“ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆ ಸಮಾಜಕ್ಕೆ ಯಾವ ಸಂದೇಶ ನೀಡಬಲ್ಲಳು” ಏನೀ ವಿವಾದ..?

ನವದೆಹಲಿ, ಮಾರ್ಚ್ 18: “ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆ ಸಮಾಜಕ್ಕೆ ಯಾವ ಸಂದೇಶ ನೀಡಬಲ್ಲಳುಎಂದು ಗುರುವಾರ ಉತ್ತರಾಖಂಡ ನೂತನ ಸಿಎಂ ತೀರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆಯೇ ಸೃಷ್ಟಿಯಾಗಿದೆ. ರಿಪ್ಡ್ ಜೀನ್ಸ್ ತೊಡುವ ಮಹಿಳೆಯರ ಕುರಿತು ಸಿಎಂ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ರಿಪ್ಡ್ ಜೀನ್ಸ್ ಟ್ರೆಂಡ್ ಶುರುವಾಗಿದೆ. ನಟಿಯರೊಳಗೊಂಡಂತೆ ಹಲವು ಮಹಿಳೆಯರು ತಾವು ರಿಪ್ಡ್ ಜೀನ್ಸ್ನಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಿಎಂ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅರೆಬರೆ ಹರಿದ ಜೀನ್ಸ್ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ ಡೆಹ್ರಾಡೂನ್ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಉತ್ತರಾಖಂಡ ಆಯೋಗ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ತೀರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಉತ್ತರಾಖಂಡ ಸಿಎಂ ಹೇಳಿದ್ದೇನು? ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ತೀರಥ್ ಸಿಂಗ್ ರಾವತ್, “ವಿಮಾನದಲ್ಲಿ ನನ್ನನ್ನು ಮಹಿಳೆಯೊಬ್ಬರು ಪರಿಚಯ ಮಾಡಿಕೊಂಡರು. ತಾವು ಎನ್ಜಿಒ ನಡೆಸುತ್ತಿರುವುದಾಗಿ ತಿಳಿಸಿದರು. ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆ ಎನ್ಜಿಒ ನಡೆಸುತ್ತಾರೆ ಎಂಬುದನ್ನು ಕೇಳಿ ನನಗೆ ಶಾಕ್ ಆಯಿತು. ಆಕೆ ಸಮಾಜಕ್ಕೆ, ಮಕ್ಕಳಿಗೆ ಯಾವ ರೀತಿ ಸಂದೇಶ ನೀಡಬಲ್ಲಳು ಎಂಬ ಕುರಿತು ಚಿಂತೆಯಾಗುತ್ತಿದೆಎಂದಿದ್ದರು. ಜೊತೆಗೆ ಮಕ್ಕಳು ಕೂಡ ಮೊಣಕಾಲು ತೋರುವ ಬಟ್ಟೆಗಳನ್ನು ತೊಡುತ್ತಿದ್ದಾರೆ. ಪಾಶ್ಚಿಮಾತ್ಯರು ಭಾರತವನ್ನು ನೋಡಿ ತಮ್ಮ ದೇಹ ಮುಚ್ಚಿಕೊಳ್ಳುವುದನ್ನು ಕಲಿಯುತ್ತಿದ್ದರೆ, ಇಲ್ಲಿನವರು ನಗ್ನತೆಯನ್ನು ಕಲಿತುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

 ಮೊಣಕಾಲು ಕಾಣುವಂಥ ಬಟ್ಟೆ ತೊಡುವುದು, ಹರಿದ ಜೀನ್ಸ್ ಧರಿಸುವುದುಇವೆಲ್ಲವನ್ನು ಶ್ರೀಮಂತಿಕೆ ಎಂಬಂತೆ ತೋರಿಸಿ ಇಂಥವನ್ನೇ ಮೌಲ್ಯವೆಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಮೊದಲು ಕಾಂಗ್ರೆಸ್ ಮುಖಂಡ ಸಂಜಯ್ ಜಾ ಇದನ್ನು ಟೀಕಿಸಿದ್ದು, “ಹರಿದ ಜೀನ್ಸ್ ತೊಡುವುದರಿಂದ ನಮ್ಮ ಸಂಸ್ಕೃತಿ ನಾಶವಾಗುತ್ತದೆ ಎಂದು ಉತ್ತರಾಖಂಡ ಸಿಎಂ ಹೇಳಿಕೆ ನೀಡಿದ್ದಾರೆ. ಪ್ರಿಯ ಬಿಜೆಪಿ, ಇವರು ನಿಮ್ಮ ಮುಖ್ಯಮಂತ್ರಿ. ಇದನ್ನು ಬಿಜೆಪಿ ಒಪ್ಪುತ್ತಿದೆಯೇ? ಎಂದು ಪ್ರಶ್ನಿಸಿದ್ದರು. ಇದು ಸಿಎಂ ಮಾನಸಿಕತೆಯೇ? ಆಧುನಿಕ ಭಾರತದಲ್ಲಿ ನಾವು ಎಲ್ಲಿಗೆ ಸಾಗುತ್ತಿದ್ದೇವೆಎಂದು ಕೇಳಿದ್ದರು.

