ಸಲುಗೆಯಿಂದಿದ್ದ ಹುಡುಗಿಯಿಂದ ದೂರವಿದ್ದರೂ ತೋಟಕ್ಕೆ ಕರೆದೊಯ್ದು ಯುವಕನ ಮೇಲೆ ಹಲ್ಲೆ.

 

ವಿಜಯಪುರ: ಪ್ರೀತಿಸಿದ, ಸಲುಗೆಯಿಂದಿದ್ದ ಹುಡುಗಿಯಿಂದ ದೂರವಿದ್ದರೂ ಹುಡುಗನನ್ನು ತೋಟಕ್ಕೆ ಕರೆದೊಯ್ದು ಕೈ ಕಾಲು ಕಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜ.

9ರಂದೇ ಈ ಘಟನೆ ನಡೆದಿದ್ದು ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಯುವಕನ ಅಣ್ಣ ಜ. 12ರಂದು ತಿಕೋಟಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನೀಲ ಬಾಬು ಜೊಲ್ಲಿ (23) ಎಂಬಾತ ಹಲ್ಲೆಗೆ ಒಳಗಾದ ಯುವಕ. ಅದೇ ಗ್ರಾಮದ ಬಾಳಪ್ಪ ಮುಕುಂದ ಕ್ಯಾತನ್‌, ರಾಘವೇಂದ್ರ ಬಾಳಪ್ಪ ಕ್ಯಾತನ, ದೀಪಕ ಧರೆಪ್ಪಕ್ಯಾತನ ಹಾಗೂ ಸುಚೀತ ಅಶೀಕ ಅವಧಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ:
ಸುನೀಲ ಐಟಿಐ ಕಲಿತಿದ್ದು ತನ್ನದೇ ಓಣಿಯ ಸ್ವಪ್ನಾ ಬಾಳಪ್ಪ ಕ್ಯಾತನ ಎಂಬುವಳೊಂದಿಗೆ ಪ್ರೀತಿ ಮಾಡಿ ಸಲುಗೆಯಿಂದ ಇದ್ದನು. ಈ ಬಗ್ಗೆ ಅವಳ ಮನೆಯವರು ಸುನೀಲಗೆ ಹಿರಿಯ ಮುಖಾಂತರ ಎಚ್ಚರಿಕೆ ನೀಡಿದ್ದರು. ಸ್ವಪ್ನಾಳ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಂತೆ ತಾಕೀತು ಮಾಡಿದ್ದರು. ಆ ಪ್ರಕಾರ ಸುನೀಲ ಕೂಡ ದೂರ ಇದ್ದನು. ಆದರೂ, ಸ್ವಪ್ನಾಳ ಮನೆಯವರು ಸುನೀಲಗೆ ಹೊಡೆದು ಖಲಾಸ್‌ ಮಾಡುತ್ತೇವೆಂದು ತಿರುಗಾಡುತ್ತಿದ್ದರು.

ಕೈಕಾಲು ಕಟ್ಟಿ ಹಲ್ಲೆ:
ಜ. 9ರಂದು ಓಣಿಯ ಸಚಿನ ಅಶೋಕ ಅವಧಿ ಎಂಬಾತ ಸುನೀಲನನ್ನು ಪೆಟ್ರೋಲ್‌ ತೆಗೆದುಕೊಂಡು ಬರೋಣ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಳಪ್ಪ ಮುಕುಂದು ಕ್ಯಾತನ್‌, ರಾಘವೇಂದ್ರ ಬಾಳಪ್ಪ ಕ್ಯಾತನ್‌ ಹಾಗೂ ದೀಪಕ ಧರೆಪ್ಪ ಕ್ಯಾತನ ಇವರು ಮೋಟರ್‌ ಸೈಕಲ್‌ ಮೇಲೆ ಬಂದು ಸುನೀಲನನ್ನು ಅಡ್ಡಗಟ್ಟಿ ಆತನನ್ನು ಕರೆದುಕೊಂಡು ಮಹೇಶ ಕ್ಯಾತನ ತೋಟಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸುನೀಲಗೆ ಕೈಕಾಲು ಕಟ್ಟಿ ಕಬ್ಬೀಣದ ರಾಡ್‌ನಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬಳಿಕ ಸುನೀಲನನ್ನು ಆತನ ಮನೆಗೆ ತಂದು ಬಿಟ್ಟಿದ್ದು, ಗಾಯಗೊಂಡ ಸುನೀಲನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ 291 ಶೋಗಳನ್ನು ಕಳೆದುಕೊಂಡ 'ವಾರಿಸು'.

Sun Jan 15 , 2023
ಈ ಸಿನಮಾ ರಂಗದಲ್ಲಿ ಒಂದು ಚಿತ್ರ ಹಿಟ್ ಆದರೆ ಅದರ ಹಿಂದೆ ಶ್ರಮ ಪಟ್ಟವರ ಹೆಸರುಗಳು ಕೇಳಿ ಬರುತ್ತವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅದೇ ಚಿತ್ರ ಸೋಲುವುದಿರಲಿ, ಜಸ್ಟ್ ಶೋಗಳನ್ನು ಕಳೆದುಕೊಂಡರೂ ಸಾಕು ಅದಕ್ಕೆ ಅನೇಕ ಕಾರಣಗಳು ಹುಟ್ಟಿಕೊಳ್ಳುತ್ತವೆ ಅಂತ ಹೇಳಬಹುದು. ತಮಿಳು ನಟ ವಿಜಯ್ (Vijay) ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು  ಚಿತ್ರ ಈಗಾಗಲೇ ದೇಶಾದ್ಯಂತ ಬಿಡುಗಡೆಯಾಗಿದ್ದು, ವಾರಿಸು ಚಿತ್ರವು ಜನವರಿ 11 ರಂದು ಚಿತ್ರಮಂದಿರಗಳಲ್ಲಿ […]

Advertisement

Wordpress Social Share Plugin powered by Ultimatelysocial