ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ​ ಅಬ್ದುಲ್​ ನಜೀರ್​

ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ​ ಅಬ್ದುಲ್​ ನಜೀರ್​

ಮಂಗಳೂರು: ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಬ್ದುಲ್​ ನಜೀರ್​ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಪವಿತ್ರ ಪೂಜೆಗಳಲ್ಲಿ ಒಂದಾದ ಆಶ್ಲೇಷ ಬಲಿ ಪೂಜೆಯನ್ನು ಅಬ್ದುಲ್​ ನಜೀರ್​ ಅವರು ಸಲ್ಲಿಸಿದರು.

ಈ ವೇಳೆ ದೇವಸ್ಥಾನ ಮಂಡಳಿಯವರು ನ್ಯಾಯಮೂರ್ತಿಗಳಿಗೆ ವಿಶೇಷ ಗೌರವವನ್ನು ಸಲ್ಲಿಸಿದರು.

ಅಂದಹಾಗೆ ಅಬ್ದುಲ್​ ನಜೀರ್​ ಅವರು ಒಂದು ವಾರಗಳ ಕಾಲ ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದಾರೆ. ನಿನ್ನೆ (ಡಿ.26) ರಾತ್ರಿ 8 ಗಂಟೆ ಸುಮಾರಿಗೆ ಹೈದರಾಬಾದ್​ನಿಂದ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಾಸ್ತವ್ಯ ಹೂಡಿದರು. ನಾಳೆ (ಡಿ.28) ಕುಕ್ಕೆಯಿಂದ ಪುತ್ತೂರಿಗೆ ಆಗಮಿಸಿ, ಬಾರ್​ ಅಸೋಸಿಯೇಷನ್​ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಕಾರಣ ಆ ಒಬ್ಬ ಸ್ಟಾರ್ ಆಟಗಾರ ಎಂದ ರವಿಶಾಸ್ತ್ರಿ

Mon Dec 27 , 2021
2021ರಲ್ಲಿ ಅತಿ ದೊಡ್ಡ ಮಟ್ಟದ ಬದಲಾವಣೆಗಳಿಗೆ ಸಾಕ್ಷಿಯಾದ ಕ್ರಿಕೆಟ್ ತಂಡವೆಂದರೆ ಅದು ಟೀಮ್ ಇಂಡಿಯಾ ಎನ್ನಬಹುದು. ಹೌದು, ಈ ವರ್ಷ ಆರಂಭದಲ್ಲಿದ್ದ ಟೀಮ್ ಇಂಡಿಯಾಗೂ ಅಂತ್ಯದಲ್ಲಿರುವ ಟೀಮ್ ಇಂಡಿಯಾಗೂ ಅಜಗಜಾಂತರ ವ್ಯತ್ಯಾಸವಿದೆ. ಆರಂಭದಲ್ಲಿ ಎಲ್ಲ ಕ್ರಿಕೆಟ್ ಮಾದರಿಗಳಿಗೂ ವಿರಾಟ್ ಕೊಹ್ಲಿ ನಾಯಕನಾಗಿದ್ದರೆ, ರವಿಶಾಸ್ತ್ರಿ ಭಾರತ ತಂಡದ ಹೆಡ್ ಕೋಚ್ ಆಗಿದ್ದರು. ಆದರೆ ವರ್ಷದ ಅಂತ್ಯಕ್ಕೆ ಎಲ್ಲವೂ ಬದಲಾಗಿದೆ. ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದರೆ, […]

Advertisement

Wordpress Social Share Plugin powered by Ultimatelysocial