ಉಕ್ರೇನ್‌ ತೊರೆಯಲು ಅಮೆರಿಕ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚನೆ

ಕೀವ್‌: ಉಕ್ರೇನ್‌ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕದ ರಾಯಭಾರ ಕಚೇರಿ ಸೋಮವಾರ ಸೂಚಿಸಿದೆ.

 

ಈ ಕುರಿತು ಟ್ವೀಟ್‌ ಮಾಡಿರುವ ರಾಯಭಾರ ಕಚೇರಿಯು, ‘ಸುರಕ್ಷಿತವಾಗಿದ್ದರೆ ರಸ್ತೆ ಸಾರಿಗೆಯ ಮೂಲಕ ಉಕ್ರೇನ್‌ನಿಂದ ಹೊರಡುವಂತೆ ನಾವು ಅಮೆರಿಕ ನಾಗರಿಕರಿಗೆ ಸೂಚಿಸುತ್ತೇವೆ’ ಎಂದು ತಿಳಿಸಿದೆ.

 ‘ಉಕ್ರೇನ್‌ನ ಗಡಿಗಳು ತೆರೆದಿರುತ್ತವೆ. ರಸ್ತೆಗಳಲ್ಲಿನ ಅಪಾಯಗಳನ್ನು ಪರಿಗಣಿಸಿ ಅಮೆರಿಕ ನಾಗರಿಕರು ಉಕ್ರೇನ್‌ ತೊರೆಯಬೇಕು’ ಎಂದು ರಾಯಭಾರ ಕಚೇರಿ ಹೇಳಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹಾಗೂ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ನಡುವೆ ಮಾತುಕತೆ ನಡೆದಿದೆ. ಇದಾದ ಸ್ವಲ್ಪ ಸಮಯದ ಬಳಿಕ ಅಮೆರಿಕಾದ ರಾಯಭಾರ ಕಚೇರಿಯು ಈ ಪ್ರಕಟಣೆ ಹೊರಡಿಸಿದೆ.

ಫೆ.24ರಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ಉಕ್ರೇನ್‌ನ ನಗರಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ದಾಳಿ ಮಾಡುತ್ತಿವೆ. ಅಮೆರಿಕ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ರಷ್ಯಾದ ನಡೆಯನ್ನು ವಿರೋಧಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತಕ್ಕೆ ನವೀನ್ ಮೃತದೇಹ ತರಲು ಪ್ರಧಾನಿ ಮೋದಿ ಸೂಚನೆ

Mon Mar 14 , 2022
  ನವದೆಹಲಿ,ಮಾ.14- ಉಕ್ರೇನ್‍ನಲ್ಲಿ ಕಳೆದ ಮಾರ್ಚ್ 1ರಂದು ರಷ್ಯಾ ದಾಳಿಗೆ ಬಲಿಯಾದ ಹಾವರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹವನ್ನು ಭಾರತಕ್ಕೆ ತರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.ನಿನ್ನೆ ನಡೆದ ಸಂಪುಟ ಸಭೆಯಲ್ಲಿ ತಮ್ಮ ಅಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ನವೀನ್ ಮೃತದೇಹ ತಾಯ್ನಾಡಿಗೆ ಬರುವ ನಿರೀಕ್ಷೆ ಇದೆ. ಉಕ್ರೇನ್ […]

Advertisement

Wordpress Social Share Plugin powered by Ultimatelysocial