಏರ್​ ಇಂಡಿಯಾ ಅಧಿಕೃತ ಮಾಹಿತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಲೆ ಎಂದರೇನು ಮತ್ತು ಅವು ಆರೋಗ್ಯಕರವೇ?

Tue Feb 22 , 2022
ಕಡಲೆಯು ದ್ವಿದಳ ಧಾನ್ಯವಾಗಿದೆ ಮತ್ತು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಬಹುಮುಖ ಆಹಾರಗಳು ಸಂಭಾಷಣೆಯಲ್ಲಿ ಬಂದಾಗ, ಕಡಲೆಯು ಮನಸ್ಸಿಗೆ ಬರುವ ಮೊದಲ ವಿಷಯವಾಗಿರುವುದಿಲ್ಲ. ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಡಯೆಟಿಷಿಯನ್ ಪೆಟ್ರೀಷಿಯಾ ಬ್ರಿಡ್ಜೆಟ್ ಲೇನ್, RDN, LD/N, ಕಡಲೆಯು ನಿಮಗೆ ಏಕೆ ಒಳ್ಳೆಯದು – ಮತ್ತು ಅವು ಒದಗಿಸುವ ನಿರ್ದಿಷ್ಟ ಆರೋಗ್ಯ ಪ್ರಯೋಜನಗಳನ್ನು ವಿವರಿಸುತ್ತದೆ. ಕಡಲೆಗಳು ದ್ವಿದಳ ಧಾನ್ಯದ ಸಸ್ಯದಿಂದ ಬರುತ್ತವೆ – ವಾಸ್ತವವಾಗಿ, ಲೇನ್ ಅವರು ಇತಿಹಾಸದಲ್ಲಿ ಆರಂಭಿಕ ಕೃಷಿ ತರಕಾರಿಗಳಲ್ಲಿ ಒಂದಾಗಿದೆ […]

Advertisement

Wordpress Social Share Plugin powered by Ultimatelysocial