ಎರಡು ಹೃದಯಗಳು ಕಾತರದಿಂದ ಕಾಯುವ ಪ್ರೇಮಿಗಳ ದಿನ!

ಬೆಂಗಳೂರು : ಎರಡು ಹೃದಯಗಳು ಕಾತರದಿಂದ ಕಾಯುವ ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಪ್ರೇಮದ ಪ್ರತೀಕವಾಗಿ ಗುರುತಿಸಲ್ಪಟ್ಟಿರುವ ಗುಲಾಬಿ ಹೂವುಗಳ ಬೆಲೆ ಹೆಚ್ಚಳಗೊಂಡಿದೆನಗರದೆಡೆಲ್ಲೆ ಗುಲಾಬಿ ಹೂವುಗಳ ಲೋಕವೇ ಧರೆಗಿಳಿದಿದೆ.ಆದರೆ, ಎಲ್ಲರ ಮನಸನ್ನು ಸೂರೆಗೊಳ್ಳುವ ಗುಲಾಬಿ ಈ ಬಾರಿ ತುಸು ದುಬಾರಿಯಾಗಿದೆ. ಪ್ರೇಮ ಹಾಗೂ ಪ್ರೇಮಿಯೊಂದಿಗೆ ಅವಿನಾಭಾವ ಸಂಬಂಧವಿರುವ ಗುಲಾಬಿ ಹೂವಿನ ಬೆಲೆ ಸದ್ಯ 15ರಿಂದ 25 ಮೀರಿದೆ. ಪ್ರೇಮಿಗಳ ದಿನಕ್ಕೆ ಒಂದು ದಿನ ಬಾಕಿ ಉಳಿದಿದ್ದು, ಹೂವಿನ ಬೆಲೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಕಳೆದ 15 ದಿನಗಳ ಹಿಂದೆ ಒಂದೆರೆಡು ರೂಪಾಯಿಗೆ ಸಿಗುತ್ತಿದ್ದ ಕೆಂಗುಲಾಬಿ ಹೂವಿನ ಬೆಲೆ ಏರಿಕೆಯಾಗಿರುವುದು ಪ್ರೇಮಿಗಳಿಗೆ ಕೊಂಚ ಬಿಸಿ ತಾಗಿಸಿದರೂ ವ್ಯಾಪಾರಕ್ಕೆ ಯಾವುದೇ ರೀತಿಯಲ್ಲೂ ಪೆಟ್ಟು ನೀಡದಿರುವುದು ವ್ಯಾಪಾರಿಗಳಿಗೂ ಖುಷಿ ನೀಡಿದೆ.ನಗರದ ರಸೇಲ್ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರಂ, ಮಡಿವಾಳ ಮಾರುಕಟ್ಟೆಗಳು ಸೇರಿದಂತೆ ಬೀದಿ ಬದಿಯ ವ್ಯಾಪಾರಿಗಳು ಪ್ರೇಮಿಗಳ ದಿನಕ್ಕೆ ನಾಲ್ಕೈದು ದಿನಗಳಿರುವಂತೆಯೇ ಹೂವಿನ ಭರ್ಜರಿ ವ್ಯಾಪಾರಿದಲ್ಲಿ ನಿರತರಾಗಿದ್ದಾರೆ.ಇನ್ನು ಎಂ.ಜಿ.ರಸ್ತೆ, ರಿಚ್‌ಮಂಡ್ ಸರ್ಕಲ್, ಎಲೆಕ್ಟ್ರಾನಿಕ್ ಸಿಟಿ, ವಿಜಯನಗರ, ಜಯನಗರ ಒಳಗೊಂಡಂತೆ ಜನವಸತಿ ವ್ಯಾಪಾರ ಕೇಂದ್ರಗಳ ಮಾರುಕಟ್ಟೆಗಳಲ್ಲಿ ಸುಂದರ ಗುಲಾಬಿ ಹೂವುಗಳು ನೋಡುಗರ ಕಣ್ಸೆಳೆಯುತ್ತಿವೆ. ಈ ಪ್ರದೇಶಗಳಲ್ಲಿ ಒಂದು ಗುಲಾಬಿ 25-30 ಬೆಲೆಗೆ ಮಾರಾಟ ಮಾಡಲಾಗುತ್ತಿದೆಇನ್ನಿತರೆ ಪ್ರದೇಶಗಳಲ್ಲಿ ಸದ್ಯ ಒಂದು ಗುಲಾಬಿ 15ಕ್ಕೆ ಖರೀದಿಯಾಗುತ್ತಿದೆ. ಮೂಲದಲ್ಲಿ ಒಂದು ಕಟ್ಟು (20 ಗುಲಾಬಿ) ಹೂವಿಗೆ 150 -200 ಗೆ ಖರೀದಿಸಿ ಶೇ.10ರಷ್ಟು ಹೆಚ್ಚಿನ ಬೆಲೆಯಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಹೂವು ಮಾರಾಟಗಾರರು ಫೆ.14ಕ್ಕೆಂದು ತಮ್ಮ ಎಂದಿನ ಬೇಡಿಕೆಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಗುಲಾಬಿ ಹೂವು ಖರೀದಿ ಮಾಡಿರುವುದು ವಿಶೇಷ. ಇನ್ನೊಂದೆಡೆ ಗಿಫ್ಟ್ ಸೆಂಟರ್‌ಗಳು, ಸ್ವೀಟ್ ಅಂಗಡಿಗಳಲ್ಲೂ ವ್ಯಾಪಾರ ಚುರುಕುಗೊಂಡಿದೆ.ಇನ್ನೊಂದೆಡೆ ಐಷಾರಾಮಿ ಹೋಟೆಲೆಗಳಲ್ಲೂ ಪ್ರೇಮಿಗಳ ದಿನಕ್ಕಾಗಿ ವಿಶೇಷ ಸಿದ್ಧತೆ ಪ್ರಾರಂಭಿಸಿವೆ. ಈ ಹಿಂದೆ ಪ್ರೇಮಿಗಳ ದಿನವೆಂದರೆ ಕೇವಲ ಪ್ರೇಮ ನಿವೇದನೆ ಮಾಡುವ ಯುವಕ-ಯುವತಿಯರು, ಹೊಸ ಸಂಗಾತಿ ಹುಡುಕಾಟದಲ್ಲಿ ತೊಡಗಿರುವವರು ಮಾತ್ರ ಆಚರಿಸುತ್ತಿದ್ದರು. ಆದರೆ, ಇಂದು ಈ ಮನೋಭಾವ ಬದಲಾಗಿದ್ದು, ಇತ್ತೀಚಿನ ದಿನಗಳಲ್ಲಿ ದಂಪತಿಗಳು ಕೂಡ ಪ್ರೇಮಿಗಳ ದಿನ ಆಚರಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಛತ್ತೀಸ್‌ಗಢದ ತುಮಾ ಕರಕುಶಲ ವಸ್ತುಗಳು: ಕುಶಲಕರ್ಮಿಗಳು ಸೋರೆಕಾಯಿ ಬಳಕೆಗೆ ಹೇಗೆ ಕಲೆ ಹಾಕುತ್ತಿದ್ದಾರೆ

