ವಿಕ್ಟರ್ ಹ್ಯೂಗೋ ಮಹಾನ್ ಕಾದಂಬರಿಕಾರ.

ಮಹಾನ್ ಕಾದಂಬರಿಕಾರ ವಿಕ್ಟರ್ ಹ್ಯೂಗೋ ವಿಶ್ವದೆಲ್ಲೆಡೆ ಪರಿಚಿತರು. ಅವರ ಒಂದು ಉದ್ಘೋಷ ಹೀಗಿದೆ”: “The reduction of the univserse to single being, the expansion of single being even to God, this is love.” ಇಡಿಯ ಬ್ರಹ್ಮಾಂಡವನ್ನೇ ಒಂದು ಜೀವಿಯಲ್ಲಿ ಹ್ರಸ್ವ ಮಾಡಬಲ್ಲಂತದ್ದೂ, ಜೀವಿಯೊಂದನ್ನು ದೈವತ್ವಕ್ಕೂ ವಿಸ್ತರಿಸಿಬಲ್ಲಂಥದೂ ಒಂದಿದೆ. ಅದೇ ಪ್ರೀತಿ.’
ಪ್ರಖ್ಯಾತ ಫ್ರೆಂಚ್ ಕವಿ, ನಾಟಕಕಾರ, ಕಾದಂಬರಿಕಾರ, ಪ್ರಬಂಧಕಾರ, ಮಹಾನ್ ಚಿತ್ರಕಾರ, ರಾಜನೀತಿಜ್ಞ, ಮಾನವ ಹಕ್ಕುಗಳ ಪ್ರತಿಪಾದಕ, ಫ್ರಾನ್ಸ್ ದೇಶದ ರೋಮ್ಯಾಂಟಿಕ್ ಸಾಹಿತ್ಯ ಯುಗದ ಪ್ರಧಾನ ಪ್ರವರ್ತಕರಾದ ವಿಕ್ಟರ್ ಮೇರಿ ಹ್ಯೋಗೋ ಅವರು 1802ರ ಫೆಬ್ರುವರಿ 26ರಂದು ಜನಿಸಿದರು.
ವಿಕ್ಟರ್ ಹ್ಯೂಗೋ ಅವರ ಸಾಹಿತ್ಯ ಜೀವನ 1819ರಲ್ಲಿ ಪ್ರಾರಂಭಗೊಂಡಿತು. ಜೀವನವನ್ನು ಪ್ರತಿಬಿಂಬಿಸುವ ವಸ್ತುಗಳು ಮತ್ತು ಬಡಜನತೆಯನ್ನು ಪ್ರತಿಬಿಂಬಿಸುವ ಪಾತ್ರಗಳನ್ನು ಸೃಷ್ಟಿಸಿದ ಇವರು ಸಾಮಾಜಿಕ ಬದ್ಧತೆಯ ಬಗ್ಗೆ ಅಪಾರ ನಂಬಿಕೆ ಹೊಂದಿದ್ದರು. Les Contemplations, siècles ಮುಂತಾದ ಕಾವ್ಯ ಸಂಕಲನಗಳಿಂದ ಮಹಾನ್ ಫ್ರೆಂಚ್ ಕವಿ ಎಂದು ವಿಮರ್ಶಕರಿಂದ ಪ್ರಖ್ಯಾತರಾಗಿರುವಂತೆಯೇ, ವಿಕ್ಟರ್ ಹ್ಯೂಗೋ ಫ್ರಾನ್ಸಿನ ಹೊರಗೆ Les Misérables, Notre-Dame de Paris ಅಥವಾ ಇಂಗ್ಲಿಷಿನಲ್ಲಿ The Hunchback of Notre-Dame (ನಾತ್ರದಾಮಿನ ಗೂನು ಬೆನ್ನಿನವನು) ಮುಂತಾದ ಕಾದಂಬರಿಗಳಿಂದ ಪ್ರಖ್ಯಾತಿ ಪಡೆದರು.
ವಿಕ್ಟರ್ ಹ್ಯೂಗೋ ಅವರ ತಂದೆ ನೆಪೋಲಿಯನ್ನನ ಸೇನೆಯಲ್ಲಿ ದಂಡನಾಯಕರಾಗಿದ್ದರು. ಪ್ರಾರಂಭದಲ್ಲಿ ರಾಜಮನೆತನಕ್ಕೆ ನಿಷ್ಟರಾಗಿದ್ದ ವಿಕ್ಟರ್ ಹ್ಯೂಗೋ 1848ರ ಕ್ರಾಂತಿಯಲ್ಲಿ ಕ್ರಾಂತಿಕಾರರಿಗೆ ಮುಕ್ತ ಬೆಂಬಲ ಸೂಚಿಸಿದರು. ತಮ್ಮ ಬದುಕಿನಲ್ಲಿ ಸುಮಾರು 50 ವರ್ಷಗಳನ್ನು ಫ್ರಾನ್ಸಿನಲ್ಲಿ ಕಳೆದ ವಿಕ್ಟರ್ ಹ್ಯೂಗೋ ಮೂರನೆಯ ನೆಪೋಲಿಯನ್ ನಿರಂಕುಶತ್ವವನ್ನು ವಿರೋಧಿಸಿದ ರಾಜಕೀಯ ನಿಲುವುಗಳಿಂದಾಗಿ ಹೊರ ಪ್ರದೇಶಗಳಾದ ಬ್ರಸೆಲ್ಸ್, ಜೆರ್ಸೆಯ್, ಗುರೆನ್ಸೆ ಮುಂತಾದ ಪ್ರದೇಶಗಳಲ್ಲಿ ತಮ್ಮ ಜೀವನವನ್ನು ಕಳೆಯಬೇಕಾಗಿ ಬಂದು 1872ರ ಸಮಯದಲ್ಲಿ ಪುನಃ ಫ್ರಾನ್ಸಿಗೆ ಹಿಂದಿರುಗಿದರು.
ಕನ್ನಡ ವಿಶ್ವಕಥಾಕೋಶದಲ್ಲಿ ‘ಜೆನ್ನಿ’ ಎಂಬ ವಿಕ್ಟರ್ ಹ್ಯೂಗೋ ಅವರ ಕಥೆಯಿದೆ. ಕೆಲವು ಮಾತುಗಳಲ್ಲಿ ಈ ಕಥೆಯನ್ನು ಇಲ್ಲಿ ಮೂಡಿಸಲೆತ್ನಿಸುತ್ತೇನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್‌ಕುಮಾರ್ ಅವರ ಐವರು ಮೊಮ್ಮಕ್ಕಳಿವರು

Sun Feb 26 , 2023
ವಿನಯ್ ರಾಜ್ ಕುಮಾರ್ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ 2015ರಲ್ಲಿ‘ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡವರು.ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದರು. ವಿನಯ್ ಅವರು ಸಿದ್ದಾರ್ಥ್, ರನ್ ಆಂಟನಿ, ಆರ್ ದಿ ಕಿಂಗ್ ಹಾಗೂ 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಡಾ.ರಾಜ್ ಕುಮಾರ್ ಮೊಮ್ಮಕ್ಕಳ ಪೈಕಿ ವಿನಯ್ ಮೊದಲನೆಯವರು.ಧನ್ಯಾ ರಾಮಕುಮಾರ್ಧನ್ಯಾ […]

Advertisement

Wordpress Social Share Plugin powered by Ultimatelysocial