ಬಾಲಿವುಡ್ ನಟ ವಿಕ್ಕಿ ಕೌಶಲ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ.

ಬಾಲಿವುಡ್ ನಟ ವಿಕ್ಕಿ ಕೌಶಲ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೆಲವೇ ಕೆಲವು ವರ್ಷಗಳಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ವಿಕ್ಕಿ ಕೌಶಲ್ ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಕೈ ಹಿಡಿದಿದ್ದಾರೆ. ಆದ್ರೆ ವಿಕ್ಕಿ ಗಿರೋ ಹುಡುಗಿಯರ ಅಭಿಮಾನಿ ಬಳಗ ಮಾತ್ರ ಕೊಂಚವು ಕಮ್ಮಿಯಾಗಿಲ್ಲ.

ಇದೀಗ ವಧುವೊಬ್ಬರು ವಿಕ್ಕಿ ಕೌಶಲ್ ನೋಡಲು ಹಸೆಮಣೆ ಬಿಟ್ಟು ಕಾಯುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವಧು ವಿಕ್ಕಿ ಕೌಶಲ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಆ ಅಭಿಮಾನದಿಂದ ವರನು ಪೇಚಿಗೆ ಸಿಲುಕಿದ್ದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ವಿಕ್ಕಿ ಕೌಶಲ್ ತಂಗಿದ್ದ ಹೋಟೆಲ್ ಈಗ ತನ್ನ ಮದುವೆಯ ಸ್ಥಳ ಎಂದು ತಿಳಿದ ಮದುಮಗಳು ಹಸೆಮಣೆ ಏರಲು ನಿರಾಕರಿಸಿದ್ದಾಳೆ. ಮೊದಲು ನೆಚ್ಚಿನ ನಟ ವಿಕ್ಕಿ ಜೊತೆ ಭೇಟಿ, ಆಮೇಲೆ ಮದುವೆ ಅಂತಾ ಹಸೆಮಣೆ ಬಿಟ್ಟು ವಿಕ್ಕಿ ತಂಗಿದ್ದ ರೂಂ ಬಳಿ ಹೋಗಿದ್ದಾಳೆ. ನಟನ ಭೇಟಿಗಾಗಿ ವಧು ವಿಕ್ಕಿ ತಂಡದ ಜತೆ ಮಾತನಾಡಿದ್ದಾಳೆ.

ಆದರೆ ಮೊದಲೇ ವಿಕ್ಕಿ ಚಿತ್ರೀಕರಣಕ್ಕಾಗಿ ಬೇರೆ ಲೋಕೇಷನ್‌ಗೆ ಹೋಗಿದ್ದರು. ಹಾಗಾಗಿ ವಧು ವಿಕ್ಕಿ ಅವರನ್ನ ಭೇಟಿ ಮಾಡಲು ಸಾಧ್ಯವಾಗಿಲ್ಲ. ವಿಕ್ಕಿಗಾಗಿ ಕಾದು ಕೂತಿದ್ದ ವಧುಗೆ ಕೊನೆಗೂ ನಿರಾಸೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ವಿರುದ್ಧ ಬೇಡ ಜಂಗಮರ ಆಕ್ರೋಶ; ಮುಂದಿನ ನಡೆ?

Mon Jul 4 , 2022
ಬೆಂಗಳೂರು ಜು.4: ಸಾಂವಿಧಾನಿಕ ಹಕ್ಕುಗಳನ್ನು ಒದಗಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯದ ಬೇಡ ಜಂಗಮರಿಗೆ ರಾಜ್ಯ ಸರ್ಕಾರ ನಾಲ್ಕು ವರ್ಷದ ಹಿಂದೆ ನೀಡಿದ್ದ ಆದೇಶವನ್ನೇ ಪುನಃ ನೀಡಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಐದು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಬೇಡ ಜಂಗಮರು ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ನಡೆದು ಕೊಳ್ಳುತ್ತದೆ ಎಂದು ನಂಬಿದ್ದರು. ಭರವಸೆ ಹುಸಿಯಾದ ಹಿನ್ನೆಲೆ ಹೋರಾಟದ ಮುಂದಿನ ನಡೆ ಕುರಿತು ತೀರ್ಮಾನಿಸಲು ಸಭೆ ಕರೆದಿದ್ದಾರೆ. ಸಾಂವಿಧಾನಿಕ […]

Advertisement

Wordpress Social Share Plugin powered by Ultimatelysocial