“ಅಸಲಿ ಆಟ ಈಗ ಶುರು” ಎಂದ ವಿಕ್ರಾಂತ್ ರೋಣ; ಇಂಗ್ಲೀಷ್ ವರ್ಷನ್ ಡಬ್ಬಿಂಗ್ ಮುಗಿಸಿದ ಕಿಚ್ಚ

ದೇಶವೇ ಎದುರು ನೀಡುತ್ತಿರುವ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರವು ಇಂಗ್ಲೀಷ್ ಭಾಷೆಯಲ್ಲೂ ತೆರೆಕಾಣುತ್ತಿದೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದ ಒಂದೊಂದೇ ಮಾಹಿತಿ ಹೊರಬರುತ್ತಿದೆ.ಇದೀಗ ನಿರ್ದೇಶಕ ಅನೂಪ್ ಭಂಡಾರಿ ಹೊಸ ವಿಚಾರವೊಂದನ್ನು ತಿಳಿಸಿದ್ದಾರೆ.ಅದು ವಿಕ್ರಾಂತ್ ರೋಣ ಇಂಗ್ಲೀಷ್ ವರ್ಷನ್ ಡಬ್ಬಿಂಗ್ ಬಗ್ಗೆ. ಈ ಬಗ್ಗೆ ಟ್ವೀಟ್ ಮಾಡಿರುವ ಅನೂಪ್, “ಕಿಚ್ಚ ಸುದೀಪ್ ಸರ್ ಇಂಗ್ಲಿಷ್ ಆವೃತ್ತಿಗೆ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ. ಇಂಗ್ಲೀಷ್‌ನಲ್ಲಿ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಲನಚಿತ್ರಕ್ಕೆ ಡಬ್ ಮಾಡಿದ ಕನ್ನಡದ ಮೊದಲ ಸೂಪರ್‌ಸ್ಟಾರ್ ಮತ್ತು ಭಾರತದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರು” ಎಂದು ಬರೆದುಕೊಂಡಿದ್ದಾರೆ.ಇಂಗ್ಲೀಷ್ ಭಾಷೆಯಲ್ಲಿ ಸುದೀಪ್ ಡೈಲಾಗ್ಸ್ ಕಂಡು ಕಿಚ್ಚನ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂದನ್ ರಾವ್, ವಾಸುಕಿ ವೈಭವ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ.ಜ್ಯಾಕ್ ಮಂಜು- ಶಾಲಿನಿ ಮಂಜು ನಿರ್ಮಾಣದ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ವಿಕ್ರಾಂತ್ ರೋಣ’ ಚಿತ್ರವು 14 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 3D ವರ್ಷನ್‌ ನಲ್ಲಿರುವ ‘ವಿಕ್ರಾಂತ್ ರೋಣ’ ಸಿನಿಮಾ, 55 ದೇಶಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ "ಪೆದ್ರೊ" ಇಲ್ಲದ್ದಕ್ಕೆ ರಿಷಬ್‌ ಶೆಟ್ಟಿ ಬೇಸರ

Thu Mar 3 , 2022
ಬೆಂಗಳೂರು: 13ನೇ “ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಇಂದು(ಗುರುವಾರ) ಸಂಜೆ ಚಾಲನೆ ಸಿಗುತ್ತಿದೆ. ಇದರ ನಡುವೆಯೇ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ “ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ವಕ್ಕೆ ಆರಂಭದಲ್ಲಿಯೇ ವಿವಾದಗಳು ಸುತ್ತಿಕೊಂಡಿವೆ.ಸಿನಿಮೋತ್ಸವದಲ್ಲಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಅರ್ಹ ಸಿನಿಮಾಗಳನ್ನು ವಿನಾಕಾರಣ ಹೊರಗಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರ ನಡುವೆಯೇ ಈಗಾಗಲೇ ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ, ವಿಮರ್ಶಕರಿಂದ ಪ್ರಶಂಸೆ ಪಡೆದ “ಪೆದ್ರೊ’ ಸಿನಿಮಾವನ್ನು “ಬೆಂಗಳೂರು ಸಿನಿಮೋತ್ಸವ’ದಿಂದ ಹೊರಗಿಡಲಾಗಿದೆ.ಇದು […]

Advertisement

Wordpress Social Share Plugin powered by Ultimatelysocial