ಭೂ ದಾಖಲೆಗಳ ಅರ್ಜಿ ಸ್ಥಿತಿಗತಿ, ನಕ್ಷೆ ಮುದ್ರಣ ಆನ್‌ಲೈನಲ್ಲೇ ಲಭ್ಯ!

ನಾಗರಿಕರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರ ನಕ್ಷೆಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು ಎಂದು ಭೂ ಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.

ಬೆಂಗಳೂರು: ಇನ್ನು‌ ಮುಂದೆ 11 ಇ, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳ ಮುದ್ರಣ ಮತ್ತು ಅರ್ಜಿಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು. ಈ ಸಂಬಂಧ ವೆಬ್ ಸೈಟ್​​​ನ್ನು ಅಭಿವೃದ್ಧಿ ಪಡಿಸಲಾಗಿದ್ದು, ನಾಗರಿಕರು ತಮ್ಮ‌ ಬೆರಳ ತುದಿಯಲ್ಲೇ ತಮ್ಮ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಭೂ ಮಾಪನ ಹಾಗೂ ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸುವ ಸಮಯದಲ್ಲಿ, ನಾಗರಿಕರು ಅರ್ಜಿಗಳಿಗೆ ಹಣ ಪಾವತಿಸುತ್ತಾರೆ. ಆದ್ದರಿಂದ, ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ, https://103.138.196.154/service19/Report/ApplicationDetailsವೆಬ್‌ಸೈಟ್ ಲಿಂಕ್‌ನಲ್ಲಿ ಅದನ್ನು ಮುದ್ರಿಸಲು ಲಭ್ಯವಿರುತ್ತದೆ. ಅದೇ ವೆಬ್‌ಸೈಟ್ ಲಿಂಕ್‌ನಲ್ಲಿ ಯಾವುದೇ ಸಮಯದಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಸಹ ತಿಳಿದುಕೊಳ್ಳಬಹುದಾಗಿದೆ.

ನಾಗರಿಕರು ಅರ್ಜಿ ಸಲ್ಲಿಸುವಾಗಲೇ ಶುಲ್ಕ ಪಾವತಿ ಮಾಡಿರುವುದರಿಂದ, ಆನ್‌ಲೈನ್ ಸ್ಕೆಚ್‌ಗಳನ್ನು ಮುದ್ರಿಸಲು ಯಾವುದೇ ಹೆಚ್ಚುವರಿ ಪಾವತಿಯನ್ನು ಮಾಡಬೇಕಾಗಿಲ್ಲ. ನಾಗರಿಕರು ತಮ್ಮ ನಕ್ಷೆಗಳ ಪ್ರಿಂಟ್ ಔಟ್ ಪಡೆಯಲು ಸರ್ವೇ ಕಚೇರಿಗಳಿಗೆ ಹೋಗಬೇಕಾದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

-ತಿರುಪತಿ-ಚೆನ್ನೈ ನಡುವೆ ಹೊಸ ರೈಲು ಸೇವೆ ಆರಂಭಿಸಲಿದೆ.

Mon Apr 18 , 2022
  -ತಿರುಪತಿ-ಚೆನ್ನೈ ನಡುವೆ ಹೊಸ ರೈಲು ಸೇವೆ ಆರಂಭಿಸಲಿದೆ. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ 6.15ಕ್ಕೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ. ವಾರಕ್ಕೆ ಎರಡು ದಿನ ಶಿವಮೊಗ್ಗ-ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಹೋಗುವ ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗುತ್ತಿದೆ. ಈ ರೈಲು ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿ ಮತ್ತು ಮಟ್ರೋ ನಗರವಾದ ಚೆನ್ನೈಗೆ ಮಲೆನಾಡಿನಿಂದ ಸಂಪರ್ಕ ಕಲ್ಪಿಸಲಿದೆ. ಭಾನುವಾರ ಸಂಜೆ 6.15ಕ್ಕೆ […]

Advertisement

Wordpress Social Share Plugin powered by Ultimatelysocial