ಉಕ್ರೇನ್ ನಲ್ಲಿ ಸಿಲುಕಿದ್ದ ಉಜಿರೆಯ ಹೀನಾ ಫಾತಿಮಾ ಮಂಗಳೂರಿನತ್ತ

ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಪೋಲಂಡ್ ನಿಂದ ಭಾರತೀಯ ಎಂಬಸಿ ಸಹಾಯಹಸ್ತದಲ್ಲಿ ಇಂದು ದೆಹಲಿಗೆ ಬಂದು ತಲುಪಿದ್ದಾರೆ.ಕಳೆದ ನಾಲ್ಕು ದಿನಗಳಿಂದ ಹೀನಾ ಫಾತಿಮಾ ಅವರ ಬರುವಿಕೆಗಾಗಿ ಕಾತುರರಾಗಿದ್ದ ಮನೆಮಂದಿಗೆ ಇದೀಗ ಹರ್ಷ ತಂದಿದೆ.ಹೀನಾ ಫಾತಿಮಾ ಸದ್ಯ ದೆಹಲಿಯಲ್ಲಿ ತಂಗಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದು ಅಲ್ಲಿಂದ ಮಂಗಳೂರಿಗೆ ಪ್ರಯಾಣ ಬೆಳೆಸುವ ಮೂಲಕ ತಾಯ್ನಾಡಿಗೆ ಮರಳುವರು.ಹೀನಾ ಫಾತಿಮಾ ಸಹಿತ ಅನೇಕರು ಕಾರ್ಕೀವ್ ಪ್ರದೇಶದಲ್ಲಿ ಸಿಲುಕಿದ್ದರು. ಅಲ್ಲಿಂದ ಲಿವಿವ್ ಪ್ರದೇಶಕ್ಕೆ ರೈಲಿನ ಮೂಲಕ ಬಂದು ಅಲ್ಲಿಂದ ಪೋಲಂಡ್ ತಲುಪಿದ್ದರಾದರು. ಯುದ್ಧ ಗ್ರಸ್ತ ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳು ಭಯದ ವಾತಾವರಣದಿಂದ ಇನ್ನೂ ಹೊರಬಂದಿಲ್ಲ. ಆದರೆ ಕೇಂದ್ರ ಸರಕಾರ ಅಲ್ಲಿದ್ದವರನ್ನು ಪಾರುಮಾಡುವ ನೆಲೆಯಲ್ಲಿ ಸಂಪೂರ್ಣ ಸಹಕಾರ ಒದಗಿಸುತ್ತಿದೆ. ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್, ಉಜಿರೆ ಗ್ರಾ.ಪಂ. ವತಿಯಿಂದ ಮನೆಮಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಧೈರ್ಯ ತುಂಬುತ್ತಿದ್ದಾರೆ ಎಂದು ಹೀನಾ ಅವರ ಮಾವ ಉದ್ಯಮಿ ಆಬಿದ್ ಅಲಿ ಉದಯವಾಣಿಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ಯುದ್ದ: ರಷ್ಯಾದಲ್ಲಿ ಜಾಗತಿಕ ಸುದ್ದಿವಾಹಿನಿ ಬಿಬಿಸಿ ಪತ್ರಕರ್ತರ ಕಾರ್ಯ ಸ್ಥಗಿತ

Sat Mar 5 , 2022
  ಲಂಡನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರದಂದು ಹೊಸ ಕಾನೂನು ತಂದಿದ್ದಾರೆ. ಇದರ ಅನ್ವಯ, ‘ದೇಶ ಹಾಗೂ ಸೇನೆಯ ವಿರುದ್ಧ ನಕಲಿ ಸುದ್ದಿ ಹಂಚಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದಾಗಿದೆ’.ಈ ಕಾನೂನನ್ನು ಜಾರಿಗೊಳಿಸಿದ ಕೂಡಲೇ, ಬಿಬಿಸಿ, ಸಿಎನ್‌ಎನ್, ಬ್ಲೂಮ್‌ಬರ್ಗ್ ಮತ್ತು ಇತರ ಸುದ್ದಿ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿಸುವುದಾಗಿ ತಿಳಿಸಿವೆ.ರಷ್ಯಾದ ಈ ಶಾಸನವು “ಸ್ವತಂತ್ರ ಪತ್ರಿಕೋದ್ಯಮದ ಪ್ರಕ್ರಿಯೆಯನ್ನು ಅಪರಾಧೀಕರಿಸುವಂತೆ ತೋರುತ್ತಿದೆ” ಬಿಬಿಸಿ ಸಿಬ್ಬಂದಿಯ ಸುರಕ್ಷತೆಯೇ ನಮಗೆ ಅತ್ಯಂತ […]

Advertisement

Wordpress Social Share Plugin powered by Ultimatelysocial