ಆಗ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳದೆ, ಈಗ ನೈಟ್ ಕರ್ಫ್ಯೂ ಮಾಡುತ್ತಿರುವುದು ಅನಾಗರಿಕತನ; ವಾಟಾಳ್ ನಾಗರಾಜ್

ಮುಖ್ಯಮಂತ್ರಿಯಾದವರು ರಾಜ್ಯದ ಜನರ ಬೇಡಿಕೆಗಳನ್ನು ಪರಿಗಣಿಸಬೇಕು. ಇದು ದಾಯಾದಿ ಜಗಳವಲ್ಲ, ಸಾರಿಗೆ ನೌಕರರನ್ನು ಕರೆದು ಮಾತಾನಾಡಿ. ಅದು ಬಿಟ್ಟು ಅವರುಗಳ ನಡುವಿನ ಒಗ್ಗಟ್ಟನ ಹೊಡೆಯುವ ಕೆಲಸ ಮಾಡಬೇಡಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಲಹೆ ನೀಡಿದರು.

ರ್ನಾಟಕದಲ್ಲಿ ಮಾಡಲಾಗುತ್ತಿರುವ ಕೊರೋನಾ ಕರ್ಫ್ಯೂ ಬೋಗಸ್ರಾತ್ರಿ ಹೊತ್ತಲ್ಲಿ ಕರ್ಫ್ಯೂ ಮಾಡಿದರೆ ಆಗುವ ಪ್ರಯೋಜನವಾದರೂ ಏನುಆರು ಕೋಟಿ ಜನರಲ್ಲಿ ನಾಲ್ಕು ಕೋಟಿ ಜನ ಮಲಗಿರುತ್ತಾರೆಕರ್ಫ್ಯೂ ಬದಲು ಆಸ್ಪತ್ರೆಗಳಲ್ಲಿ ಬೆಡ್, ಔಷಧಿ, ವೆಂಟಿಲೇಟರ್ ಕೊಡಿಆಗ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳದೆ, ಈಗ ಕರ್ಫ್ಯೂ ಮಾಡುತ್ತಿರುವುದು ಅನಾಗರಿಕತನಈಗಲಾದರೂ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳಲಿ ಎಂದು ನೈಟ್ಕರ್ಫ್ಯೂ ವಿರುದ್ಧ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದರು.

ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಸರ್ಕಾರ ಇಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ವಿಧಿಸಿದೆ. ಇದಕ್ಕೆ ಹಲವು ಜನರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ವಾಟಾಳ್ ನಾಗರಾಜ್ ಅವರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಸಾರಿಗೆ ನೌಕರರ ಮುಷ್ಕರ ಮುಂದಾಳತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ವಾಟಾಳ್ ನಾಗರಾಜ್, ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧನ ಮಾಡಿರೋದು ಸರಿಯಲ್ಲ. ಸರ್ಕಾರ ಹಠಮಾರಿತನವನ್ನು ಬಿಡಬೇಕು. ಯಡಿಯೂರಪ್ಪ ದ್ವೇಷವನ್ನು ಬಿಡಬೇಕು. ಬಂಧನ ಮಾಡಿರೋದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸಾರಿಗೆ ನೌಕರರನ್ನು, ಮುಖಂಡರನ್ನು ಕರೆದು ಮಾತುಕತೆ ನಡೆಸಲಿ. ಪರ್ಯಾಯ ವ್ಯವಸ್ಥೆ ಅನ್ನೋದು ದೊಡ್ಡ ದರೋಡೆ. ರಿಕ್ಷಾ, ಖಾಸಗಿ ಬಸ್ ಗಳು, ಟ್ಯಾಕ್ಸಿಗಳು ಸಾರ್ವಜನಿಕರನ್ನ ಕೊಳ್ಳೆ ಹೊಡೆಯುತ್ತಿವೆ. ಈ ಕೂಡಲೇ ಕೋಡಿಹಳ್ಳಿ ಅವರನ್ನ ಬಂಧಮುಕ್ತ ಮಾಡಲಿ ಎಂದು ಆಗ್ರಹಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ರಾಣೆಬೆನ್ನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಧರಣಿ

Sat Apr 10 , 2021
ರಾಣೆಬೆನ್ನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಗರದ ಬಸ್ ಸ್ಟ್ಯಾಂಡ್ ನಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ನಡೆಸಿದರು. KSRTC ನೌಕರರಿಗೆ ಬೆಂಬಲ ಸೂಚಿಸಿ ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ರವಾನಿಸಿದರು .ನಂತರ ಮಾತನಾಡಿದ ರವೀಂದ್ರ ಗೌಡ ಪಾಟೀಲ್  ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ, ಖಾಸಗಿ ಬಸ್ಸುಗಳ ಓಡಾಟ, ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಆಪಾದನೆ ಮಾಡುವುದೊಂದೇ ಪರಿಹಾರವಲ್ಲ. ಅಪಾದನೆ […]

Advertisement

Wordpress Social Share Plugin powered by Ultimatelysocial