ಶತಮಾನದ ಅತೀ ದೊಡ್ಡ ವಲಸೆ, ಉಕ್ರೇನ್‌ನಿಂದ ಹೊರಬಂದ 10 ಲಕ್ಷ ಮಂದಿ..!

 

ಜಿನೀವಾ ಮಾ.3- ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಆರೇ ದಿನಗಳಲ್ಲಿ ಒಂದು ಮಿಲಿಯನ್ (10 ಲಕ್ಷ) ಜನರು ಉಕ್ರೇನ್ ದೇಶವನ್ನು ತೊರೆದಿದ್ದಾರೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ವರದಿಮಾಡಿದ್ದು, ಇದು ಈ ಶತಮಾನದ ಅತೀ ದೊಡ್ಡ ವಲಸೆಯಾಗಿದೆ ಎಂದು ತಿಳಿಸಿದವಿಶ್ವ ಬ್ಯಾಂಕ್ ಎಣಿಕೆ 2020ರ ಪ್ರಕಾರ 44 ಮಿಲಿಯನ್ ಜನಸಂಖ್ಯೆಯಲ್ಲಿ 2%ಕ್ಕಿಂತ ಹೆಚ್ಚು ಜನ ಪಲಾಯನ ಮಾಡುತ್ತಿದ್ದು, ಸುಮಾರು 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಯುಎನ್ ಹೈ ಕಮಿಷನರ್ ಭವಿಷ್ಯ ನುಡಿದಿದೆ.ಕೇವಲ ಏಳು ದಿನಗಳಲ್ಲಿ ನಾವು ಉಕ್ರೇನ್‍ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗುವುದನ್ನು ನೋಡಿದ್ದೇವೆ ಎಂದು ಯುಎನ್ ಹೈ ಕಮಿಷನರ್ ಫಿಲಿಪ್ಪೋ ಗ್ರಾಂಡಿ ಟ್ವೀಟ್ ಮಾಡಿದ್ದಾರೆ.ಗುಂಡು, ಸೋಟದ ಮಾರ್ಟರ್ ಶೆಲ್‍ಗಳು ಮತ್ತು ಗುಂಡೇಟುಗಳು ದೇಶದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ ಉಕ್ರೇನಿಯನ್ನರು ಹತಾಶೆಗೊಂಡು ವಲಸೆ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಯುಎನ್ ಎಚ್‍ಸಿಆರ್ ಡೇಟಾ ಪ್ರಕಾರ, ಪೋಲೆಂಡ್‍ಗೆ 505,000ಕ್ಕಿಂತ ಹೆಚ್ಚು, ಹಂಗೇರಿಗೆ 116,000 ಮೊಲ್ಡೊವಾ 79,000 ಮತ್ತು ಸ್ಲೋವಾಕಿಯಾಕ್ಕೆ 71,200 ಕ್ಕಿಂತ ಹೆಚ್ಚು ಜನ ಪಲಾಯನ ಮಾಡಿದ್ದಾರೆ ಎಂದು ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವರು ನನ್ನ ಫೀಲ್ಡಿಂಗ್ ಸ್ಥಾನವನ್ನು ಮಾತ್ರ ಬದಲಾಯಿಸಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ!

Thu Mar 3 , 2022
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶುಕ್ರವಾರ, ಮಾರ್ಚ್ 4 ರಿಂದ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಫೀಲ್ಡ್ ತೆಗೆದುಕೊಳ್ಳುವಾಗ ಅವರು ತಮ್ಮ 100 ನೇ ಟೆಸ್ಟ್ ಆಡಲಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಕಪಿಲ್ ದೇವ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, […]

Advertisement

Wordpress Social Share Plugin powered by Ultimatelysocial