ಉತ್ತರ ಭಾರತದಲ್ಲಿ ರೈಲು ಸಂಚಾರ ವ್ಯತ್ಯಯ.

ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಮಂಜು ಮತ್ತು ಮಂಜಿನ ದಟ್ಟವಾದ ಹೊದಿಕೆಗಳು ಹರಡಿದ್ದರಿಂದ ಉತ್ತರ ರೈಲ್ವೆಯ ಕನಿಷ್ಠ 15 ರೈಲು ಸಂಚಾರ ವಿಳಂಬವಾದ ಘಟನೆ ನಡೆದಿದೆ.ಈ ರೈಲುಗಳು ರಾಷ್ಟ್ರ ರಾಜಧಾನಿ ಮತ್ತು ನೆರೆಯ ರಾಜ್ಯಗಳಿಗೆ ಆಗಮಿಸುವ ನಿಗದಿತ ಸಮಯಕ್ಕಿಂತ 8 ಗಂಟೆಗಳಷ್ಟು ತಡವಾಗಿ ಸಂಚಾರ ಮಾಡಿದ ಪರಿಣಾಮ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸಫ್ದರ್‍ಜಂಗ್ ಮತ್ತು ಪಾಲಂ ಕ್ರಮವಾಗಿ 4.6 ಡಿಗ್ರಿ ಮತ್ತು 6.0 ಡಿಗ್ರಿ ಸೆಲ್ಸಿಯಸ್‍ನ ಕನಿಷ್ಠ ತಾಪಮಾನ ದಾಖಲಾಗಿತ್ತು. ರಾಷ್ಟ್ರ ರಾಜಧಾನಿ ಮತ್ತೊಂದು ಬೆಳಿಗ್ಗೆ ನಡುಗುವ ಚಳಿಗೆ ಸಾಕ್ಷಿಯಾಯಿಗೆ. ಇದರಿಂದ ದಟ್ಟವಾದ ಮಂಜಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.ನವದೆಹಲಿ ಪುರುಷೋತ್ತಮ್ ಎಕ್ಸ್‍ಪ್ರೆಸ್,ಗಯಾ-ನವದೆಹಲಿ ಮಹಾಬೋಧಿ ಎಕ್ಸ್‍ಪ್ರೆಸ್, ಬರೌನಿ-ಹೊಸದಿಲ್ಲಿ ಕ್ಲೋನ್ ವಿಶೇಷ , ಗೋರಖ್‍ಪುರ-ಭಟಿಂಡಾ ಗೋರಖ್‍ಧಾಮ್ ಎಕ್ಸ್‍ಪ್ರೆಸ್, ಹೌರಾ -ನವದೆಹಲಿ ಪೂರ್ವ ಎಕ್ಸ್‍ಪ್ರೆಸ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಅಮೃತಸರ ಎಕ್ಸ್‍ಪ್ರೆಸ್,ಕಾಮಾಖ್ಯ-ದೆಹಲಿ ಬ್ರಹ್ಮಪುತ್ರ ಮೇಲ್ , ರಾಯ್‍ಗಢ-ಹಜರತ್ ನಿಜಾಮುದ್ದೀನ್ ಗೊಂಡ್ವಾನಾ ಎಕ್ಸ್‍ಪ್ರೆಸ್ , ವಿಶಾಖಪಟ್ಟಣಂ-ಹೊಸದಿಲ್ಲಿ ಆಂಧ್ರಪ್ರದೇಶ ಎಕ್ಸ್‍ಪ್ರೆಸ್ ರೈಲು ಸಂಚಾರದಲ್ಲಿ ವಿಳಂಬವಾಗಿದೆ.ರಾಯಗೀರ್-ನವದೆಹಲಿ ಶ್ರಮಜೀವಿ ಎಕ್ಸ್‍ಪ್ರೆಸ್ , ರಕ್ಸೌಲ್ -ಆನಂದ್ ವಿಹಾರ್ ಟರ್ಮಿನಲ್ ಸದ್ಭಾವನಾ ಎಕ್ಸ್‍ಪ್ರೆಸ್, ಜಬಲ್‍ಪುರ-ಹಜರತ್ ನಿಜಾಮುದ್ದೀನ್ ಗೊಂಡ್ವಾನಾ , ಡಾ ಅಂಬೇಡ್ಕರ್ ನಗರ- ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮಾಲ್ವಾ ಎಸ್‍ಎಫ್ ಎಕ್ಸ್‍ಪ್ರೆಸ್ , ಎಂಜಿಆರ್ ಚೆನ್ನೈ ಸೆಂಟ್ರಲ್ -ನವದೆಹಲಿ ಗ್ರ್ಯಾಂಡ್ ಟ್ರಂಕ್ ಎಕ್ಸ್‍ಪ್ರೆಸ್ , ಎಂಜಿಆರ್ ಚೆನ್ನೈ ಸೆಂಟ್ರಲ್ -ನವದೆಹಲಿ ತಮಿಳುನಾಡು ಎಕ್ಸ್‍ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ಬಾರಿ ವ್ಯತ್ಯಯವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೇಶ್ಯೆಯರ ರೀತಿ ಶಾಸಕ ಸ್ಥಾನ ಮಾರಿಕೊಂಡು 17 ಮಂದಿ ಬಿಜೆಪಿಗೆ ಹೋದರು.

Wed Jan 18 , 2023
ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಶಾಸಕರು ವೇಶ್ಯೆಯರ ರೀತಿ ತಮ್ಮ ಶಾಸಕ ಸ್ಥಾನವನ್ನ ಮಾರಿಕೊಂಡಿದ್ದಾರೆ ಎಂದು ಹೇಳಿಕೆಯನ್ನ ನೀಡಿದ್ದಾರೆ. ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವಹೇಳನಕಾರಿ ಮಾತನ್ನ ಆಡಿ ಯಡವಟ್ಟು ಮಾಡ್ಕೊಂಡಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಶಾಸಕರು ವೇಶ್ಯೆಯರ ರೀತಿ ತಮ್ಮ ಶಾಸಕ ಸ್ಥಾನವನ್ನ ಮಾರಿಕೊಂಡಿದ್ದಾರೆ ಎಂದು ಹೇಳಿಕೆಯನ್ನ ನೀಡಿದ್ದಾರೆ. ನಾವೆಲ್ಲರೂ ಸಮ್ಮಿಶ್ರ ಸರ್ಕಾರವನ್ನು ಮಾಡಿರೋದನ್ನು ನೋಡಿದ್ವಿ. ಆದರೆ ಕೆಲವು […]

Advertisement

Wordpress Social Share Plugin powered by Ultimatelysocial