ಉಕ್ರೇನ್‌ನಿಂದ ವಾಪಸಾದ ದಾವಣಗೆರೆಯ ವಿನಯ್

ದಾವಣಗೆರೆ: ‘ನಾವು ತಾಯ್ನಾಡಿಗೆ ಹೊರಟಾಗ ನೀವು ಆರಾಮವಾಗಿ ಹೋಗಿ, ನಾವು ನಿಮ್ಮ ಹಿಂದೆ ಬರುತ್ತೇವೆ ಎಂದು ಧೈರ್ಯ ತುಂಬಿದ್ದ ನವೀನ್ ಗ್ಯಾನಗೌಡರ್ ಸಾವಿನ ಸುದ್ದಿ ಕೇಳಿ ಆಘಾತವಾಯಿತು’.ಇದು ಉಕ್ರೇನ್‌ನಲ್ಲಿ ಉಕ್ರೇನ್‌ನಿಂದ ವಾಪಸ್‌ ಆಗಿರುವ ದಾವಣಗೆರೆಯ ವೈದ್ಯಕೀಯ ವಿದ್ಯಾರ್ಥಿ ವಿನಯ್ ಕಲ್ಲಿಹಾಳ್ ಅವರ ನುಡಿ.’ಪ್ರಥಮ ವರ್ಷದಲ್ಲಿ ಇಬ್ಬರು ಹಾಸ್ಟೆಲ್‌ನಲ್ಲಿದ್ದೆವು. ಎರಡು ವರ್ಷಗಳಿಂದ ಫ್ಲಾಟ್‌ನಲ್ಲೇ ಇದ್ದುದರಿಂದ ಸ್ನೇಹಿತರಾಗಿ ಇದ್ದೆವು. ನಾವು ರೈಲು ಹತ್ತಿದ ಎರಡು ಗಂಟೆಯ ಬಳಿಕ ನವೀನ್‌ ಸಾವಿನ ಸುದ್ದಿ ಕೇಳಿ ತುಂಬಾ ನೋವಾಯಿತು’ ಎಂದು ಬೇಸರಿಸಿದರು.’ಉಕ್ರೇನ್‌ನಲ್ಲಿದ್ದ 80 ಮಂದಿ ಭಾರತೀಯರನ್ನು ಕರೆಸಿಕೊಳ್ಳುವ ಪ್ರಯತ್ನದಲ್ಲಿ ಸರ್ಕಾರವಿತ್ತು. ಭಾರತಕ್ಕೆ ವಾಪಸ್ ಆಗಲು ಪೂರಕ ವಾತಾವರಣವಿದೆಯೇ ಎಂಬುದನ್ನು ತಿಳಿದುಕೊಳ್ಳಲು ನಾನು ಸೇರಿ ನಾಲ್ವರು ಮೊದಲು ಬಂದಿದ್ದೆವು’ ಎಂದರು.ಉಕ್ರೇನ್‌ನ ಹಾರ್ಕೀವ್‌ನಲ್ಲಿ ಸಿಲುಕಿದ್ದ ನಗರದ ಎಲ್‌ಐಸಿ ಕಾಲೊನಿ ನಿವಾಸಿ, ಡಿಆರ್‌ಆರ್ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಕೆ.ಬಿ. ರುದ್ರೇಶ್ ಪುತ್ರ ವಿನಯ್ ಕಲ್ಲಿಹಾಳ್ ಸುರಕ್ಷಿತವಾಗಿ ದಾವಣಗೆರೆಗೆ ಮರಳಿದ್ದು, ಶುಕ್ರವಾರ ಬೆಳಿಗ್ಗೆ ದಾವಣಗೆರೆಗೆ ಬಂದರು. ಉಕ್ರೇನ್‌ನಿಂದ ಪೋಲೆಂಡ್‌ಗೆ ರೈಲಿನಲ್ಲಿ ನಿಂತುಕೊಂಡೇ ಚಲಿಸಿದ್ದರು.ವಿನಯ್ ಅವರ ಜೊತೆ ಮೈಸೂರಿನ ಮುಕುಂದ್, ಕೊಡಗಿನ ಚಂದನ್ ವಾಪಸ್ ಆಗಿದ್ದಾರೆ. ಹಲವು ಸಮಸ್ಯೆಗಳನ್ನು ಅನುಭವಿಸಿ ಸುರಕ್ಷಿತವಾಗಿ ಮರಳಿರುವ ನವೀನ್ ಅವರು ಕೇಂದ್ರ ಸರ್ಕಾರ, ಸಂಸದ ಸಿದ್ದೇಶ್ವರ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ನಿಂದ ಸುರಕ್ಷಿತವಾಗಿ ಹೊಸದಿಲ್ಲಿ ತಲುಪಿದ ಉಜಿರೆಯ ಹೀನಾ ಫಾತಿಮಾ

Sat Mar 5 , 2022
ಬೆಳ್ತಂಗಡಿ, ಮಾ.5: ಯುದ್ದಗ್ತಸ್ಥ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಸುರುಕ್ಷಿತವಾಗಿ ಇಂದು ಬೆಳಗ್ಗೆ ಹೊಸದಿಲ್ಲಿ ತಲುಪಿದ್ದಾರೆ. ಆ ಮೂಲಕ ಕೆಲದಿನಗಳಿಂದ ಆತಂಕಿತರಾಗಿದ್ದ ಹೀನಾ ಅವರು ಹೆತ್ತವರು ನಿಟ್ಟಿಸಿರುವ ಬಿಟ್ಟಿದ್ದಾರೆ.ಖಾರ್ಕಿವ್ ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಹೀನಾ ಫಾತಿಮಾ ಅವರು ಉಕ್ರೇನ್‍ ಮೇಲಿನ ರಶ‍್ಯ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಕಟ್ಟಡವೊಂದರ ಬಂಕರ್‍ […]

Advertisement

Wordpress Social Share Plugin powered by Ultimatelysocial