ವಿಜಯ್‌ ಸಿಂಗ್‌, ಮಾಜಿ ಶಾಲಾ ಶಿಕ್ಷಕರು. ಕಳೆದ 26 ವರ್ಷಗಳಿಂದ ಧರಣಿ ನಿರತರು!

 

ಈ ಬಾರಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ಗೆ ಒಬ್ಬರೇ ಸಾಮಾನ್ಯ ಎದುರಾಳಿ ಇದ್ದಾರೆ. ಯಾವುದೇ ರಾಜಕೀಯ ಪಕ್ಷದಿಂದ ಈ ಅಭ್ಯರ್ಥಿ ಕಣಕ್ಕೆ ಇಳಿಯುತ್ತಿಲ್ಲ. ಬದಲಿಗೆ ಸ್ವತಂತ್ರರಾಗಿ ರಣಕಣಕ್ಕೆ ಇಳಿಯುತ್ತಿದ್ದಾರೆ.ಇವರ ಹೆಸರು ವಿಜಯ್‌ ಸಿಂಗ್‌, ಮಾಜಿ ಶಾಲಾ ಶಿಕ್ಷಕರು. ಕಳೆದ 26 ವರ್ಷಗಳಿಂದ ಧರಣಿ ನಿರತರು!ಹೌದು, ಮುಜಾಫ್ಫರ್ ‌ನಗರದಲ್ಲಿ ಭೂಕಬಳಿಕ ಮಾಫಿಯಾ ಬಹಳ ದೊಡ್ಡದಾಗಿದೆ. ಇದು ಜನಸಾಮಾನ್ಯರ ಜೀವನ ಹಾಳು ಮಾಡಿದೆ. ಖಡಕ್‌ ಕಾನೂನು ಕ್ರಮ ಜರುಗಿಸಬೇಕು ಎಂದು ವಿಜಯ್‌ ಸಿಂಗ್‌ ಅವರು 26 ವರ್ಷಗಳಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುತ್ತಿದ್ದಾರೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯು ಪ್ರಭಾವಿಗಳಿಂದ ಕಬಳಿಕೆ ಆಗಿದೆ ಎನ್ನುವುದು ಇವರ ಆರೋಪ.ಫೆ.9ರಂದು ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಗೋರಖ್‌ಪುರ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲು ನಾಮಪತ್ರವನ್ನು ವಿಜಯ್‌ ಸಿಂಗ್‌ ಸಲ್ಲಿಸಲಿದ್ದಾರೆ. ಫೆ.11ರ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಾ. 3ರಂದು ಮತದಾನ ನಡೆಯಲಿದೆ.ವಿಜಯ್‌ ಸಿಂಗ್‌ ಅವರ ಪ್ರಕಾರ ಅಖಿಲೇಶ್‌ ಯಾದವ್‌ ಅವರು ಕೂಡ ಸಿಎಂ ಆಗಿದ್ದಾಗ ಲ್ಯಾಂಡ್‌ ಮಾಫಿಯಾ ವಿರುದ್ಧ ಕ್ರಮ ಜರುಗಿಸಲಿಲ್ಲ. ಹಾಗಾಗಿ ಅವರು ಸ್ಪರ್ಧಿಸಿರುವ ಕರ್ಹಾಲ್‌ ಕ್ಷೇತ್ರದಲ್ಲಿ ಕೂಡ ಅಖಿಲೇಶ್‌ ವಿರುದ್ಧ ಪ್ರಚಾರವನ್ನು ನಡೆಸಲಿದ್ದಾರಂತೆ.1996ರ ಜನವರಿಯಿಂದ ಮುಜಾಫ್ಫರ್‌ನಗರ ಜಿಲ್ಲಾಧಿಕಾರಿ ಕಚೇರಿ ಎದುರು ವಿಜಯ್‌ ಸಿಂಗ್‌ ಅವರು ಧರಣಿಗೆ ಕುಳಿತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಬೆಳಗ್ಗೆ 9:45ಕ್ಕೆ ಅಫ್ಘಾನಿಸ್ತಾನ-ತಜಕಿಸ್ತಾನ್ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ̤

Sat Feb 5 , 2022
ನವದೆಹಲಿ: ಇಂದು ಬೆಳಗ್ಗೆ 9:45ಕ್ಕೆ ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಅಂತ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಇದೇ ವೇಳೆ ಕಾಶ್ಮೀರ, ನೋಯ್ಡಾ ಮತ್ತು ಇತರ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial