ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಿಧಾನಸಭೆಯ ಸದಸ್ಯರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಜಗದೀಪ್ ಧಂಕರ್ ಅವರು ಪ್ರಮಾಣವಚನ ಬೋಧಿಸಿದರು.

ಮಮತಾ ಅವರೊಂದಿಗೆ ಟಿಎಂಸಿಯ ಜಾಕೀರ್ ಹೊಸೈನ್ ಮತ್ತು ಅಮಿರುಲ್ ಇಸ್ಲಾಂ ಅವರೂ ಶಾಸಕರಾಗಿ ಪ್ರಮಾಣ ವಚನ ಪಡೆದರು.

ಭವಾನಿಪುರ ಉಪಚುನಾವಣೆಯಲ್ಲಿ 58,835 ಮತಗಳ ಅಂತರದಿಂದ ಜಯಗಳಿಸಿದ ಬ್ಯಾನರ್ಜಿ, ಬಂಗಾಳಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಮಾರ್ಚ್-ಏಪ್ರಿಲ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಸ್ಪರ್ಧಿಸಿದ್ದರಾದರೂ, ತಮ್ಮ ಎದುರಾಳಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದರು. ಆದರೂ, ಪಕ್ಷ ಬಹುಮತ ಪಡೆದ ಹಿನ್ನೆಲೆಯಲ್ಲಿ ಅವರು ಮೇ 5ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಅವರು ವಿಧಾನಸಭೆ ಆಯ್ಕೆಯಾಗಿ ಬರಲೇಬೇಕಾದ ಅನಿವಾರ್ಯತೆ ಇತ್ತು . ಹೀಗಾಗಿ ತಾವು ಈ ಹಿಂದೆ ಪ್ರತಿನಿಧಿಸುತ್ತಿದ್ದ ಭವಾನಿಪುರದಿಂದ ಸ್ಪರ್ಧಿಸಲು ಮಮತಾ ತೀರ್ಮಾನಿಸಿದ್ದರು. ಅದಕ್ಕಾಗಿ ಅಲ್ಲಿನ ಚುನಾಯಿತಿ ಪ್ರತಿನಿಧಿ ಶೋಭನ್‌ ದೇವ್‌ ಚಟರ್ಜಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರಂತೆ ನಡೆದ ಉಪ ಚುನಾವಣೆಯಲ್ಲಿ ಮಮತಾ ಅವರು ಭರ್ಜರಿ ಜಯ ದಾಖಲಿಸಿದ್ದರು.

ಮಮತಾ ಅವರೊಂದಿಗೆ ಗುರುವಾರ ಟಿಎಂಸಿ ಶಾಸಕರಾದ ಜಾಕೀರ್ ಹೊಸೇನ್‌ ಮತ್ತು ಅಮಿರುಲ್ ಇಸ್ಲಾಂ ಕೂಡ ಪ್ರಮಾಣವಚನ ಸ್ವೀಕರಿಸಿದರು. ಜಾಕಿರ್ ಹೊಸೇನ್‌ ಜಂಗೀಪುರ ಕ್ಷೇತ್ರದಿಂದ 92,480 ಮತಗಳ ಅಂತರದಲ್ಲಿ ಗೆದ್ದಿದ್ದರೆ, ಅಮಿರುಲ್ ಇಸ್ಲಾಂ ಸಂಸೇರ್‌ಗಂಜ್‌ನಿಂದ 26,379 ಮತಗಳಿಂದ ಗೆದ್ದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜನಗರ 450 ಹಾಸಿಗೆಯ ಸರ್ಕಾರಿ ಆಸ್ಪತ್ರೆಯನ್ನ ರಾಷ್ಟ್ರಪತಿಯಿಂದ ಉದ್ಘಾಟನೆ

Thu Oct 7 , 2021
ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿ ಬಳಿ ನಿರ್ಮಿಸಿರುವ 450 ಹಾಸಿಗೆಯ ಸರ್ಕಾರಿ ಆಸ್ಪತ್ರೆಯನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಉದ್ಘಾಟಿಸಿದರು. ಇದಕ್ಕೂ ಮುನ್ನ ರಾಷ್ಟ್ರಪತಿಗಳು ಬಿಳಿಗಿರಿರಂಗನಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಷ್ಟ್ರಪತಿಗೆ‌‌ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ‌.ಸೋಮಶೇಖರ್ […]

Advertisement

Wordpress Social Share Plugin powered by Ultimatelysocial