ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪೈಕಿ ವಿಜಯಪುರವೂ ಒಂದು.

ವಿಜಯಪುರ, ಫೆಬ್ರವರಿ 10: ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪೈಕಿ ವಿಜಯಪುರವೂ ಒಂದು. ವಿಜಯಪುರ ಜಿಲ್ಲೆಯ ಐತಿಹಾಸಿಕ ಮಹತ್ವವನ್ನೂ ಹೊಂದಿದೆ. ವಿಜಯಪುರವನ್ನು ಗುಮ್ಮಟ ನಗರಿ ಎಂದು ಕರೆಯುವುದೂ ಉಂಟು. ಈ ಐತಿಹಾಸಿಕ ನಗರಕ್ಕೆ ಅಡಿಪಾಯವು 10 ನೇ ಮತ್ತು 11 ನೇ ಶತಮಾನದ ನಡುವಿನ ಕಲ್ಯಾಣಿಯ ಚಾಲುಕ್ಯ ರಾಜವಂಶದ ಆಳ್ವಿಕೆಯಲ್ಲಿ ಹಾಕಲ್ಪಟ್ಟಿತು.

ಅವರು ಅದನ್ನು ವಿಜಯಪುರ ಎಂದು ಕರೆದರು. ಆದಿಲ್ ಶಾಹಿ ರಾಜವಂಶದ ಅಡಿಯಲ್ಲಿ ವಿಜಯಪುರವು ವಾಸ್ತುಶಿಲ್ಪದ ಪ್ರಮುಖ ಕೇಂದ್ರವಾಗಿ ವಿಜೃಂಭಿಸಿತು.

ಆದಿಲ್ ಶಾಹಿಗಳು ವಾಸ್ತುಶಿಲ್ಪ ಕಟ್ಟಡಗಳ ನಿರ್ಮಾಣವನ್ನು ಪ್ರೋತ್ಸಾಹಿಸಿದರು. ವಿಜಯಪುರವು 50 ಕ್ಕೂ ಹೆಚ್ಚು ಮಸೀದಿಗಳು, 20 ಕ್ಕೂ ಹೆಚ್ಚು ಗೋರಿಗಳು ಮತ್ತು ಹಲವಾರು ಅರಮನೆಗಳನ್ನು ಹೊಂದಿದೆ. ವಿಜಯಪುರವು ಮುಖ್ಯವಾಗಿ ಗೋಲ್-ಗುಂಬಜ್, ಜುಮ್ಮಾ ಮಸೀದಿ, ಬಾರಾ ಕಮಾನ್, ಗಜಾನನ ದೇವಾಲಯ, ಇಬ್ರಾಹಿಂ ರೋಜಾ, ತಾಜ್ ಬಾವಡಿ, ಮಲಿಕ್-ಎ-ಮೈದಾನ, ಮೆಥಾರ್ ಮಹಲ್, ಗಗನ್ ಮಹಲ್, ಜಲ ಮಂಜಿಲ್, ಉಪ್ಲಿ ಬುರ್ಜ್, ಶಿವಗಿರಿ, ಸಿದ್ದೇಶ್ವರ ದೇವಸ್ಥಾನ ಇತ್ಯಾದಿಗಳಿಗೆ ಪ್ರಸಿದ್ಧವಾಗಿದೆ.

ಈ ಜಿಲ್ಲೆಯ ಉತ್ತರದಲ್ಲಿ ಮಹಾರಾಷ್ಟ್ರದ ಸೋಲಾಪುರ ಮತ್ತು ವಾಯುವ್ಯದಲ್ಲಿ ಸಾಂಗಲಿ ಜಿಲ್ಲೆಗಳಿವೆ. ಪಶ್ಚಿಮದಲ್ಲಿ ಬೆಳಗಾವಿ ಜಿಲ್ಲೆ, ದಕ್ಷಿಣದಲ್ಲಿ ಬಾಗಲಕೋಟೆ, ಪೂರ್ವದಲ್ಲಿ ಗುಲ್ಬರ್ಗಾ ಮತ್ತು ಆಗ್ನೇಯದಲ್ಲಿ ರಾಯಚೂರು ಜಿಲ್ಲೆಗಳು ಸುತ್ತುವರಿದಿವೆ. ನವೆಂಬರ್ 1, 2014 ರಂದು ನಗರವನ್ನು ಬಿಜಾಪುರದಿಂದ ‘ವಿಜಯಪುರ’ ಎಂದು ಮರುನಾಮಕರಣ ಮಾಡಲಾಯಿತು. ವಿಜಯಪುರ ಜಿಲ್ಲೆ ಕರ್ನಾಟಕದ ಬೆಳಗಾವಿ ವಿಭಾಗಕ್ಕೆ ಸೇರಿದೆ. ಇದು ಎರಡು ಉಪವಿಭಾಗಗಳಿಂದ ಕೂಡಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲೂಕನ್ನು ಒಳಗೊಂಡಿದೆ. ಇಂಡಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲೂಕನ್ನು ಒಳಗೊಂಡಿದೆ.

ವಿಜಯಪುರ ಜಿಲ್ಲೆಯ ಅಂಕಿಅಂಶಗಳುವಿಸ್ತೀರ್ಣ: 12,805 ಚ.ಕಿ.ಮೀ
ಕಂದಾಯ ವಿಭಾಗಗಳ ಸಂಖ್ಯೆ: 2
ತಾಲೂಕುಗಳ ಸಂಖ್ಯೆ: 13
ಹೋಬಳಿಗಳ ಸಂಖ್ಯೆ: 20
ಗ್ರಾಮ ಪಂಚಾಯಿತಿಗಳ ಸಂಖ್ಯೆ: 213
ಗ್ರಾಮಗಳ ಸಂಖ್ಯೆ: 692
ಒಟ್ಟು ಜನಸಂಖ್ಯೆ: 21,77,331

ವಿಜಯಪುರ ಜಿಲ್ಲೆಯ ಅವಶ್ಯಕತೆಗಳೇನು?

ವಿಜಯಪುರ ಜಿಲ್ಲೆಯು ಐತಿಹಾಸಿಕವಾಗಿ ಮಹತ್ವವನ್ನೂ ಪಡೆದಿದ್ದರೂ, ಇಲ್ಲಿ ಜ್ವಲಂತ ಸಮಸ್ಯೆಗಳಿವೆ. ಇದು ಕರ್ನಾಟಕದ ಹಿಂದುಳಿದ ಜಿಲ್ಲೆಯೆಂದೇ ಪರಿಗಣಿಸಲ್ಪಟ್ಟಿದೆ. ಫೆಬ್ರವರಿ 10ರಂದು ವಿಧಾನಸಭೆ ಕಲಾಪ ಆರಂಭವಾಗಲಿದೆ. ಫೆಬ್ರವರಿ 17ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಈ ಬಜೆಟ್‌ ವಿಜಯಪುರ ಜನರಿಗೆ ಬಹಳ ನಿರೀಕ್ಷೆ ಇದೆ. ಮುಖ್ಯವಾಗಿ ಈ ಜಿಲ್ಲೆಯ ಅವಶ್ಯಕತೆಗಳೇನು? ಜನರ ಬಯಸುತ್ತಿರುವುದೇನು? ಎಂಬುದನ್ನು ತಿಳಿಯೋಣ.

ಕೃಷ್ಣಾ ಮೇಲ್ದಂಡೆ ಯೋಜನೆ

ವಿಜಯಪುರ ಜಿಲ್ಲೆಯಲ್ಲಿ ಪ್ರಮುಖವಾಗಿ ಕೃಷ್ಣಾ ನದಿ ಹರಿಯುತ್ತದೆ. ಇದಕ್ಕೆ ಅಡ್ಡಲಾಗಿ ಆಲಮಟ್ಟಿ ಜಲಾಯಶಯವನ್ನು ನಿರ್ಮಿಸಲಾಗಿದೆ. ಆದರೆ, ಈ ಬೃಹತ್ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ಇಲ್ಲಿನ ಜನರ ಒತ್ತಾಯವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣವನ್ನು ಒದಗಿಸಬೇಕಿದೆ. ಯುಕೆಪಿ-3ನೇ ಹಂತದ ಕಾಮಗಾರಿಗೆ ಚಾಲನೆ ನೀಡಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬೇಕಿದೆ. ಬರದ ನಾಡಾದ ವಿಜಯಪುರದ ಲಕ್ಷಾಂತರ ಎಕರೆ ಜಮೀನಿಗೆ ಈ ಯೋಜನೆಯಿಂದ ನೀರು ಬರಲಿದೆ. ಹೀಗಾಗಿ, ಬೊಮ್ಮಾಯಿ ಸರ್ಕಾರ ಈ ಯೋಜನೆಗೆ ಹಣವನ್ನು ನೀಡಬೇಕು ಎಂಬುದು ಇಲ್ಲಿನ ಜನರ ಮಹದಾಸೆಯಾಗಿದೆ.

ವೈದ್ಯಕೀಯ ಕಾಲೇಜಿನ ಕೊರತೆ

ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕೊರತೆ ಇದೆ. ಇಲ್ಲಿ ಬಿಎಲ್‌ಡಿ ವೈದ್ಯಕೀಯ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಆದರೆ, ಅದು ಖಾಸಗಿ ವೈದ್ಯಕೀಯ ಕಾಲೇಜು. ಈ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡಬೇಕೆಂಬುದು ಜನರ ಬಯಕೆಯಾಗಿದೆ. ಕಳೆದ ಬಜೆಟ್‌ಗಳಲ್ಲಿ ವೈದ್ಯಕೀಯ ಕಾಲೇಜನ್ನು ಘೋಷಣೆ ಮಾಡಲಾಗುತ್ತದೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ, ಅವರ ಆಸೆ ಈಡೇರಿರಲಿಲ್ಲ.