 ರಾಜ್ಯ ಸಭಾ ಸಂಸದೆ ಆಕ್ರೋಶ ಇದೀಗ ರಿಪ್ಡ್ಜೀನ್ಸ್ ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಹಲವು ಮಹಿಳೆಯರು ಟ್ವಿಟ್ಟರ್ನಲ್ಲಿತಮ್ಮ ಚಿತ್ರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಟಿ ಗುಲ್ ಪನಾಗ್ ಕೂಡ ಜೀನ್ಸ್ನೊಂದಿಗಿನ ಸೆಲ್ಪೀ ಕ್ಲಿಕ್ಕಿಸಿಕೊಂಡು ಹಾಕಿದ್ದಾರೆ. ರಾಜ್ಯ ಸಭಾ ಸಂಸದೆ ಹಾಗೂ ಶಿವಸೇನಾ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, “ದೇಶದ ಸಂಸ್ಕೃತಿ ಹಾಗೂ ಸಂಸ್ಕಾರ, ಮಹಿಳೆಯರು ಹಾಗೂ ಅವರ ಆಯ್ಕೆಗಳ ಬಗ್ಗೆ ಕುಳಿತು ತೀರ್ಮಾನಿಸುವ ಪುರುಷನಿಂದ ಪ್ರಭಾವಿತವಾಗಿರುತ್ತದೆಎಂದು ಹೇಳಿದ್ದಾರೆ.

 ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಉತ್ತರಾಖಂಡ ಸಿಎಂ ಹೇಳಿಕೆಯನ್ನು ಟೀಕಿಸಿ, “ಬಟ್ಟೆ ಬದಲಿಸುವ ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿಎಂದು ಹೇಳಿದ್ದಾರೆ. ನಿಮ್ಮ ರೀತಿಯ ಸಂದೇಶವೇ ಸಮಾಜಕ್ಕೆ ಆಘಾತಕಾರಿಯಾಗಿದೆ ಎಂದಿದ್ದಾರೆ. ಹರಿದ ಜೀನ್ಸ್ ತೊಟ್ಟ ಮಹಿಳೆಯರು ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎಂದು ಕೇಳಿದ್ದೀರ. ಆದರೆ ನಿಮಗೆ ಒಳ್ಳೆ ರೀತಿ ಬೆಳೆಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ನಾನು ರಿಪ್ಡ್ ಜೀನ್ಸ್ ತೊಟ್ಟುಕೊಳ್ಳುತ್ತೇನೆ. ಧನ್ಯವಾದ, ಅದನ್ನು ತೊಡುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಚಿತ್ರ ಹಾಕಿದ್ದಾರೆ. ಫೆಮಿನಾ ಮಾಜಿ ಮಿಸ್ ಇಂಡಿಯಾ ಸಿಮ್ರಾನ್ ಕೌರ್ ಮುಂಡಿ ಕೂಡ ರಿಪ್ಡ್ ಜೀನ್ಸ್ ತೊಟ್ಟ ತಮ್ಮ ಫೋಟೊ ಹಂಚಿಕೊಂಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಪಾನ್ ಬೀಡ ಅಂಗಡಿಯಲ್ಲಿ ಕಳ್ಳತನ

Thu Mar 18 , 2021
ದೇವಸ್ಥಾನಗಳಲ್ಲಿ ಅಥವಾ ಚಿನ್ನದ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖದೀಮರು ಇದೀಗ ಪಾನ್ ಬೀಡ ಅಂಗಡಿಗೂ ಕನ್ನ ಹಾಕಿದ್ದಾರೆ. ಬೆಳಗಿನ ಜಾವ 3: 30ರ ವೇಳೆ ಮಂಜುನಾಥ್ ಎಂಬುವರ ಅಂಗಡಿಗೆ ನುಗಿದ್ದ ಮೂವರು ಕಳ್ಳರು 9000 ಹಣ ಹಾಗೂ 15,000 ಬೆಲೆಬಾಳುವ ಸಿಗರೇಟ್ ಕದ್ದು ಪರಾರಿಯಾಗಿದ್ದಾರೆ. ಸದ್ಯ ಈ ಕುರಿತು ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.   *ಸಿಸಿ ಕ್ಯಾಮೆರಾ ಟಾರ್ಚ್ ಹಾಕಿ ಕಳ್ಳತನ *ಪಾನ್ ಬೀಡ ಅಂಗಡಿಯಲ್ಲಿ ಕಳ್ಳತನ […]

Advertisement

Wordpress Social Share Plugin powered by Ultimatelysocial