ವಿಕ್ರಾಂತ್‌ ರೋಣ ದಾಖಲೆ? ಮೊದಲ ದಿನದ ಟಿಕೆಟ್ ಸೋಲ್ಡ್​ ಔಟ್​!

 

ಅದ್ದೂರಿಯಾಗಿ ಬಿಡುಗಡೆ ಆಗುತ್ತಿರುವ ‘ವಿಕ್ರಾಂತ್​ ರೋಣ’ ಸಿನಿಮಾ ವಿಶ್ವಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಈ ಸಿನಿಮಾ ರಿಲೀಸ್​ ಆಗುತ್ತಿದ್ದು, ಮೊದಲ ದಿನದ ಎಲ್ಲಾ ಟಿಕೆಟ್‌ ಗಳು ಸೋಲ್ಡ್‌ ಆಗಿವೆ ಎಂದು ಹೇಳಲಾಗಿದೆ.

ಕರ್ನಾಟಕದ ಎಲ್ಲೆಡೆ ಕಿಚ್ಚ ಸುದೀಪ್​ ಅಭಿಮಾನಿಗಳು ಈ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ದಿನದ ಎಲ್ಲಾ ಟಿಕೆಟ್‌ ಗಳು ಮುಂಗಡ ಬುಕ್ಕಿಂಗ್‌ ಆಗಿದ್ದು ಸೋಲ್ಡ್‌ ಔಟ್‌ ಆಗಿದೆ.

ಜಗತ್ತಿನಾದ್ಯಂತ 3500 ಥಿಯೇಟರ್‌ ಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದ್ದು, ಗುರುವಾರ ಮುಂಜಾನೆಯೇ ಹಲವು ಕಡೆಗಳಲ್ಲಿ ‘ವಿಕ್ರಾಂತ್​ ರೋಣ’ ಅಬ್ಬರ ಆರಂಭಿಸಲಿದ್ದಾನೆ. 3ಡಿ ವರ್ಷನ್​ನಲ್ಲಿ ಈ ಚಿತ್ರ ಮೂಡಿ ಬಂದಿರುವುದರಿಂದ ಹೈಪ್​ ಹೆಚ್ಚಾಗಿದೆ. ಮೊದಲ ದಿನದ ಬಹುತೇಕ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ.

3ಡಿಯಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಭಾನುವಾರ ಮಧ್ಯಾಹ್ನದಿಂದಲೇ ‘ವಿಕ್ರಾಂತ್​ ರೋಣ’ ಸಿನಿಮಾದ ಮುಂಗಡ ಟಿಕೆಟ್​ ಬುಕಿಂಗ್​ ಆರಂಭ ಆಯಿತು.

ಸಿನಿಪ್ರಿಯರು ಮುಗಿಬಿದ್ದು ಟಿಕೆಟ್​ ಬುಕ್​ ಮಾಡುತ್ತಿದ್ದಾರೆ. ಅನೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ. ಮೊದಲ ದಿನದ ಬಹುತೇಕ ಎಲ್ಲ ಶೋಗಳು ಸಹ ಹೌಸ್​ಫುಲ್​ ಪ್ರದರ್ಶನ ಕಾಣಲಿವೆ. ವೀಕೆಂಡ್​ನಲ್ಲಿ ಈ ಚಿತ್ರ ನೋಡಲು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಥಿಯೇಟರ್​ಗೆ ಬರಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಂಕೆಯೇ ಇಲ್ಲದ ಹಂತಕರ ಆಟಕ್ಕೆ ಇತಿಶ್ರೀ ಹಾಡಿ, ಹೆಡೆಮುರಿ ಕಟ್ಟಬೇಕು ಎಂದು ಮಾಜಿ ಮುಖ್ಯಮಂತ್ರಿ

Wed Jul 27 , 2022
ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಕೊಲೆ ಅದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದ ಮೇಲೆ ರಾಜ್ಯ ಸರ್ಕಾರ ಮೈಮರೆತಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಪ್ರತಿ ಕೊಲೆ ಆದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ ರಾಜ್ಯ ಸರ್ಕಾರ, ಕೊಲೆಯೇ […]

Advertisement

Wordpress Social Share Plugin powered by Ultimatelysocial