Sat Feb 5 , 2022
ಮೀತಾ ರಹೇಜಾ ಅಂತಿಮವಾಗಿ ಒಪ್ಪಿಗೆ ನೀಡುವ ಮೊದಲು ಎರಡು ದಿನಗಳನ್ನು ತೆಗೆದುಕೊಂಡಿತು. ನವೆಂಬರ್‌ನಲ್ಲಿ ರಾಯ್‌ಪುರದಲ್ಲಿ ನಡೆದ ಛತ್ತೀಸ್‌ಗಢ ಬುಡಕಟ್ಟು ನೃತ್ಯ ಉತ್ಸವದಲ್ಲಿ ಕರಕುಶಲ ವಸ್ತು ಪ್ರದರ್ಶನದಲ್ಲಿ ದೀಪಾವಳಿ ಲ್ಯಾಂಟರ್ನ್ ಅನ್ನು ಅವರು ನೋಡುತ್ತಿದ್ದರು. ಇದರ ಬೆಲೆ ₹ 3,500, ಆದರೆ ಅದರ ಬೆಲೆ ಅವಳನ್ನು ಹಿಡಿದಿಟ್ಟುಕೊಳ್ಳಲಿಲ್ಲ. “ನನ್ನ ಮನೆಯಲ್ಲಿ ತುಂಬಾ ಲ್ಯಾಂಟರ್ನ್‌ಗಳಿವೆ. ನನಗೆ ಇನ್ನೊಂದು ಬೇಕಿರಲಿಲ್ಲ” ಎಂದು ದೆಹಲಿ ಮೂಲದ PR ಏಜೆನ್ಸಿಯ ಸಂಸ್ಥಾಪಕ ಹೇಳುತ್ತಾರೆ. ಆದಾಗ್ಯೂ, ಇದು ವಿಶೇಷವಾಗಿತ್ತು. […]

Advertisement

Wordpress Social Share Plugin powered by Ultimatelysocial