ಸೋಮವಾರದಿಂದ ವಿಧಾನಸಭೆಯ ಜಂಟಿ‌ ಅಧಿವೇಶನ ಆರಂಭವಾಗಲಿದೆ!

ಬೆಂಗಳೂರು : ಸೋಮವಾರದಿಂದ ವಿಧಾನಸಭೆಯ ಜಂಟಿ‌ ಅಧಿವೇಶನ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಕಲಾಪ ವೀಕ್ಷಣೆ ಮಾಡುವುದಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿಚಾರ ತಿಳಿಸಿದ್ದಾರೆ.ಫೆ. 14 ರಂದು ರಾಜ್ಯಪಾಲರು ಸದನ ಉದ್ದೇಶಿಸಿ ಮಾತನಾಡಲಿದ್ದಾರೆ.ರಾಜ್ಯಪಾಲರು ಈ ಬಾರೀ ಗ್ರಾಂಡ್ ಸ್ಟೇಪ್ ನಿಂದ ಬರಲಿದ್ದಾರೆ. ಹಿಂದೆ ಸಹ ಈ ಪದ್ದತಿ ಇತ್ತು ಆದ್ರೆ ಕೆಲ ಕಾರಣಾಂತರದಿಂದ ನಿಲ್ಲಿಸಲಾಗಿತ್ತು.ಈಗ ಅಲ್ಲಿಂದಲೇ ರಾಜ್ಯಪಾಲರು ಬರುತ್ತಾರೆ ಎಂದು ಹೇಳಿದರು.ರಾಜ್ಯಪಾಲರ ಭಾಷಣ ಆದ ಮೇಲೆ ಸಲ್ಪ ಹೊತ್ತು ಸದನ ಮುಂದೂಡಲಾಗುವುದು.ಇದಾದನಂತರ ಇತ್ತಿಚ್ಚೆಗೆ ಮೃತಪಟ್ಟ ಗಣ್ಯ ವ್ಯಕ್ತಿಗಳಿ‌ ಸಂತಾಪ ಸೂಚನೆ ಇರಲಿದೆ.ಈ ಬಾರೀ ಎರಡು ವಿಧೇಯಕ ಮಂಡನೆಯಾಗಲಿದೆ ಎಂದರು.ಸೋಮವಾರ 11 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.ನಂತರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಇದುವರೆಗೆ ಎರಡು ವಿಧೇಯಕ ಕಚೇರಿಗೆ ತಲುಪಿದೆ. ಉಳಿದ ವಿಧೇಯಕವನ್ನು ಸದನ ಪ್ರಾರಂಭ ಆಗುವ ಮೊದಲೇ ಕೊಡಬೇಕು ಎಂದು ಸೂಚಿಸಲಾಗಿದೆ. ಇದುವರೆಗೆ 2062 ಪ್ರಶ್ನೆಗಳು ಬಂದಿವೆ. ಈ ಬಾರಿ ಕಲಾಪ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.ವಿಧಾನಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸದನದ ಬಾವಿಯಲ್ಲಿ ಭಿತ್ತಿಪತ್ರ ಪ್ರದರ್ಶಿಸುವಂತಿಲ್ಲ. ನಿಯಮಗಳ ಪಾಲನೆಗೆ ಎಲ್ಲಾ ಸದಸ್ಯರಿಗೂ ಸೂಚನೆ ನೀಡಲಾಗಿದೆ.ಮೇಲ್ಮನೆಯ ಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲು ತೀರ್ಮಾನ ಮಾಡಿದ್ದೇವೆ.ಮೊನ್ನೆ ನಡೆದ ತರಬೇತಿ ಶಿಬಿರದಲ್ಲಿ 48 ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು ಎಂದರು.೬೦ ದಿನ ಸದನ ನಡೆಯಬೇಕೆಂದು ನಾವು ಹೇಳುತ್ತಲೇ ಬರುತ್ತಿದ್ದೇವೆ.ಸರ್ಕಾರ ಎಷ್ಟು ದಿನ ನಡೆಸಬೇಕೆಂದು ಹೇಳುತ್ತದೋ ಅಷ್ಟು ದಿನ ನಾವು ನಡೆಸಬೇಕಾಗುತ್ತದೆ.ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ಹಮ್ಮಿಕೊಳ್ಳುವ ಚಿಂತನೆ ಇದೆ.ಸರ್ಕಾರ ಒಪ್ಪಿಕೊಂಡರೆ ಮಾಡುತ್ತೇವೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KOLLYWOOD:ಕಡೈಸಿ ವಿವಾಹಿ ಪೂರ್ಣ ಚಲನಚಿತ್ರ ಉಚಿತ ಡೌನ್ಲೋಡ್ಗಾಗಿ ಆನ್ಲೈನ್ನಲ್ಲಿ ಬಿಡುಗಡೆ;

Sat Feb 12 , 2022
ಕಾಕ ಮುತ್ತೈ ನಿರ್ದೇಶಕ ಎಂ ಮಣಿಕಂದನ್ ಅವರ ಇತ್ತೀಚಿನ ಬಿಡುಗಡೆಯಾದ ಕಡೈಸಿ ವಿವಸಾಯಿ ಶುಕ್ರವಾರ (ಫೆಬ್ರವರಿ 11) ಥಿಯೇಟರ್‌ಗಳಿಗೆ ಅಪ್ಪಳಿಸಿತು. ನಲ್ಲಂಡಿ (86 ವರ್ಷ ವಯಸ್ಸಿನ ರೈತ), ವಿಜಯ್ ಸೇತುಪತಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಗ್ರಾಮೀಣ ನಾಟಕವು ಚಲನಚಿತ್ರ ರಸಿಕರ ಗಮನವನ್ನು ಸೆಳೆಯುತ್ತಿದೆ. ಚಿತ್ರವು ಆನ್‌ಲೈನ್‌ನಲ್ಲಿ ಸೋರಿಕೆಯಾದ ಇತ್ತೀಚಿನ ಚಿತ್ರವೂ ಆಗಿದೆ. ಟೆಲಿಗ್ರಾಮ್, ತಮಿಳ್‌ರಾಕರ್ಸ್ ಮತ್ತು ಮೂವೀರುಲ್ಜ್‌ನಂತಹ ಪ್ಲಾಟ್‌ಫಾರ್ಮ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಕಡೈಸಿ ವಿವಾಸಾಯಿ ಸೋರಿಕೆಯಾಗಿದೆ […]

Advertisement

Wordpress Social Share Plugin powered by Ultimatelysocial