ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ !

ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ ಎಂಬ ಪೋಸ್ಟ್​ ಅನ್ನು ಉಪೇಂದ್ರ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಕಾಸ್ಟಿಂಗ್​ ಕಾಲ್​ ಮಾಡಿದ್ದಾರೆ. ಉಪ್ಪಿ ತಾವು ಮತ್ತೆ ಡೈರೆಕ್ಟರ್​ ಕ್ಯಾಪ್ ತೊಡುತ್ತಾರೆ ಎಂದು ಹೇಳಿದ ದಿನದಿಂದಲೇ ಅವರ ಅಭಿಮಾನಿಗಳು ಉಪ್ಪಿ ನಿರ್ದೇಶನ ಮಾಡಲು ಹೊರಟಿರುವ ಹೊಸ ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.14 ರಿಂದ 60 ವರ್ಷ ವಯಸ್ಸಿನವರಿಗೆ ಉಪೇಂದ್ರ ಅವರ ಚಿತ್ರದಲ್ಲಿ ಅಭಿನಯಿಸುವ ಸುವರ್ಣಾವಕಾಶ ಸಿಕ್ಕಿದೆ. ಆಸಕ್ತಿ ಹೊಂದಿರುವವರು ತಾವು ನಟಿಸಿರುವ  ವಿಡಿಯೋ ತುಣುಕುಗಳನ್ನು ಮೈಲ್ ಐಡಿಗೆ ಕಳುಹಿಸಿಕೊಡಬಹುದು. ಮುಂದಿನ ತಿಂಗಳು ಮಾರ್ಚ್-10ನೇ ತಾರೀಖಿನ ಒಳಗೆ ವಿಡಿಯೋವನ್ನು ಕಳುಹಿಸಿಕೊಡಲು ಆವಕಾಶ ನೀಡಲಾಗಿದೆ. ಆಸಕ್ತಿ ಹೊಂದಿರುವವರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅದೃಷ್ಟ ಯಾರಿಗಾದರೂ ಒಲಿಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಘಟಗಿ: ಬೇಗೂರ ಗ್ರಾ.ಪಂ: ನಾಗವ್ವ ಅಧ್ಯಕ್ಷೆ

Wed Feb 9 , 2022
ಕಲಘಟಗಿ: ತಾಲ್ಲೂಕಿನ ಬೇಗೂರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ತುಮರಿಕೊಪ್ಪ ಗ್ರಾಮದ ನಾಗವ್ವ ಜಂಬೂಲಿಂಗ ಅಂಗಡಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಅಶೋಕ ಮಿಕ್ಕಿತ ಹಾಗೂ ನಿಂಗಪ್ಪ ಇವರ ನಡುವೆ ಸ್ಪರ್ಧೆ ಇತ್ತು. ಬಸವರಾಜ 16 ಮತ ‍ಪಡೆದು ಆಯ್ಕೆಯಾದರು. ನಿಂಗಪ್ಪ ಅವರು 3 ಮತ ಪಡೆದರು. ಇತ್ತೀಚೆಗೆ ಜರುಗಿದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 19 ಸದಸ್ಯರು ನೂತನವಾಗಿ ಆಯ್ಕೆಯಾಗಿದ್ದರು. ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ಪಂಚಾಯತಿ ಇಒ ಎಸ್.ಎಂ. […]

Advertisement

Wordpress Social Share Plugin powered by Ultimatelysocial