ಗೋಳಗುಮ್ಮಟ, ಮಹಿಳಾ ವಿವಿ ಅಭಿವೃದ್ಧಿಗೆ ಹಣ ಬೇಕು

ವಿಶ್ವವಿಖ್ಯಾತ ಗೋಳಗುಮ್ಮಟಕ್ಕೆ ಪ್ರತಿ ವರ್ಷ ಸಾವಿರಾರು ವಿದೇಶ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಮಾರಕವು ಹಲವಾರು ಮೂಲಭೂತ ಸೌಕರ್ಯಗಳ ಕೊರೆಯನ್ನು ಅನುಭವಿಸುತ್ತಿದೆ. ಮೈಸೂರು ಅರಮನೆ ರೀತಿಯಲ್ಲಿ ಈ ಸ್ಮಾರಕಕ್ಕೆ ಹಣ ಒದಗಿಸಿ ಇದನ್ನು ವಿಶ್ವ ವಿಖ್ಯಾತ ಪರಂಪರೆಗಳ ಪಟ್ಟಿಗೆ ಸೇರಿಸಬೇಕೆಂಬುದು ಇಲ್ಲಿ ಜನರ ಒತ್ತಾಯವಾಗಿದೆ. ಇನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಈ ವಿಶ್ವವಿದ್ಯಾಲಯದಲ್ಲಿ ಉನ್ನತ ಪಟ್ಟದ ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಹೀಗಾಗಿ, ಈ ವಿಶ್ವವಿದ್ಯಾಯವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಹಣ ಬೇಕಿದೆ. ಈ ಬಜೆಟ್‌ನಲ್ಲಿ ಜನರು ವಿಶೇಷ ಅನುದಾನವನ್ನು ನಿರೀಕ್ಷಿಸಿದ್ದಾರೆ.

ತಗ್ಗಬೇಕಿದೆ ನಿರುದ್ಯೋಗ ಸಮಸ್ಯೆ

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಶಿಕ್ಷಣ ಹೊಂದಿರುವ ಸಾವಿರಾರು ಯುವಕ ಯುವತಿಯರು ಬೆಂಗಳೂರು, ಪುಣೆಯಂತಹ ಮಹಾನಗರಿಗಳಿಗೆ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಬಿಟ್ಟರೆ, ಬೃಹತ್‌ ಕೈಗಾರಿಕೆಗಳಿಲ್ಲ. ಹೀಗಾಗಿ, ನಿರುದ್ಯೋಗಕ್ಕೆ ಪರಿಹಾರ ಕಂಡುಕೊಳ್ಳಲು ಬೃಹತ್‌ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕಿದೆ. ಸರ್ಕಾರ ಈ ಕೈಗಾರಿಕೆಗಳಿಗೆ ಹಣ ಒದಗಿಬೇಕೆಂದು ಜನರು ಬಯಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿ ವೇತನ\ಶುಲ್ಕ ಮರುಪಾವತಿಗಾಗಿ ಎಸ್‌ಎಸ್ ಸಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ

Mon Feb 13 , 2023
  ಬೆಂಗಳೂರು : 2022-23ನೇ ಸಾಲಿಗೆ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ\ವಿದ್ಯಾರ್ಥಿನಿಯರು ವಿವಿಧ ವಿದ್ಯಾರ್ಥಿ ವೇತನ\ಶುಲ್ಕ ಮರುಪಾವತಿಗಾಗಿ ಎಸ್‌ಎಸ್ ಸಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.   2022-23ನೇ ಸಾಲಿನಿಂದ ಸಂಚಿಹೊನ್ನಮ್ಮ ಮತ್ತು ಸರ್.ಸಿ.ವಿ.ರಾಮನ್ ವಿದ್ಯಾರ್ಥಿ ವೇತನ,ಆದಾಯ ಮಿತಿ ರೂ.2.50 ಲಕ್ಷಕ್ಕಿತ ಹೆಚ್ಚು ಇರುವ ಎಸ್‌.ಸಿ ಎಸ್.ಟಿ ವಿದ್ಯಾರ್ಥಿಗಳು ಮತ್ತು ಸೈನಿಕ ಸಿಬ್ಬಂದಿ ಮಕ್ಕಳ ಶುಲ್ಕ ಮರುಪಾವತಿ ಯೋಜನೆಯನ್ನು […]

Advertisement

Wordpress Social Share Plugin powered by Ultimatelysocial