ಉತ್ತರ ಕುಮಾರನಿಗೆ ಪಾರ್ಥನು ಸಾರಥಿಯಾದದ್ದು.

 
ವಿರಾಟನೊಂದಿಗೆ ಪಾಂಡವರೆಲ್ಲರೂ ಗೋರಕ್ಷಣೆಗೆ ಹೊರಟರಾದರೂ ಅರ್ಜುನನನ್ನು ಇಲ್ಲಿಯೇ ಬಿಟ್ಟು ಹೊರಟರು. ಅವರೆಲ್ಲ ವಿಜಯದ ಸಂಭ್ರಮದಲ್ಲಿರುವಾಗ ಇತ್ತ ಉತ್ತರದ ಕಡೆಯಿಂದ ಗೋಗ್ರಹಣವಾಯಿತು. ಕೌರವರ ಬಲು ದೊಡ್ಡ ಸೇನೆ ಗೋವುಗಳನ್ನು ಸೆರೆಹಿಡಿದು ಕೆಲವರನ್ನು ಸುದ್ದಿ ಹೇಳಲು ಕಳಿಸಿದರು. ಸೋತು ಸುಣ್ಣವಾಗಿ‌ ಬಂದ ಗೋವಳರು ವಿರಾಟನ ಮಗ ಉತ್ತರಕುಮಾರನಲ್ಲಿ ಮೊರೆಯಿಟ್ಟರು. ಅಪಾರವಾದ ಸೈನ್ಯ ಬಂದಿದೆಯೆಂದೂ ಹೇಳಿದರು.
ಹೆಂಗಸರ ಮಧ್ಯೆ ಇದ್ದ ಉತ್ತರನು ಬರಿದೇ ಬಡಾಯಿ ಕೊಚ್ಚಿಕೊಂಡನು. ಮುದುಕರೊಂದಿಗೆ ಯುದ್ಧಮಾಡಲಾರೆ, ಅನ್ಯಕುಲದಲ್ಲಿ ಜನಿಸಿದವರೊಂದಿಗೆ ಕಾದಲಾರೆ, ದುರ್ಯೋಧನನನ್ನು ಒಂದೇ ಕ್ಷಣಕ್ಕೆ ಸೋಲಿಸಬಲ್ಲೆ, ಪಾಂಡವರನ್ನು ಮೋಸ ಮಾಡಿದಂತಲ್ಲ, ನನ್ನ ಬಳಿ ಅವನ ಆಟ ನಡೆಯದು ಎಂದೆಲ್ಲ ಹೇಳಿಕೊಂಡನು. ಕೊನೆಯಲ್ಲಿ ತನ್ನ ಸಾರಥಿ ಸತ್ತುಹೋಗಿರುವುದರಿಂದ ಹೇಗೆ ಹೋಗುವುದು ಎಂದು ಅಳಲಿದನು.
ಅಲ್ಲಿಯ ಎಲ್ಲ ಮಾತುಗಳನ್ನು ತಿಳಿದ ಅರ್ಜುನನು ದ್ರೌಪದಿಗೆ ಹೋಗಿ ತಾನು ಸಾರಥಿಯಾಗಬಲ್ಲೆನೆಂದು ಹೇಳು ಎಂದನು. ಅದರಂತೆ ಅವಳು ಬಂದು ಈ ಬೃಹನ್ನಳೆಯು ಹಿಂದೆ ಅರ್ಜುನನಿಗೆ ಸಾರಥಿಯಾಗಿದ್ದ ಬಗ್ಗೆ ಹೇಳಿ ಅವನನ್ನು ಕರೆತರಲು ಉತ್ತರೆಯನ್ನು ಕಳಿಸುವಂತೆ ಹೇಳಿದಳು. ಅದರಂತೆ ಉತ್ತರೆಯು ಅರ್ಜುನನನ್ನು ಕರೆತಂದಳು. ಉತ್ತರಕುಮಾರನ ರಥ ಸಿದ್ಧವಾಯಿತು.ಎಲ್ಲ ಹೆಂಗಸರ ಮುಂದೆ ತನ್ನ ಧೈರ್ಯವನ್ನು ಕೊಚ್ಚಿಕೊಂಡಿದ್ದರಿಂದ ಈಗ ಅವನು ಹೊರಡಲೇಬೇಕಾಯಿತು. ಸಾರಥಿಯು ಕವಚವನ್ನು ತಲೆಕೆಳಗಾಗಿ ತೊಟ್ಟನು. ಎಲ್ಲರೂ ಗೊಳ್ಳೆಂದು ನಕ್ಕರು. ಉತ್ತರನೇ ಸರಿಯಾಗಿ ತೊಡಿಸಿದನು. ಉತ್ತರೆಯು ಸೈನ್ಯದ ಆಭರಣಗಳು, ಬಣ್ಣಬಣ್ಣದ ಬಟ್ಟೆಗಳನ್ನು ತರುವಂತೆ ಸೂಚಿಸಿದಳು. ಬೇಕೆಂದೇ ತಡವರಿಸಿದಂತೆ ನಟಿಸಿದ ಅರ್ಜುನನು ರಥ ಹತ್ತಿ ಕುದುರೆಗಳ ಲಗಾಮು ಹಿಡಿದನು. ಉತ್ತರ ಮಹಾ ಧೈರ್ಯದಿಂದ ಯುದ್ಧಕ್ಕೆ ಹೊರಟನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾನ್ ಹ್ಯೂಬರ್ಟ್ ಮಾರ್ಷಲ್

Sun Mar 20 , 2022
  ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಮಹಾನ್ ಪುರಾತನ ಶಾಸ್ತ್ರಜ್ಞರು. ಇವರು ಹರಪ್ಪ, ಮೊಹೆಂಜೊದಾರೊ ಮತ್ತು ತಕ್ಷಶಿಲಾ ಕುರಿತಾದ ಮಹತ್ವಪೂರ್ಣ ಉತ್ಖನನ ಕೈಗೊಂಡವರು. ಜೊತೆಗೆ ಅನೇಕ ಭಾರತೀಯರನ್ನು ಪುರಾತನ ಶಾಸ್ತ್ರದ ಕೆಲಸಕ್ಕೆ ನೇಮಿಸಿ ಮುನ್ನಡೆಸಿದವರು. ಜಾನ್ ಹ್ಯೂಬರ್ಟ್ ಮಾರ್ಷಲ್ ಅವರು 1876 ಮಾರ್ಚ್ 19ರಂದು ಯುನೈಟೆಡ್ ಕಿಂಗ್ಡಂನ ಚೆಸ್ಟರ್ ಎಂಬಲ್ಲಿ ಜನಿಸಿದರು. ಭಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ಇವರನ್ನು ಭಾರತದ ಪುರಾತತ್ವ ಸರ್ವೇಕ್ಷಣದ ಪ್ರಧಾನ ನಿರ್ದೇಶಕರಾಗಿ 1902ರಲ್ಲಿ ನೇಮಿಸಿದರು. ಆ […]

Advertisement

Wordpress Social Share Plugin powered by Ultimatelysocial