ಸ್ಟೀಲ್‌ ಸ್ಥಾವರದ ಮೇಲೆ ದಾಳಿ ನಡೆಸಬೇಡಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶಿಸಿದ್ದಾರೆ.

 

ಕೀವ್‌/ಮಾಸ್ಕೋ: ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಪಡೆಗಳಿಗೆ, ಮರಿಯುಪೋಲ್‌ನಲ್ಲಿ ಉಕ್ರೇನಿಯರಿಗೆ ಭದ್ರಕೋಟೆಯಂತಾಗಿರುವ ಸ್ಟೀಲ್‌ ಸ್ಥಾವರದ ಮೇಲೆ ದಾಳಿ ನಡೆಸಬೇಡಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆದೇಶಿಸಿದ್ದಾರೆ

ಮರಿಯುಪೋಲ್‌ನಲ್ಲಿ ಇನ್ನೂ ಸಾವಿರಾರು ಯೋಧರು ಹೋರಾಟ ನಡೆಸುತ್ತಿದ್ದಾರೆ ಎಂದು ರಷ್ಯಾದ ರಕ್ಷಣ ಸಚಿವರು ಹೇಳಿದ ಅನಂತರ ಪುಟಿನ್‌ ಈ ಆದೇಶ ಮಾಡಿದ್ದಾರೆ.

ಮತ್ತೂಂದೆಡೆ, ಕೀವ್‌ನ ಶವಾಗಾರಗಳಲ್ಲಿ 1,020 ಉಕ್ರೇನಿಯರ ಶವಗಳು ಬಿದ್ದಿವೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಅಜೋವಸ್ತಲ್‌ದಲ್ಲಿ ರಷ್ಯಾ ಪಡೆಯ ದಾಳಿಗೆ ಸಿಲುಕಿ ಗಾಯಾಳುಗಳಾಗಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲ ಮಾಡಿಕೊಡಬೇಕೆಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ಸ್ಪೇನ್‌ ಮತ್ತು ಡೆನ್‌ಮಾರ್ಕ್‌ನ ಪ್ರಧಾನಮಂತ್ರಿ ಕೀವ್‌ಗೆ ಬಂದಿದ್ದು, ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಖಾರ್ಕಿವ್‌ನಲ್ಲಿ ರಷ್ಯಾ 15 ಶೆಲ್‌ ದಾಳಿ ನಡೆಸಿದ್ದು, ಐವರು ಗಾಯಾಳುಗಳಾಗಿರುವುದಾಗಿ ಅಲ್ಲಿನ ಮೇಯರ್‌ ಹೇಳಿದ್ದಾರೆ.

ಉಕ್ರೇನ್‌ ಸಹಾಯಕ್ಕೆ ನಿಂತಿರುವ ಅಮೆ ರಿಕ, 1 ಲಕ್ಷ ಉಕ್ರೇನಿಯರಿಗೆ ದೇಶದಲ್ಲಿ ವಾಸಕ್ಕೆ ಅವಕಾಶ ಮಾಡಿಕೊಡುವುದಾಗಿ ಗುರುವಾರ ತಿಳಿಸಿದೆ. ಅದರ ಜತೆ ಉಕ್ರೇನ್‌ಗೆ 800 ಮಿಲಿಯನ್‌ ಡಾಲರ್‌(60 ಸಾವಿರ ಕೋಟಿ ರೂ.) ಮೌಲ್ಯದ ಯುದ್ದೋಪಕರಣ ಕೊಡುವುದಾಗಿ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು,

Fri Apr 22 , 2022
ಉಡುಪಿ: ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಹಿಜಾಬ್ ಹೋರಾಟಗಾರ್ತಿಯರಾದ ಆಲಿಯಾ ಹಾಗೂ ರೇಷಂ ಕೊನೆ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಉಡುಪಿಯ ಮಹಿಳಾ ಸರ್ಕಾರಿ ಕಾಲೇಜಿನ 6 ಹಿಜಾಬ್ ಹೋರಾಟಗಾರ್ತಿಯರ ಪೈಕಿ ಇಂದು ಕಾಮರ್ಸ್ ವಿಭಾಗದ ಇಬ್ಬರು ವಿದ್ಯಾರ್ಥಿನಿಯರಾದ ಆಲಿಯಾ ಹಾಗೂ ರೇಷಂ ಪರೀಕ್ಷೆ ಬರೆಯಲು ಮುಂದಾಗಿದ್ದು, ಇದೀಗ ಕೊನೆ ಘಳಿಗೆಯಲ್ಲಿ ಹಾಲ್ ಟಿಕೆಟ್ ಪಡೆದುಕೊಂಡಿದ್ದಾರೆ. ಹಿಜಾಬ್ ಧರಿಸಿಯೇ ಪರೀಕ್ಷಾ ಕೇಂದ್ರ ಉಡುಪಿ ವಿದ್ಯೋದಯ ಕಾಲೇಜಿಗೆ […]

Advertisement

Wordpress Social Share Plugin powered by Ultimatelysocial