ಉಕ್ರೇನ್ ನಿಂದ ಸುರಕ್ಷಿತವಾಗಿ ಹೊಸದಿಲ್ಲಿ ತಲುಪಿದ ಉಜಿರೆಯ ಹೀನಾ ಫಾತಿಮಾ

ಬೆಳ್ತಂಗಡಿ, ಮಾ.5: ಯುದ್ದಗ್ತಸ್ಥ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಸುರುಕ್ಷಿತವಾಗಿ ಇಂದು ಬೆಳಗ್ಗೆ ಹೊಸದಿಲ್ಲಿ ತಲುಪಿದ್ದಾರೆ. ಆ ಮೂಲಕ ಕೆಲದಿನಗಳಿಂದ ಆತಂಕಿತರಾಗಿದ್ದ ಹೀನಾ ಅವರು ಹೆತ್ತವರು ನಿಟ್ಟಿಸಿರುವ ಬಿಟ್ಟಿದ್ದಾರೆ.ಖಾರ್ಕಿವ್ ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಹೀನಾ ಫಾತಿಮಾ ಅವರು ಉಕ್ರೇನ್‍ ಮೇಲಿನ ರಶ‍್ಯ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಕಟ್ಟಡವೊಂದರ ಬಂಕರ್‍ ನಲ್ಲಿ ನೆಲೆಸಿದ್ದ ಅವರು ಉಕ್ರೇನ್ ನ ಲಸವಿನ್ ಪ್ರದೇಶಕ್ಕೆ ರೈಲಿನ ಮೂಲಕ ಸಾಗಿ ಅಲ್ಲಿಂದ ಗಡಿ ಪ್ರದೇಶಕ್ಕೆ ತೆರಳಿದ್ದರು. ಪೋಲ್ಯಾಂಡ್ ತಲುಪಿದ ಹೀನಾ ನಿನ್ನೆ ರಾತ್ರಿ ಅಲ್ಲಿಂದ ವಿಮಾನದ ಮೂಲಕ ಹೊರಟು ಇಂದು ಬೆಳಗ್ಗೆ 7 ಗಂಟೆಗೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ಹೀನಾ ಫಾತಿಮಾ ಅವರ ಮಾವ ಉಜಿರೆಯ ಆಬಿದ್ ಅಲಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಹೀನಾ ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ತನ್ನ ಉಜಿರೆ ಮನೆಗೆ ಬರಲಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಸಿ ಮನೆ ಆವರಣದಲ್ಲಿ ಶ್ರೀಗಂಧ ಮರ ಕಳವು, ಮಾಲು ಸೇಮತ ಕಳ್ಳ ಅರೆಸ್ಟ್

Sat Mar 5 , 2022
ಧಾರವಾಡ: ಧಾರವಾಡ ಜಿಲ್ಲಾ ಅಧಿಕಾರಿಗಳ ಮನೆ ಆವರಣದಲ್ಲಿದ್ದ ಒಂದು ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಮಾರುತಿ ತಂದೆ ಯಮನಪ್ಪ ಕಟ್ಟಿಮನಿ(31) ಬಂಧಿತ ಆರೋಪಿಯಾಗಿದ್ದು, ಆರೋಪಿಯನ್ನು ಮಾಲು ಸಮೇತ ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಧಾರವಾಡ ಶಹರದಲ್ಲಿರುವ ಜಿಲ್ಲಾಧಿಕಾರಿಗಳ ವಸತಿಗೃಹ ಆವರಣದಲ್ಲಿನ ಒಂದು ಶ್ರೀಗಂಧದ ಮರ ಮತ್ತು ಗುಂಗರಗಟ್ಟಿ ಶ್ರೀಗಂಧದ ನೇಡುತೋಪಿನಲ್ಲಿರುವ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದು ತುಂಡುಗಳನ್ನಾಗಿ […]

Advertisement

Wordpress Social Share Plugin powered by Ultimatelysocial