ಮಸಾಜ್ ಪಾರ್ಲರ್ ಹೆಸರಲ್ಲಿ ಸೆಕ್ಸ್​ ರಾಕೆಟ್ ದಂಧೆ: ತಪ್ಪಿಸಿಕೊಂಡ ಯುವತಿ ಬಿಚ್ಚಿಟ್ಟಳು ̤

ಉತ್ತರ ಪ್ರದೇಶದಲ್ಲಿ ಅಪರಾಧ ಸಂಖ್ಯೆ ನಿರಂತರ ಏರುತ್ತಲೇ ಇದೆ. ಇದೀಗ ರಾಜಧಾನಿ ಲಖನೌದಲ್ಲಿ ಸೆಕ್ಸ್ ರಾಕೆಟ್ ದಂಧೆ ಬಯಲಿಗೆ ಬಂದಿದೆ. ಬಾಲಕಿಯರನ್ನು ಒತ್ತೆಯಾಳಾಗಿಟ್ಟುಕೊಂಡು ವೇಶ್ಯಾವಾಟಿಕೆಗೆ ಬಲವಂತಪಡಿಸಲಾಗುತ್ತಿತ್ತು ಎನ್ನಲಾಗಿದ್ದು, ಹುಡುಗಿಯರಿಗೆ ಡ್ರಗ್ಸ್ ನೀಡಿ ಗ್ರಾಹಕರ ಬಳಿ ಕಳುಹಿಸುತ್ತಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.ಈ ಗ್ಯಾಂಗ್‌ನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಬಾಲಕಿಯೊಬ್ಬಳು ಪೊಲೀಸರ ಬಳಿ ಘಟನೆ ವಿವರಿಸಿದ್ದು, ಪೊಲೀಸರು ದಾಳಿ ನಡೆಸಿ ಇತರ ಬಾಲಕಿಯರನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಗೋಮತಿ ನಗರದಲ್ಲಿ ಯುವತಿಯೊಬ್ಬಳು ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಪಾರ್ಲರ್​​ನಲ್ಲಿ ಕೆಲಸ ಖಾಲಿ ಇದೆ ಎಂದು ಹಲವು ಯುವತಿಯರ ಇಲ್ಲಿಗೆ ಕರೆಸಿಕೊಳ್ಳಲಾಗುತ್ತಿತ್ತು. ಇಲ್ಲಿಗೆ ಬಂದ ಆಕೆಯನ್ನು ಮನೆಯೊಂದರಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು. ದೇಶಾದ್ಯಂತ ಹುಡುಗಿಯರನ್ನು ಈ ಪಾರ್ಲರ್‌ಗೆ ಕರೆಸಿ ನಂತರ ವೇಶ್ಯಾವಾಟಿಕೆಗೆ ಒಳಪಡಿಸಲಾಗುತ್ತದೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು 6 ಯುವಕರನ್ನು ಬಂಧಿಸಿ 8 ಯುವತಿಯರನ್ನು ರಕ್ಷಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಸಾಲು ಕರ್ನಾಟಕದ ಶಾಲೆಗಳನ್ನು ಧ್ರುವೀಕರಣಗೊಳಿಸಲು ಹೇಗೆ ಬೆದರಿಕೆ ಹಾಕುತ್ತದೆ?

Fri Feb 4 , 2022
ಉಡುಪಿಯಲ್ಲಿ ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡದ ಕಾಲೇಜಿನ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳ ಪ್ರತಿಭಟನೆ. ಇಂದು ಭಾರತದಲ್ಲಿ, ನಮ್ಮ ಸಮಾಜದ ವಿಶ್ವ ದೃಷ್ಟಿಕೋನವು ದ್ವೇಷದ ವೈರಸ್‌ನಿಂದ ಕಲುಷಿತಗೊಂಡಿದೆ, ಹಿಂದೂ ಅಲ್ಲದ ಎಲ್ಲವನ್ನೂ ವಿರೂಪಗೊಳಿಸುತ್ತದೆ. ದೈನಂದಿನ ಜೀವನದ ಎಲ್ಲಾ ಜಾಗಗಳನ್ನು ಮುಸ್ಲಿಂ ವಿರೋಧಿ ಧರ್ಮಾಂಧತೆಯ ಮೂಸೆಗಳಾಗಿ ಪರಿವರ್ತಿಸಲಾಗಿದೆ ಮತ್ತು ನಾವು ಅಭೂತಪೂರ್ವ ಮಟ್ಟದಲ್ಲಿ ಸಾಮೂಹಿಕ ಆಮೂಲಾಗ್ರೀಕರಣಕ್ಕೆ ಒಳಗಾಗುತ್ತಿದ್ದೇವೆ. ಹಿಂದೂ ಪರಿಸರ ವ್ಯವಸ್ಥೆಯಲ್ಲಿ ಬೇರೂರಿರುವ ಸಂಘಟನೆಗಳು ಖಾಸಗಿ ಜಾಗಗಳಿಂದ ಹಿಡಿದು ರಾಜ್ಯದ ಎಲ್ಲಾ […]

Advertisement

Wordpress Social Share Plugin powered by Ultimatelysocial